ರಾಯಚೂರು: ಜಿಲ್ಲೆಯ ಲಿಂಗಸಗೂರಿನ ಉಪಕಾರಾಗೃಹದಲ್ಲಿನ ವಿಚಾರಾಣಾಧೀನ ಕೈದಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು ಇತರ ಕೈದಿಗಳು ಆತಂಕಕ್ಕೊಳಗಾಗಿದ್ದಾರೆ.
ಉಪಕಾರಗೃಹದ 28 ವಿಚಾರಣಾಧೀನ ಕೈದಿಗಳು ಹಾಗೂ 6 ಜನ ಸಿಬ್ಬಂದಿಯ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಲಾಗಿದೆ. ಕೈದಿಗಳನ್ನ ಪ್ರತ್ಯೇಕವಾಗಿ ಇರಿಸಲಾಗಿದ್ದು, ಸಿಬ್ಬಂದಿಯನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನನ್ನ ರಾಯಚೂರಿನ ಕೋವಿಡ್ ಆಸ್ಪತ್ರೆ ಓಪೆಕ್ ಗೆ ದಾಖಲಿಸಲಾಗಿದೆ.
ಎರಡು ತಿಂಗಳ ಹಿಂದೆ ಬಂಧನವಾಗಿದ್ದ ವಿಚಾರಾಣಾಧೀನ ಕೈದಿಗೆ ಈಗ ಸೋಂಕು ದೃಢವಾಗಿದೆ. ರೋಗಲಕ್ಷಣಗಳು ಕಂಡು ಬಂದಿಲ್ಲ. ಆದ್ರೂ ಸೋಂಕು ದೃಢಪಟ್ಟಿದ್ದರಿಂದ ಜೈಲಿನಲ್ಲಿನ ಇತರೆ ಕೈದಿಗಳಿಗೆ ಢವಢವ ಶುರುವಾಗಿದೆ. ಜುಲೈ 13 ರಂದು ಉಪಕಾರಾಗೃಹದ ಅಧೀಕ್ಷಕರಿಗೆ ಸೋಂಕು ದೃಢಪಟ್ಟಿತ್ತು.
ಜೈಲು ಅಧೀಕ್ಷಕರ ಸಂಪರ್ಕದಿಂದಲೇ ವಿಚಾರಾಣಾಧೀನ ಕೈದಿಗೆ ಸೋಂಕು ತಗುಲಿದೆ. ಸೋಂಕಿತ ವಿಚಾರಾಣಾಧೀನ ಕೈದಿಯೊಂದಿಗೆ 7 ಜನ ಇತರ ಕೈದಿಗಳು ಒಂದೇ ಸೆಲ್ ನಲ್ಲಿದ್ದರು. ಜೈಲು ಅಧೀಕ್ಷಕರ ನಂತರ ವಿಚಾರಾಣಾಧೀನ ಕೈದಿಗೆ ಸೋಂಕು ದೃಢಪಟ್ಟಿದ್ದರಿಂದ ಇತರರಿಗೂ ಆತಂಕ ಹೆಚ್ಚಾಗಿದೆ.