-ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರ್ತಾರೆ
-ಇಂದು ಎರಡು ಸಿನಿಮಾಗೆ ಕುಬೇರನ ಮಕ್ಕಳು
ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಕೆಲ ಸ್ಯಾಂಡಲ್‍ವುಡ್ ತಾರೆಯರ ಹೆಸರು ಕೇಳಿ ಬಂದಿದ್ದರ ಬಗ್ಗೆ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಉಪ್ಪುತಿಂದವರು ನೀರು ಕುಡಿಯಲಿ. ಬದುಕುವ ಹಠ ಇದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ನಾನು ನನ್ನ ಕನಸು, ಅನ್ನ ಜೀವನ ಅಂತ ಬಂದವರ ಕಾಲಮಾನದವ ವ್ಯಕ್ತಿ. ಬಣ್ಣ ಹಚ್ಚುವ ಮುನ್ನ ಶಾರದೆ ಸ್ಮರಿಸಿ ಬಣ್ಣಕ್ಕೆ ಮುಖ ಕೊಡುತ್ತಿದ್ದೆವು. ನಮ್ಮ ಕಾಲ ಕಲಾವಿದರು ಅಂತ ಯಾರಾದರು ಕರೆದರೆ ಊಟಕ್ಕೆ ಹೋಗಿ 2 ಪೆಗ್‍ಗೆ ಸೀಮಿತವಾಗಿತ್ತು. ಇಂದು ನಶೆ ಸದ್ದಿನದೆ ಚರ್ಚೆ ಆಗಿಬಿಟ್ಟಿದೆ. ಇದರ ಬಗ್ಗೆ ಮಾತಾಡಿದರೆ ಸಾಕು ಪರ-ವಿರೋಧದ ಅನಿಷ್ಠ ಮನದ ನೆಮ್ಮದಿಗೆ ಭಂಗ ತರುತ್ತದೆ.
Advertisement
ನಾನು ನಟನಾಗಿ ಅಲ್ಲ ಒಬ್ಬ ತಂದೆಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚನ್ನಾಗಿದ್ದೀರ ಮಾತ್ರ ದುನಿಯ be careful!
ಯಾರೊ ಕೆಲ ತಲೆಮಾಸಿದವರ ತಪ್ಪಿಗೆ ಇಡಿಚಿತ್ರರಂಗ ಎನ್ನಬೇಡಿ #ಮಾಧ್ಯಮಮಿತ್ರರೆ!ಹಾದಿ ತಪ್ಪಿದವರ ಬಹಿರಂಗಪಡಿಸಿ ಬುದ್ಧಿಕಲಿಸಿ!ಕೆಲವರ ತಪ್ಪಿಗೆ ಚಿತ್ರರಂಗದ ಪ್ರಾಮಾಣಿಕ ಕಲಾವಿದರು ನೊಂದಿದ್ದಾರೆ!ವಿನಂತಿ????
— ನವರಸನಾಯಕ ಜಗ್ಗೇಶ್ (@Jaggesh2) August 30, 2020
Advertisement
ಅಪ್ಪನಿಗೆ 1981ರಲ್ಲಿ 5,000 ರೂ. ಸಾಲ ಕೇಳಿದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು ತಾಕತ್ತಿದ್ದರೆ ಹೋಗಿ ದುಡಿ ಎಂದು ಹೊರ ದೂಡಿದ್ದರು. ಹಠಕ್ಕೆ ಬಿದ್ದು ದುಡಿಮೆಗೆ ಮದ್ರಾಸಿ(ಚೆನ್ನೈ)ಗೆ ಹೋದೆ. ಅಪಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದ. ಇಂದು ಮಕ್ಕಳ ಹಾಗೆ ಬೆಳೆಸುವ ತಂದೆಯೂ ಇಲ್ಲ, ತಲೆಮಾರು ಇಲ್ಲ. ಈಗ ಎಲ್ಲ ಕ್ಷೇತ್ರ ಏನಿದ್ದರು ನಾನು ನನ್ನಿಷ್ಟದ ಜೀವನ.
Advertisement
ಇಂದು ಮಾಧ್ಯಮಮಿತ್ರರು ಮನೆಯ ಹತ್ತಿರ ಬಂದಿದ್ದರಂತೆ ಕ್ಷಮೆಯಿರಲಿ ನಾನು ಊರಿಗೆ ಹೋಗಿರುವೆ!ನಿಮ್ಮ ಪ್ರೀತಿಗೆ ಧನ್ಯವಾದ!ಇಂದು ಏನೆ ಮಾತಾಡಿದರು ಅದಕ್ಕೆ ನೂರು ತರಹ ಪರವಿರೋಧ ಚರ್ಚೆಯಾಗುತ್ತದೆ!ಯಾಕೆ ಬೇಕು ಉಪ್ಪುತಿಂದವರು ನೀರು ಕುಡಿಯಲಿ!ಬದುಕುವ ಹಟವಿದ್ದವರು ಹಿಮಾಲಯ ಏರುತ್ತಾರೆ!ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ!
ಅವರವರ ಹಣೆಬರಹ!
— ನವರಸನಾಯಕ ಜಗ್ಗೇಶ್ (@Jaggesh2) August 30, 2020
ನಾವು 30 ಸಿನಿಮಾಗಳಲ್ಲಿ ನಟಿಸಿದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು, ಕೊಟ್ಟ ಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ ಸೀಮೆಎಣ್ಣೆಗೆ ಕ್ಯೂ ನಿಂತವರು. ಇಂದು ಎರಡು ಸಿನಿಮಾಗೆ ಕುಬೇರನ ಮಕ್ಕಳು. ಹೇಗೆ ಇಂಥ ಕ್ಯಾಚ್ ನನಗೆ 57 ವರ್ಷಕ್ಕೂ ಅರ್ಥವಾಗಿಲ್ಲ. 2015ರಿಂದ ಮೋಜು ಮಸ್ತಿ, ಕುಸ್ತಿ ಸಿನಿಮಾ ಜೀವನ. ಅಂದು ಒಂದು ಮಾತಿಗೆ ಅಳುತ್ತಿದ್ದೇವು.
30ಸಿನಿಮ ನಟಿಸಿದರು ನಿರ್ಮಾಪಕ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು!
ಕೊಟ್ಟಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿಸೀಮೆಎಣ್ಣೆಗೆ ಕ್ಯೂನಿಂತವರು ನಾವು!ಇಂದು 2ಸಿನಿಮಾಗೆ ಕುಬೇರನ ಮಕ್ಕಳು!
ಹೇಗೆ ಇಂಥcatch ನನಗೆ 57ವರ್ಷಕ್ಕು ಅರ್ಥವಾಗಿಲ್ಲಾ!
ಇದೆ 2015ರಿಂದ ಮೋಜು ಮಸ್ತಿ ಕುಸ್ತಿ ಸಿನಿಮ ಜೀವನ!ಅಂದು ಒಂದು ಮಾತಿಗೆ ಅಳುತ್ತಿದ್ದೆವು ಇಂದು????
— ನವರಸನಾಯಕ ಜಗ್ಗೇಶ್ (@Jaggesh2) August 30, 2020
ಇಂದು ಮಾಧ್ಯಮ ಮಿತ್ರರು ಮನೆಯ ಹತ್ತಿರ ಬಂದಿದ್ದರಂತೆ ಕ್ಷಮೆಯಿರಲಿ. ನಾನು ಊರಿಗೆ ಹೋಗಿರುವೆ. ನಿಮ್ಮ ಪ್ರೀತಿಗೆ ಧನ್ಯವಾದ. ಇಂದು ಏನೇ ಮಾತಾಡಿದ್ರೂ ಅದಕ್ಕೆ ನೂರು ತರಹ ಪರ-ವಿರೋಧ ಚರ್ಚೆಯಾಗುತ್ತದೆ. ಯಾಕೆ ಬೇಕು ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಠ ಇದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ಅದು ಅವರವರ ಹಣೆಬರಹ.
ಅಪ್ಪನಿಗೆ1981ರಲ್ಲಿ5,000 ಸಾಲ ಕೇಳಿದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು ತಾಕತ್ತಿದ್ದರೆ ಹೋಗಿ ದುಡಿ ಎಂದು ಹೊರ ದೂಡಿದ!ಹಟಕ್ಕೆ ಬಿದ್ದು ದುಡಿಮೆಗೆ ಮದ್ರಾಸಿಗೆ ಹೋದೆ!
ಅಪಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದ!ಇಂದು ಮಕ್ಕಳ ಹಾಗೆ ಬೆಳೆಸುವ ತಂದೆಯು ಇಲ್ಲಾ ತಲೆಮಾರು ಇಲ್ಲ!ಈಗ ಎಲ್ಲಕ್ಷೇತ್ರ ಏನಿದ್ದರು ನಾನು ನನ್ನಿಷ್ಟದ ಜೀವನ!
— ನವರಸನಾಯಕ ಜಗ್ಗೇಶ್ (@Jaggesh2) August 30, 2020
ನಾನು ನಟನಾಗಿ ಅಲ್ಲ ಒಬ್ಬ ತಂದೆ ಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚನ್ನಾಗಿದ್ದೀರ ಮಾತ್ರ ದುನಿಯಾ. ಯಾರೋ ಕೆಲ ತಲೆಮಾಸಿದವರ ತಪ್ಪಿಗೆ ಇಡಿಚಿತ್ರರಂಗ ಅನ್ನಬೇಡಿ. ಹಾದಿ ತಪ್ಪಿದವರ ಬಹಿರಂಗಪಡಿಸಿ ಬುದ್ಧಿ ಕಲಿಸಿ. ಕೆಲವರ ತಪ್ಪಿಗೆ ಚಿತ್ರರಂಗದ ಪ್ರಾಮಾಣಿಕ ಕಲಾವಿದರು ನೊಂದಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.
ನನ್ನಕನಸು ಅನ್ನ ಜೀವನ ಅಂತ ಬಂದವರ ಕಾಲಮಾನದವ ನಾನು!ಬಣ್ಣ ಹಚ್ಚುವಮುನ್ನ ಶಾರದೆಸ್ಮರಿಸಿ ಬಣ್ಣಕ್ಕೆ ಮುಖ ಕೊಡುತ್ತಿದ್ದೆವು!ಕಲಾವಿದರು ಅಂತ ಯಾರಾದರು ಕರೆದರೆ ಊಟಕ್ಕೆ ಹೋಗಿ 2pegಗೆ ಸೀಮಿತವಾಗಿತ್ತು ನಮ್ಮಕಾಲ!ಇಂದು ನಶೆ ಸದ್ದಿನದೆ ಚರ್ಚೆ ಆಗಿಬಿಟ್ಟಿದೆ!ಇದರ ಬಗ್ಗೆ ಮಾತಾಡಿದರೆ ಸಾಕು ಪರವಿರೋಧದ ಅನಿಷ್ಟ ಮನದ ನೆಮ್ಮದಿಗೆ ಭಂಗ!ನಿಮ್ಮ ಹಣೆಬರಹ!
— ನವರಸನಾಯಕ ಜಗ್ಗೇಶ್ (@Jaggesh2) August 30, 2020