80 ದಿನದ ನಂತರ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಶ್ರೀಕೃಷ್ಣ

Public TV
2 Min Read
Udupi Shri Krishna Matha

ಉಡುಪಿ: ಕೊರೊನಾ ಲಾಕ್‍ಡೌನ್ ನಂತರ ಬರೋಬ್ಬರಿ 80 ದಿನಗಳ ನಂತರ ಉಡುಪಿ ಶ್ರೀಕೃಷ್ಣ ಭಕ್ತರಿಗೆ ದರ್ಶನ ನೀಡಿದ್ದಾನೆ.

Udupi Shri Krishna Matha4 medium

ಕೊರೊನಾ ಲಾಕ್‍ಡೌನ್ ಸಡಿಲಿಕೆ ನಂತರ ರಾಜ್ಯ ಸರ್ಕಾರ ವಾರದ ಹಿಂದೆ ದೇವಸ್ಥಾನ ಮಠ ಮಂದಿರಗಳನ್ನು ತೆರೆಯಬಹುದು ಎಂದಿತ್ತು. ಈ ಸಂದರ್ಭದಲ್ಲಿ ಉಡುಪಿ ಕೃಷ್ಣಮಠ ಭಕ್ತರಿಗೆ ತೆರೆದಿರಲಿಲ್ಲ. ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಒಂದು ವಾರದ ನಂತರ ಉಡುಪಿ ಕೃಷ್ಣಮಠದಲ್ಲಿ ಭಕ್ತರಿಗೆ ಅವಕಾಶ ನೀಡಲು ಪರ್ಯಾಯವನ್ನು ಅದಮಾರು ಮಠ ತೀರ್ಮಾನಿಸಿದೆ. ಭಾನುವಾರ 2 ಗಂಟೆಯಿಂದ ಸಂಜೆ 6ಗಂಟೆ ತನಕ ಮಠದ ಒಳಗೆ ಭಕ್ತರಿಗೆ ಪ್ರವೇಶ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಜಿಮ್‍ನಲ್ಲಿ ಜಿದ್ದಿಗೆ ಬಿದ್ದ ಪಾಂಡ್ಯ ಸಹೋದರರು

ಮಹಾಮಾರಿ ಕೊರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ, ರಾಜ್ಯ ಸರ್ಕಾರ ಅನ್ಲಾಕ್‍ಗಳನ್ನು ಮಾಡುತ್ತಿದೆ. ಹೊರಜಿಲ್ಲೆಯ ಹೊರರಾಜ್ಯದ ಧಾರ್ಮಿಕ ಪ್ರವಾಸಿಗರು ಇಂದು ರಥಬೀದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಸರತಿ ಸಾಲಿನಲ್ಲಿ ನಿಂತು ಕಡೆಗೋಲು ಶ್ರೀಕೃಷ್ಣನ ದರ್ಶನ ಮಾಡಿದರು. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

Udupi Shri Krishna Matha4 1 medium

ಉಡುಪಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಬಿಟ್ಟೂಬಿಡದೇ ಮಳೆ ಸುರಿಯುತ್ತಿದೆ. ಮಳೆಯ ನಡುವೆಯೇ ಹೊರ ರಾಜ್ಯದ ಹೊರ ಊರಿನ ಭಕ್ತರು ಬಂದು ಕೃಷ್ಣ ದೇವರ ದರ್ಶನವನ್ನು ಮಾಡಿದರು. ವಿಪರೀತ ಮಳೆ ಸುರಿಯುತ್ತಿರುವುದರಿಂದ ಭಕ್ತರು ರಥಬೀದಿಯಲ್ಲಿ ಓಡಾಟ ಮಾಡಲು ಪರದಾಡಿದರು.

ಲಾಕೌಡೌನ್ ಆದ ನಂತರ ಉಡುಪಿ ಕೃಷ್ಣ ಮಠ ಓಪನ್ ಆಗಿರಲಿಲ್ಲ. ಇದೀಗ ಮನಸ್ಸಿಗೆ ಬಹಳ ಖುಷಿ, ನೆಮ್ಮದಿ ಆಗುತ್ತಿದೆ. ಬೆಂಗಳೂರಿನಿಂದ ಹೊರಟು ಉಡುಪಿಗೆ ಬರುವತನಕ ನಿರಂತರ ಮಳೆ ಬರುತ್ತಿದೆ. ಮಳೆಯಿಂದ ಓಡಾಡಲಿಕ್ಕೆ ಬಹಳ ಕಷ್ಟ ಆಗುತ್ತಿದೆ ಎಂದು ಯಾತ್ರಿಕರೊಬ್ಬರು ಹೇಳಿದರು.

Udupi Shri Krishna Matha8 medium

ಪ್ರವಾಸಿತಾಣಗಳನ್ನು ದೇವಸ್ಥಾನಗಳನ್ನು ಓಪನ್ ಮಾಡಿರುವುದು ಬಹಳ ಖುಷಿಯಾಗಿದೆ. ಗೃಹ ಬಂಧನದಿಂದ ಹೊರಗೆ ಬಂದಂತಹ ಅನುಭವ ಸಿಕ್ತಾ ಇದೆ. ನಮಗೆ ಮೂರನೇ ಅಲೆಯ ಬಗ್ಗೆ ಬಹಳ ಆತಂಕ ಇದೆ. ತಜ್ಞರು ಸರ್ಕಾರ ಕೂಡ ಇದನ್ನೇ ಹೇಳುತ್ತಿದ್ದಾರೆ. ಹಾಗಾಗಿ ಜನ ಸರ್ಕಾರ ಹೇಳಿರುವ ಎಲ್ಲ ಮುಂಜಾಗೃತ ಕ್ರಮ ತೆಗೆದುಕೊಳ್ಳಲೇಬೇಕು. ವಾರದ ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಅದನ್ನು ವಿಸ್ತರಿಸುವ ಸಾಧ್ಯತೆ ಇದೆ. ಬೆಳಗಿನ ಹೊತ್ತಿನಲ್ಲಿ ಒಂದೆರಡು ಗಂಟೆ ಮಠ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಕೃಷ್ಣಭಕ್ತ ಅಭಿಲಾಷ್ ಚೌಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *