ಧಾರವಾಡ: ಸಾಮಾನ್ಯವಾಗಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡರೆ ಹೊಸ ನೋಟುಗಳು ಬರುತ್ತವೆ. ಆದರೆ ಧಾರವಾಡದ ಎಟಿಎಂ ಒಂದರಲ್ಲಿ ತುಕ್ಕು ಹಿಡಿದ ನೋಟು ಬರುತ್ತಿವೆ.
ಅದೂ 100 ಹಾಗೂ 500 ರೂ. ನೋಟಲ್ಲ, ಬದಲಾಗಿ ಎರಡು ಸಾವಿರದ ನೋಟುಗಳು. ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಎಸ್‍ಬಿಐ ಎಟಿಎಂನಲ್ಲಿ ಈ ನೋಟುಗಳು ಬಂದಿದ್ದರಿಂದ ಡ್ರಾ ಮಾಡಿದ ವ್ಯಕ್ತಿ ಹೌಹಾರಿದ್ದಾನೆ. ಗೌಸ್ ನವಲೂರ ಎಂಬ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಈ ಎಸ್‍ಬಿಐ ಎಟಿಎಂನಲ್ಲಿ 10 ಸಾವಿರ ರೂಪಾಯಿ ಡ್ರಾ ಮಾಡಿದ್ದರು.
ಆದರೆ ಅವುಗಳು ಕಲರ್ ಕಲರ್ ಆಗಿದ್ದನ್ನು ನೋಡಿ, ಚೆಕ್ ಮಾಡಿದ್ರೆ ತುಕ್ಕು ಹಿಡಿದ ಕಬ್ಬಿಣದಂತೆ ನೋಟಿನ ಮೇಲೆ ಬಣ್ಣ ಹತ್ತಿದೆ. ಆಸ್ಪತ್ರೆಗೆ ಹಣ ಬೇಕು ಎಂದು ಡ್ರಾ ಮಾಡಿದ್ದ ಈ ವ್ಯಕ್ತಿಗೆ ಬೇರೆ ಕಡೆ ಹೋಗಿ ನೋಟು ಬದಲಾವಣೆ ಮಾಡಲು ಅವಕಾಶ ಇರಲಿಲ್ಲ. ಹೀಗಾಗಿ ಈ ರೀತಿಯ ನೋಟು ಬಂದಿದ್ದರಿಂದ ಈ ವ್ಯಕ್ತಿ ಪರದಾಟ ನಡೆಸಬೇಕಾಯಿತು. ಅದಕ್ಕೆ ಈ ರೀತಿಯ ನೋಟು ಹಾಕುವವರು ನೋಡಿ ಎಟಿಎಂನಲ್ಲಿ ಹಾಕಬೇಕು. ಇಲ್ಲದೇ ಇದ್ದಲ್ಲಿ ತುರ್ತು ಪರಿಸ್ಥಿತಿ ಇದ್ದವರಿಗೆ ಇದು ದೊಡ್ಡ ಕಷ್ಟ ಎಂದು ಹೇಳಿದ್ದಾರೆ.