ಉಪ್ಪಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಹರಿಪ್ರಿಯಾ

Public TV
1 Min Read
upendra haripriya

ಬೆಂಗಳೂರು: ಸಾಲು ಸಾಲು ಸಿನಿಮಾಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಹರಿಪ್ರಿಯಾ ಮತ್ತೊಂದು ಪ್ರಾಜೆಕ್ಟ್ ಗೆ ಸಹಿ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅದೂ ಸಹ ರಿಯಲ್ ಸ್ಟಾರ್ ಉಪೇಂದ್ರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

iamhariprriya 107821760 701221784061587 9101674204914531962 n

ಈ ಬಗ್ಗೆ ಮಾತನಾಡಿರುವ ಹರಿಪ್ರಿಯಾ, ಉಪ್ಪಿ ಸರ್ ಜೊತೆ ನಟಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಈ ವರೆಗೆ ಅವರೊಂದಿಗೆ ಜಾಹೀರಾತಿನಲ್ಲಿ ಮಾತ್ರ ನಟಿಸಿದ್ದೇನೆ. ಸಿನಿಮಾದಲ್ಲಿ ನಟಿಸುವ ಆಸೆ ಇತ್ತು. ಇದೀಗ ಅದು ಈಡೇರಿದೆ. ಅಲ್ಲದೆ ಶಷಾಂಕ್ ಅವರ ಜೊತೆ ಕೆಲಸ ಮಾಡುವುದು ಸಹ ಖುಷಿ ತಂದಿದೆ. ತಾಯಿಗೆ ತಕ್ಕ ಮಗ ಸಿನಿಮಾದಂತಹ ಆ್ಯಕ್ಷನ್ ಚಿತ್ರದಲ್ಲಿ ಅವರು ಮಹಿಳೆಯರಿಗೂ ಆಸಕ್ತಿದಾಯಕ ಪಾತ್ರವನ್ನು ನೀಡಿದ್ದರು. ಮಹಿಳೆಯರಿಗೆ ಆಳವಾದ ಪಾತ್ರ ಬರೆಯಲು ಅವರು ಹೆಸರುವಾಸಿಯಾಗಿದ್ದಾರೆ. ಅವರ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲು ಉತ್ಸುಕಳಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

upendra 2

ಲಾಕ್‍ಡೌನ್ ಬಳಿಕ ಹರಿಪ್ರಿಯಾ ಟಿವಿ ಕಮರ್ಷಿಯಲ್ ಶೂಟಿಂಗ್‍ಗೆ ತೆರಳಿದ್ದರು. ಬಳಿಕ ಸತೀಶ್ ನಿನಾಸಂ ಜೊತೆ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಈ ಮೂಲಕ ನೀರ್ ದೋಸೆ ಸಿನಿಮಾ ನಂತರ ಮತ್ತೆ ನಿರ್ದೇಶಕ ವಿಜಯ್ ಪ್ರಸಾದ್ ಅವರ ಜೊತೆ ಕೆಲಸ ಮಾಡಿದ್ದಾರೆ.

iamhariprriya 142462635 2028253093978986 5818797665266002132 n

ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಹರಿಪ್ರಿಯಾ ಬ್ಯುಸಿಯಾಗಿದ್ದು, ಇದೀಗ ಉಪ್ಪಿ ಜೊತೆ ತೆರೆ ಹಂಚಿಕೊಳ್ಳಲು ತಯಾರಿ ನಡೆಸಿದ್ದಾರೆ. ಅಂದಹಾಗೆ ಚಿತ್ರದ ಹೆಸರು ಇನ್ನೂ ಅಂತಿಮವಾಗಿಲ್ಲ. ಏಪ್ರಿಲ್‍ನಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಕೆಲ ವರ್ಷಗಳಿಂದ ನಟ ಉಪೇಂದ್ರ ಹಾಗೂ ಶಷಾಂಕ್ ಅವರು ಈ ಚಿತ್ರದ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರಂತೆ. ಇದೀಗ ನಾಯಕ ನಟಿಯನ್ನು ಅಂತಿಮಗೊಳಿಸಲಾಗಿದೆ.

iamhariprriya 118513807 358483315557125 7190364991579610160 n

ಸದ್ಯ ಎವರು ಸಿನಿಮಾದ ರೀಮೇಕ್‍ನಲ್ಲಿ ದಿಗಂತ್ ಹಾಗೂ ವಶಿಷ್ಠ ಸಿಂಹ ಜೊತೆ ತೆರೆ ಹಂಚಿಕೊಂಡಿರುವ ಹರಿಪ್ರಿಯಾ ಇದೀಗ ಉಪ್ಪಿ ಜೊತೆ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುವ ಮೂಲಕ ಸ್ಯಾಂಡಲ್‍ವುಡ್‍ನ ಬ್ಯುಸಿಯಸ್ಟ್ ನಟಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *