ಉಡುಪಿ: ಮಂಗಳೂರಿನ ಎಂಆರ್‌ಪಿಎಲ್ ಕಂಪನಿಯ ಟಗ್ ದೋಣಿ ಮುಳುಗಿರುವ ಘಟನೆಗೆ ಸಂಬಂಧಿಸಿದಂತೆ 9 ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕರಾವಳಿ ಕಾವಲುಪಡೆ ಪೊಲೀಸರ ತಂಡ ಕೂಡಾ ರಕ್ಷಣಾ ಕೆಲಸದಲ್ಲಿ ಕೈಜೋಡಿಸಿದ್ದಾರೆ.
ಬೋಟ್ ನಲ್ಲಿವರ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಸತತ 8 ಗಂಟೆಯಿಂದ ಟ್ಯೂಬ್ ನಲ್ಲಿ ಈಜಿ ಜೀವ ಉಳಿಸಿಕೊಂಡ ಇಬ್ರು ಉಡುಪಿಯ ಪಡುಕೆರೆ ಮಟ್ಟು ಕೊಪ್ಲಕ್ಕೆ ಬಂದಿದ್ದಾರೆ. ಬದುಕುಳಿದವರನ್ನು ಮೊಮಿರುಲ್ ಮುಲ್ಲಾ, ಕರೀಮುಲ್ಲಾ ಶೇಕ್ ಎಂದು ಗುರುತಿಸಲಾಗಿದೆ.
Advertisement
Advertisement
ಈ ನಡುವೆ ಮಗುಚಿಬಿದ್ದ ಟಗ್ ಬೋಟಿನಲ್ಲಿದ್ದ ಒಬ್ಬ ವ್ಯಕ್ತಿಯದ್ದು ಎನ್ನಲಾದ ಶವಪತ್ತೆಯಾಗಿದೆ. ಹೇಮಚಂದ್ರ ಜಾ ಎಂಬಾತನ ಶವ ಪಡುಬಿದ್ರೆಯಲ್ಲಿ ಸಿಕ್ಕಿದೆ. ಒಟ್ಟು ಒಂಬತ್ತು ಜನರು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿಯಿದೆ. ದಡ ಸೇರಿದ ಇಬ್ಬರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡಕ್ಕೆ ಯುವಕ ಬಂದು ತಲುಪಿದ್ದಾನೆ. ನಸೀಮ್ ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡಕ್ಕೆ ಬದುಕಿ ಬಂದವನು. ಹರಿಯಾಣ ಮೂಲದ ನಸೀಮ್ ಮಂಗಳೂರು ಎಂಆರ್ ಪಿಎಲ್ ಕಂಪನಿಯ ನೌಕರನಾಗಿದ್ದು, ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭ ನೀರುಪಾಲಾಗಿದ್ದರು.
Advertisement
ಸದ್ಯ ಬೋಟ್‍ನಲ್ಲಿ ಸುರಕ್ಷಿತವಾಗಿರುವ 9 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನ ಮಾಡುತ್ತಿದೆ. ಸೆಲ್ಫಿ ವಿಡಿಯೋ ಮಾಡಿ ರಕ್ಷಣೆಗೆ ಮೊರೆ ಹೋಗಿದ್ದಾರೆ. ಕರಾವಳಿ ಕಾವಲುಪಡೆ ಪೊಲೀಸರಿಗೆ ವೀಡಿಯೋ ರವಾನೆ ಮಾಡಲಾಗಿದೆ. ರಕ್ಷಣಾ ಕಾರ್ಯಚರಣೆ ಕಡಲ ಅಲೆಗಳ ಅಬ್ಬರ ಅಡ್ಡಿಯಾಗಿದೆ.
ಸಮುದ್ರ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ ಜಗದೀಶ್, ಎಸ್‍ಪಿ ಎಸ್ ವಿಷ್ಣುವರ್ಧನ್ ಭೇಟಿ ನೀಡಿದ್ದಾರೆ.