– ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವೆ
– ಬಾಗಿನ ಅರ್ಪಿಸಿ ಭಾವುಕರಾದ ಮಾಜಿ ಸ್ಪೀಕರ್
ಕೋಲಾರ: ಬಿಹಾರ ಚುನಾವಣೆ ಮತ್ತು ರಾಜ್ಯ ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಇಂದು ಕೋಲಾರದಲ್ಲಿ ಮಾತನಾಡಿದ ಅವರು, ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವೆ. ದುಡುಕಿ ಮಾತನಾಡುವುದು, ಆವೇಷದಿಂದ ಮಾತಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ಚೆನ್ನಾಗಿಯೇ ಇದ್ದಾರೆ ಎಂದರು.
Advertisement
Advertisement
ಕೋಲಾರದ ಕೆ.ಸಿ.ವ್ಯಾಲಿ ನೀರು ಅಮ್ಮೇರಹಳ್ಳಿ ಕೆರೆ ತುಂಬಿ ಕೋಲಾರಮ್ಮ ಕೆರೆಗೆ ಹರಿದ ಹಿನ್ನೆಲೆ, ಅಮ್ಮೇರಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಾವುಕರಾಗಿ ಕಣ್ಣೀರು ಹಾಕಿದರು. ಕೋಲಾರದ ಹೊರವಲಯದಲ್ಲಿರುವ ಅಮ್ಮೇರಹಳ್ಳಿ ಕೆರೆ ಕೆ.ಸಿ.ವ್ಯಾಲಿ ಯೋಜನೆಡಿಯಲ್ಲಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.
Advertisement
Advertisement
ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ನಾಗೇಶ್, ಸಂಸದರು ಸೇರಿದಂತೆ ಶಾಸಕರು ಭಾಗಿಯಾಗಿದ್ದರು. ಕೆ.ಸಿ.ವ್ಯಾಲಿ ಯೋಜನೆಯ ರೂವಾರಿ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಕಾಣದ ಕೈಗಳು ಸಾಕಷ್ಟು ತೊಂದರೆ ಕೊಟ್ಟರು ಜಗ್ಗದೆ ಯೋಜನೆ ಅನುಷ್ಟಾನಗೊಳಿಸಿದ್ದಾರೆಂದು ಬಣ್ಣಿಸಿದ್ದಕ್ಕೆ ಅವರು ಪಟ್ಟ ಕಷ್ಟ ನೆನೆದು ಕಣ್ಣೀರಾಕಿದರು. ಯೋಜನೆ ಅನುಷ್ಟಾನಕ್ಕೆ ಹಗಲಿರುಳು ರಮೇಶ್ ಕುಮಾರ್ ಶ್ರಮಿಸಿದರೆಂದು ಎಂಎಲ್‍ಸಿ ನಸೀರ್ ಅಹಮದ್ ಬಣ್ಣಿಸಿದರು.