– ನನ್ನ ಗಂಡ ಸಾಚಾ ಅಲ್ಲ
– ನಾನು ಕಳ್ಳತನ ಮಾಡಿದ್ದೀನಾ?
ಬೆಂಗಳೂರು: 25 ಕೋಟಿ ದೋಖಾ ಡೀಲ್ ಗೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು, ಉಮಾಪತಿಯವರು ಮಾಡಿದ್ದು ತಪ್ಪು. ನನ್ನನ್ನು ಬದುಕಲು ಬಿಡಿ ಎಂದು ಅರುಣಾ ಕುಮಾರಿ ಅವರು ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಇದು ಜನರಲ್ ಟಾಕ್ ಅಷ್ಟೇ. ಮಾರ್ಚ್ 30ರಿಂದ ನನಗೆ ಉಮಾಪತಿಯವರ ಜೊತೆ ಕಾಂಟ್ಯಾಕ್ಟ್ ಇದೆ. ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ ಎಂದರು.
ಅರುಣಾ ಹೇಳಿದ್ದು ಏನು?
ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದು ಸಣ್ಣ ವಿಷಯ. ಈ ಪ್ರಕರಣದಿಂದ ನನಗೆ ಅವಮಾನ ಆಗುತ್ತಿದೆ. ಒಂದು ಹೆಣ್ಣು ಮಗಳನ್ನು ಈ ರೀತಿ ಅವಮಾನ ಮಾಡ್ತಿದ್ದೀರಿ? ಹರ್ಷ ಏನೋ ಮಾಡುತ್ತಿದ್ದಾನೆ ಎನ್ನುವುದನ್ನು ಉಮಾಪತಿ ಹೇಳಬಹುದಿತ್ತು. ನನ್ನನ್ನು ಏಕೆ ಬಳಸಿಕೊಂಡಿರಿ?
ಉಮಾಪತಿ ತಪ್ಪು ಅಂತಾ ಹೇಳುತ್ತಿಲ್ಲ. ದರ್ಶನ್ ತಪ್ಪು ಅಂತಾ ಹೇಳುತ್ತಿಲ್ಲ. ನೀವೇ ಹೋಗಿ ಹರ್ಷ ಬಳಿ ಮಾತನಾಡಬಹುದಿತ್ತು. ಈ ಪ್ರಕರಣದಿಂದ ನನ್ನ ಕುಟುಂಬ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ. ಇದನ್ನೂ ಓದಿ : ಮೂರು ವಿಷಯ ಹೇಳಬೇಡಿ ಅಂದಿದ್ದಾರೆ ದರ್ಶನ್ ಸರ್: ಉಮಾಪತಿ
ಲೋನ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ ಇದು ತಪ್ಪು ವರದಿ. ಲೋನ್ ಅಪ್ರೋಚ್ ಮಾಡಿದ್ದಾರೆ ಎಂದಾಗಬೇಕು. ನಾನು ದರ್ಶನ್ ಮನೆಗೆ ಹೋಗಿದ್ದೇನೆ. ಫಾರಂ ಹೌಸಿಗೆ ಹೋಗಿದ್ದೇನೆ. ನಾನು ಕಳ್ಳತನ ಮಾಡಿದ್ದೀನಾ? ಯಾರಿಂದ ಯಾರಿಗೂ ಮೋಸ ಆಗಿಲ್ಲ. ನನಗೆ ದರ್ಶನ್ ಖಾತೆಯಿಂದ ಯಾವುದೇ ದುಡ್ಡು ಬಂದಿಲ್ಲ. ಈ ಪ್ರಕರಣದಿಂದ ನನ್ನಿಂದ ನನ್ನ ತಂದೆ, ತಾಯಿ ಮಗು ಎಲ್ಲರೂ ಬೀದಿಗೆ ಬರುವಂತಾಗಿದೆ. ತುಂಬಾ ನೋವಿನಲ್ಲಿ ಮಾತನಾಡುತ್ತಿದ್ದೇನೆ. ಒಂದು ಹೆಣ್ಣು ಮಗಳನ್ನು ಈ ರೀತಿ ಅವಮಾನ ಯಾಕೆ ಮಾಡುತ್ತಿದ್ದೀರಿ.
ಈ ಪ್ರಕರಣದಲ್ಲಿ ಉಮಾಪತಿಗೆ ಲಾಭ ಏನು? ನನ್ನನ್ನು ಉಪಯೋಗಿಸಿದ್ದು ತಪ್ಪು. ತೇಜೋವಧೆ ಮಾಡಿದ್ದು ಯಾಕೆ? ಹಾರ್ಟ್ ಸಿಂಬಲ್ ಕಳುಹಿಸಿದ್ದೇನೆ. ಅಪ್ಪ ಮಕ್ಕಳಿಗೆ ಕಳುಹಿಸಲ್ವಾ? ಅಣ್ಣ ತಂಗಿಗೆ ಕಳುಹಿಸಲ್ವಾ?
ನನ್ನ ಗಂಡ ನೀಡಿದ ಫೋಟೋಗಳು ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ನನ್ನ ಪತಿ ಸಾಚಾ ಅಲ್ಲ. ನನಗೆ ಆತನನ್ನು ಗಂಡ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ. ಈಗ ಬಂದಿರುವುದು ಎಲ್ಲ ಸತ್ಯವಲ್ಲ. ಪೊಲೀಸರ ತನಿಖೆಯಲ್ಲಿ ಎಲ್ಲದ್ದಕ್ಕೂ ಉತ್ತರ ಸಿಗಲಿದೆ. ದಯವಿಟ್ಟು ಸ್ವಲ್ಪ ಸಮಯ ಕಾದು ನೋಡಿ.