ಎಂದೂ ನೀವಿಲ್ಲವೆಂದುಕೊಂಡಿಲ್ಲ, ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ – ಅನಿರುದ್ಧ್

Public TV
2 Min Read
anirudh vishnu

– ‘ಯಜಮಾನ’ನನ್ನು ನೆನಪಿಸಿಕೊಂಡ ಸ್ಯಾಂಡಲ್‍ವುಡ್ ತಾರೆಯರು

ಬೆಂಗಳೂರು: ಇಂದು ಕನ್ನಡ ನಾಡು ಕಂಡ ಅದ್ಭುತ ನಟ ಸಾಹಸ ಸಿಂಹ್ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಅನಿರುದ್ಧ್ ಸೇರಿದಂತೆ ಸಿನಿ ರಂಗದ ಕಲಾವಿದರು ವಿಷ್ಣುವರ್ಧನ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ ನಮ್ಮನ್ನು ಆಗಲಿ 9 ವರ್ಷಗಳಾಗಿವೆ. ಅವರ ನೆನಪಿಗಾಗಿ ರಾಜ್ಯ ಸರ್ಕಾರ ಮೈಸೂರಿನಲ್ಲಿ ಅವರ ಪುಣ್ಯಸ್ಮಾರಕವನ್ನು ನಿರ್ಮಾಣ ಮಾಡುತ್ತಿದೆ. ಇಂದು ಅವರ ಹುಟ್ಟುಹಬ್ಬದಂದು ಸಾವಿರಾರು ಅಭಿಮಾನಿಗಳು ಅವರನ್ನು ನೆನೆದಿದ್ದಾರೆ.

https://www.facebook.com/Anirudhofficialpage/posts/394677755265796

ವಿಷ್ಣು ಅವರ ಹುಟ್ಟುಹ್ಬದ ಪ್ರಯುಕ್ತ ಫೇಸ್‍ಬುಕ್ ಪೋಸ್ಟ್ ಹಾಕಿರುವ ಅನಿರುದ್ಧ್, ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು. ಅವರ ಸರಳತನ, ನಿಷ್ಕಲ್ಮಶ ಮನಸ್ಸು, ಮುಗ್ಧತೆ, ಔದಾರ್ಯ, ಸಜ್ಜನಿಕೆ, ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಫೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತರಾಗುವವರೆಂದರೆ ನನಗೆ ಅದು ನೀವೇ. ಎಂದೂ ನೀವಿಲ್ಲವೆಂದುಕೊಂಡಿಲ್ಲ. ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ. ಜನ್ಮದಿನವಿಂದು ಚಿಕ್ಕವನು ನಾನು ನಾನೇನನು ಹೇಳಲಿ. ಎಲ್ಲರಿಗೂ ನಿಮ್ಮ ಆಶೀರ್ವಾದವಿರಲಿ. ಎಂದಿನಂತೆ ಕೈ ಹಿಡಿದು ಮುನ್ನಡೆಸಿ ಎಂದಿದ್ದಾರೆ.

Kichcha Sudeep Vishnuvardhan

ನಿನ್ನೆ ವಿಷ್ಣು ಅವರ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದ ನಟ ಸುದೀಪ್ ಅವರು, ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನಾನು ಅವರ ಹುಟ್ಟು ಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡುತ್ತಿರುವುದು ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ ಎಂದು ಟ್ವೀಟ್ ಮಾಡಿದ್ದರು.

ಇಂದು ವಿಷ್ಣುವರ್ಧನ್ ಅವರ ಜೊತೆ ಇರುವ ತನ್ನ ಬಾಲ್ಯದ ಫೋಟೋ ಹಂಚಿಕೊಂಡಿರುವ ಪುನೀತ್ ಅವರು, ಅವರ 70ನೇ ಹುಟ್ಟುಹಬ್ಬದಂದು ವಿಷ್ಣು ಸರ್ ಅವರನ್ನು ನೆನೆಯುತ್ತಾ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಡಾಲಿ ಧನಂಜಯ್ ಅವರು ಟ್ವೀಟ್ ಮಾಡಿ, ನಮ್ಮಲ್ಲಿ ಎಂದಿಗೂ ನೀವು ಶಾಶ್ವತ, ಅವರ ಹುಟ್ಟುಹಬ್ಬದಂದು ವಿಷ್ಣುದಾದನನ್ನು ನೆನೆಯುತ್ತಾ ಎಂದು ಬರೆದುಕೊಂಡಿದ್ದಾರೆ.

ಇವರ ಜೊತೆಗೆ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ, ನೀವು ನಮ್ಮ ಚಿತ್ರರಂಗದಲ್ಲಿ ಓರ್ವ ಶ್ರೇಷ್ಠ ನಟನಾಗಿ ಉಳಿದುಕೊಂಡಿದ್ದೀರಿ. ನಮ್ಮ ಮನಸ್ಸಿನಲ್ಲಿ ನೀವು ಯಾವಾಗಲೂ ಉಳಿಯುತ್ತೀರಾ ವಿಷ್ಣುವರ್ಧನ್ ಸರ್. ಅಭಿನಯ ಭಾರ್ಗವ, ಸಾಹಸಸಿಂಹ, ಪ್ರೀತಿಯ ವಿಷ್ಣುದಾದ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಹಿರಿಯ ನಟಿ ಮಾಳವಿಕಾ ಅವಿನಾಶ್, ನಟ ವಸಿಷ್ಠ ಸಿಂಹ, ನಟಿ ಮಾನ್ವಿತಾ ಸೇರಿದಂತೆ ಹಲವು ಅಭಿಮಾನಿಗಳು ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *