– ನಿಮ್ಮ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿ
ನವದೆಹಲಿ: ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಅವಾಂತರದಿಂದಾಗಿ ಬಹುತೇಕ ಭಾರತೀಯ ಕಂಪನಿಗಳಲ್ಲಿ ಉದ್ಯೋಗ ಕಡಿತ ಸಾಮಾನ್ಯವಾಗಿದ್ದು, ಬೇಕಾಬಿಟ್ಟಿಯಾಗಿ ಕೆಲಸದಿಂದ ವಜಾ ಮಾಡಲಾಗುತ್ತಿದೆ. ಈ ಕುರಿತು ಟಾಟಾ ಸಮೂಹ ಸಂಸ್ಥೆ ಅಧ್ಯಕ್ಷ ರತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ಪರಿಸ್ಥಿತಿಯಲ್ಲಿ ಉದ್ಯೋಗ ಕಡಿತವೊಂದೇ ಪರಿಹಾರವಲ್ಲ ಎಂದು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೊರೊನಾ ಪರಿಸ್ಥಿತಿಯಲ್ಲಿ ಕಂಪನಿಗಳಿಂದ ನೌಕರರನ್ನು ಕೆಲಸದಿಂದ ತೆಗೆಯುವುದೇ ಪರಿಹಾರವಲ್ಲ. ಇದು ಮೊಣಕಾಲಿನ ಕೆಳಗಿನ ಪ್ರತಿಕ್ರಿಯೆಯಾಗಿದೆ. ಅಲ್ಲದೆ ಕೊರೊನಾ ನಂತರದ ಜಗತ್ತಿನಲ್ಲಿ ವ್ಯವಹರಿಸುವ ವಿಧಾನವೂ ಬದಲಾಗಬೇಕಿದೆ ಎಂದು ಹೇಳೀದ್ದಾರೆ.
Advertisement
Advertisement
ಟಾಟಾ ಸಮೂಹ ಸಂಸ್ಥೆ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿಲ್ಲ. ಆದರೆ ದೇಶಾದ್ಯಂತ ಲಾಕ್‍ಡೌನ್ ನಂತರ ಹಣದ ಹರಿವಿನ ಕೊರತೆಯಿಂದಾಗಿ ಹಲವು ಭಾರತೀಯ ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕಿವೆ. ಆದರೆ ಟಾಟಾ ಸಂಸ್ಥೆ ಉನ್ನತ ಹುದ್ದೆಯಲ್ಲಿರುವವರ ಶೇ.20ರಷ್ಟು ಸಂಬಳವನ್ನು ಕಡಿತಗೊಳಿಸಿದೆ. ಕೊರೊನಾದಿಂದಾಗಿ ಟಾಟಾ ಸಂಸ್ಥೆಯ ಹೋಟೆಲ್‍ಗಳು, ವಿಮಾನಯಾನ ಸಂಸ್ಥೆಗಳು, ಆಟೋಮೊಬೈಲ್ ಹಾಗೂ ಹಣಕಾಸು ಸೇವೆ ಸೇರಿದಂತೆ ಎಲ್ಲ ವಿಭಾಗಕ್ಕೂ ನಷ್ಟ ಉಂಟಾಗಿದೆ. ಆದರೆ ಟಾಟಾ ಸಂಸ್ಥೆ ಈ ವರೆಗೆ ಉದ್ಯೋಗ ಕಡಿತಗೊಳಿಸಿಲ್ಲ.
Advertisement
ಬದುಕುಳಿಯಲು ನ್ಯಾಯಯುತ ಮತ್ತು ಅಗತ್ಯವೆಂದು ಪರಿಗಣಿಸುವ ವಿಷಯದಲ್ಲಿ ಬದಲಾಗಬೇಕು ಎಂಬುದನ್ನು ಒಪ್ಪಿಕೊಳ್ಳಿ. ಅಲ್ಲದೆ ಒಬ್ಬರೇ ಹಲವು ವಿಭಾಗಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲದೆ ನಿಮ್ಮ ಮಧ್ಯಸ್ಥಗಾರರಗೊಂದಿಗೆ ಸೂಕ್ಷ್ಮವಾಗಿ ವರ್ತಿಸದಿದ್ದಲ್ಲಿ ಬುದುಕುಳಿಯುವುದು ಕಷ್ಟ. ಇದಕ್ಕೆ ಮನೆಯಿಂದ ಕೆಲಸ ಮಾಡುವುದೂ ಒಂದು ಪರಿಹಾರ. ಉದ್ಯೋಗಿಗಳ ಜವಾಬ್ದಾರಿಯನ್ನು ನೀವು ಹೊತ್ತಿರುವುದರಿಂದ ಕೆಲಸದಿಂದ ಹೊರಗಳಿದವರು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ಸಂಸ್ಥೆಯ ಒಬ್ಬರೂ ತಮ್ಮ ಉದ್ಯೋಗಿಗಳ ಕುರಿತು ಸೂಕ್ಷ್ಮತೆ ಹೊಂದಿರದಿದ್ದಲ್ಲಿ ಸಂಘಟನೆಯಾಗಿ ಬದುಕುವುದ ಕಷ್ಟ. ವ್ಯವಹಾರವೆಂದರೆ ಕೇವಲ ಹಣ ಸಂಪಾದಿಸುವುದು ಮಾತ್ರವಲ್ಲ. ಗ್ರಾಹಕರು ಹಾಗೂ ಮಧ್ಯಸ್ಥಗಾರರಿಗಾಗಿ ಎಲ್ಲವನ್ನೂ ಸರಿಯಾಗಿ ಮತ್ತು ನೈತಿಕವಾಗಿ ಮಾಡಬೇಕು ಎಂದು ಒತ್ತಿ ಹೇಳಿದ್ದಾರೆ.
ಕೊರೊನಾ ವೈರಸ್‍ನಿಂದಾಗಿ ಆರೋಗ್ಯ ಹಾಗೂ ಆರ್ಥಿಕ ವಲಯಗಳಲ್ಲಿ ವಿವಿಧ ಸವಾಲುಗಳು ಎದುರಾಗಿವೆ. ಹೀಗಾಗಿ ಪ್ರತಿಯೊಬ್ಬ ಕೈಗಾರಿಕೋದ್ಯಮಿ ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಹೊಸ ಹೊಸ ಹಾಗೂ ಕ್ರಿಯೇಟಿವ್ ಆವಿಷ್ಕಾರಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಇಂತಿಹ ಕಷ್ಟದ ಪರಿಸ್ಥಿತಿಯಲ್ಲೇ ಕೆಲವು ಅತ್ಯಂತ ಆಸಕ್ತಿದಾಯಕ ಅಥವಾ ಪ್ರಚಂಡ ಪರಿಹಾರಗಳು ಸಿಕ್ಕಿವೆ. ಇಂತಹ ಸಮಯದಲ್ಲಿ ಪರಿಹಾರ ಕಂಡುಹಿಡಿಯಲು ಹೆಚ್ಚು ನವೀನ ಹಾಘೂ ಸೃಜನಶೀಲರಾಗಿರಬೇಕು ಎಂದು ರತನ್ ಟಾಟಾ ತಿಳಿಸಿದ್ದಾರೆ.
ಕೊರೊನಾ ಮಹಾಮಾರಿಯನ್ನು ನಾವು ಒಗ್ಗಟ್ಟು, ಸಂಕಲ್ಪ, ಅನುಭೂತಿ ಹಾಗೂ ತಿಳುವಳಿಕೆಯ ಮನೋಭಾವದಿಂದ ಹೋರಾಡಬೇಕು. ಕೋವಿಡ್-19 ಯುದ್ಧವನ್ನು ನಾವು ಗೆಲ್ಲಲು ಒಂದಾಗಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಡಿದ ಲಾಕ್‍ಡೌನ್‍ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ನಿರುದ್ಯೋಗಿಗಳಾಗಿ ಉಳಿದರು. ಇದು ಬಿಸಿನೆಸ್ ನೀತಿಯ ಕೊರತೆಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಲಸೆ ಕಾರ್ಮಿಕರು ನಿಮಗಾಗಿ ಹಗಲಿರುಳು ಕೆಲಸ ಮಾಡಿದವರು, ಮಳೆಯಲ್ಲಿ ನೆನೆಯುವಂತೆ ಅವರನ್ನು ನೀವು ಹೊರ ದಬ್ಬಿದಿರಿ. ಇದೇ ನಿಮ್ಮ ನೀತಿಯ ಅರ್ಥ? ಇದೇ ನಿಮ್ಮ ಕಾರ್ಮಿಕರನ್ನು ನೀವು ನಡೆಸಿಕೊಳ್ಳುತ್ತಿರುವ ರೀತಿ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.