ಎಂಎಲ್‍ಸಿ ಸ್ಥಾನದಿಂದ ಯೋಗೇಶ್ವರ್ ವಜಾಗೊಳಿಸಿ: ಎಸ್.ಎಸ್ ಪೊನ್ನಣ್ಣ ಆಗ್ರಹ

Public TV
1 Min Read
MDK 4

ಮಡಿಕೇರಿ: ವಿಧಾನ ಪರಿಷತ್‍ಗೆ ಬಿಜೆಪಿಯ ಸಿ.ಪಿ. ಯೋಗೇಶ್ವರ್ ನೇಮಕ ಸಂವಿಧಾನ ಬಾಹಿರವಾಗಿದ್ದು, ಅವರನ್ನು ಎಂಎಲ್‍ಸಿ ಸ್ಥಾನದಿಂದ ವಾಪಸ್ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎಸ್.ಎಸ್. ಪೊನ್ನಣ್ಣ ಆಗ್ರಹಿಸಿದ್ದಾರೆ.

YOGESHWAR

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ನೇಮಕ ಸಂವಿಧಾನ ಬಾಹಿರವಾಗಿದೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ಹಲವು ದಿನಗಳು ಕಳೆದಿವೆ. ಆದರೆ ಇದೂವರೆಗೆ ಪ್ರತ್ಯುತ್ತರ ಬಂದಿಲ್ಲ. ಮೆಗಾ ಸಿಟಿ ಯೋಜನೆ ಮೂಲಕ ಯೋಗೇಶ್ವರ್ ಬಹುಕೋಟಿ ಹಗರಣ ಮಾಡಿದ್ದಾರೆ. ಅದರಡಿಯಲ್ಲಿ ವಂಚನೆ ಸೇರಿದಂತೆ 9ಕ್ಕೂ ಹೆಚ್ಚು ಚಾರ್ಜ್ ಶೀಟ್ ಸಲ್ಲಿಕೆಯಾಗಿವೆ ಎಂದರು.

MDK 1 1

ಆರ್ಟಿಕಲ್ 171 ಅಡಿಯಲ್ಲಿ ಯೋಗೇಶ್ವರ್ ಅವರ ನಾಮನಿರ್ದೇಶನವನ್ನು ವಾಪಸ್ ಪಡೆಯಬೇಕು. ಯೋಗೇಶ್ವರ್ ಅವರನ್ನು ಯಾವ ವಿಶೇಷ ಜ್ಞಾನದ ಮೇಲೆ ನಾಮನಿರ್ದೇಶನ ಮಾಡಲಾಗಿದೆ?. ಬಹುಕೋಟಿ ಹಗರಣದ ಅರೋಪ ಅವರ ಮೇಲೆ ಈಗಲೂ ಇದೆ. ಈಗಾಗಲೇ ಅವರದನ್ನು ಜನರೇ ಯೋಗೇಶ್ವರ್ ಅವರನ್ನು ಸೋಲಿಸಿದ್ದಾರೆ. ಈ ಎಲ್ಲಾ ಪ್ರಕರಣಗಳನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *