– ಸಾಮೂಹಿಕ ನಮಾಜ್‍ಗೆ ನಿಷೇಧ
ಮಂಗಳೂರು: ನಗರದ ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ವರದಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತ ಪ್ರದೇಶದಲ್ಲಿ ರ‌್ಯಾಂಡಮ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ.
ಶಾಸಕ ಯು.ಟಿ.ಖಾದರ್ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಳ್ಳಾಲದಲ್ಲಿ ಓರ್ವ ವೃದ್ಧ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದು, ಜೊತೆಗೆ ಇಬ್ಬರು ಪೊಲೀಸರು ಸೇರಿ ಐದು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಇಲ್ಲಿನ ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
Advertisement
Advertisement
ಈ ಹಿನ್ನಲೆಯಲ್ಲೇ ರ‌್ಯಾಂಡಮ್ ಟೆಸ್ಟ್ ಗೆ ನಿರ್ಧರಿಸಿದ್ದು ಉಳ್ಳಾಲದ ಮೀನುಗಾರರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಸೇರಿ ಎಲ್ಲರ ರ್ಯಾಂಡಮ್ ಟೆಸ್ಟ್ ನಡೆಸಲಾಗುವುದು. ಇದರೊಂದಿಗೆ ಸೊಂಕು ಹೆಚ್ಚಿರುವ ಪ್ರದೇಶದ ಹಲವು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಡೆಸೋದನ್ನೂ ಸ್ಥಗಿತಗೊಳಿಸಲಾಗಿದೆ.