– ಪೊಲೀಸ್ ರಕ್ಷಣೆ ಕೇಳಿದ ಅಭ್ಯರ್ಥಿ
ಲಕ್ನೋ: ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಎಐಎಂಐಎಂ ಅಭ್ಯರ್ಥಿಯ ಬಟ್ಟೆ ಹರಿದು ಹಲ್ಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಗಲಾಟೆ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಬುಲಂದ್‍ಶಹರ್ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದೆ. ಎಲೆಕ್ಷನ್ ಅಖಾಡದಲ್ಲಿರುವ ಅಭ್ಯರ್ಥಿಗಳು ಮತ ಬೇಟೆಗೆ ಮುಂದಾಗಿದ್ದಾರೆ. ಭಾನುವಾರ ರಾತ್ರಿ ರೂಕನ್ ಸರಾಯ ಮೊಹಲ್ಲಾದಲ್ಲಿ ಪ್ರಚಾರ ನಡೆಸುತ್ತಿರುವ ವೇಳೆ ಎಐಎಂಐಎಂ ಅಭ್ಯರ್ಥಿ ದಿಲ್‍ಶಾದ್ ಅಹ್ಮದ್ ಮೇಲೆ ಹಲ್ಲೆ ನಡೆದಿದೆ. ಗಲಾಟೆಯಲ್ಲಿ ದಿಲ್‍ಶಾದ್ ಬಟ್ಟೆ ಹರಿಯಲಾಗಿದೆ. ದಿಲ್‍ಶಾದ್ ತಮ್ಮ ಮೇಲಾದ ಹಲ್ಲೆಯ ಸಂಬಂಧ ದೂರು ದಾಖಲಿಸಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ಮಂದಿರ ನಿರ್ಮಿಸುತ್ತೇವೆ – ಎಲ್‌ಜೆಪಿ ಘೋಷಣೆ
Advertisement
बुलन्दशहर के चुनाव में हमारे प्रत्याशी उतारने से विपक्षी पार्टीयां घबरा गई है और आज की रैली ने इनकी नींद उड़ा दी है जिसकी वजह से अभी कायरतापूर्ण तरीके से मेरे काफिले पर गोलियां चलाई गई है। यह इनकी हार की हताशा को दिखाता है ये चाहते है कि माहौल खराब हो लेकिन हम ऐसा नही होने देंगे।
— Chandra Shekhar Aazad (@BhimArmyChief) October 25, 2020
Advertisement
ಅಜಾದ್ ಸಮಾಜ ಪಾರ್ಟಿ (ಆಸಪಾ) ಅಭ್ಯರ್ಥಿ ಹಾಕಿ ಯಾಮೀನ್ ಮತ್ತು ಅವರ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಿಲ್ ಶಾದ್ ಆರೋಪಿಸಿದ್ದಾರೆ. ಆದ್ರೆ ಆಸಪಾ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ರಾವಣ್ ತಮ್ಮ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದ್ರೆ ಚಂದ್ರಶೇಖರ್ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. . ಇದನ್ನೂ ಓದಿ: ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು
Advertisement
ಹಲ್ಲೆಯ ಬಳಿಕ ದೂರು ದಾಖಲಿಸಿರುವ ದಿಲ್‍ಶಾದ್ ತಮ್ಮ ಜೀವಕ್ಕೆ ಅಪಾಯವಿದ್ದು, ಭದ್ರತೆ ನೀಡಬೇಕೆಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಚಂದ್ರಶೇಖರ್ ಮೇಲೆ ನಡೆದಿದೆ ಎನ್ನಲಾದ ಗುಂಡಿನ ದಾಳಿ ಬಗ್ಗೆಯೂ ಪೊಲೀಸರಿಗೂ ಖಚಿತ ಮಾಹಿತಿ ಸಿಕ್ಕಿಲ್ಲ.