ವಿಜಯಪುರ: ತೈಲ ಉತ್ಪಾದಕರ ಮೇಲೆ ಒತ್ತಡ ಹಾಕಿ, ತೈಲ ಉತ್ಪಾದನೆ ಜಾಸ್ತಿ ಮಾಡಿಸುತ್ತೇವೆ ಎಂದು ಕೇಂದ್ರ ಇಂಧನ ಹಾಗೂ ಗಣಿ, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
Advertisement
ಜಿಲ್ಲೆಯ ಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಪ್ರಲ್ಹಾದ ಜೋಶಿ ಭೇಟಿ ನೀಡಿ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಪರಿವಾರ ದೇವಸ್ಥಾನಕ್ಕೆ ಸಮೇತ ಭೇಟಿ ನೀಡಿದ ಸಚಿವರು 2019 ಚುನಾವಣೆ ನಂತರ ದೇವರ ದರ್ಶನಕ್ಕೆ ಬಂದಿರಲಿಲ್ಲ. ಹಾಗಾಗಿ ಈಗ ಕುಟುಂಬ ಸಮೇತ ದೇವರ ದರ್ಶನಕ್ಕೆ ಬಂದಿದ್ದೇನೆ ಎಂದರು.
Advertisement
ತೈಲ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ತೈಲದ ಮೇಲಿನ ತೆರಿಗೆ ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆದಿದ್ದು, ತೈಲ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರಗಳು ಒಪ್ಪುತ್ತಿಲ್ಲ, ಸ್ವಲ್ಪ ದಿನಗಳಲ್ಲಿ ಇದಕ್ಕೆ ಪರಿಹಾರ ಸಿಗುತ್ತದೆ ಎಂದು ಸ್ಪಷ್ಟ ಪಡಿಸಿದರು.
Advertisement
ದೇಶದ ಒಟ್ಟಾರೆ ಆರ್ಥಿಕ ಸ್ಥಿತಿ ಕೊರೊನಾ ಕಾರಣದಿಂದ ಕುಸಿದಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಇದ್ದ ನಿರುದ್ಯೋಗ ಸಮಸ್ಯೆ ಜನವರಿಯಲ್ಲಿ ಬಗೆ ಹರಿದಿದ್ದು, ಆರ್ಥಿಕತೆ ಮುಂದೆ ಹೋಗುತ್ತಿದೆ ಎಂದು ವಿವರಿಸಿದರು.
Advertisement
ರಾಜ್ಯದ ಮುಖ್ಯಮಂತ್ರಿ ಸಿಎಂ ಯಡ್ಡಿಯೂರಪ್ಪ ನವರು ಚೆನ್ನಾಗಿ ಆಡಳಿತವನ್ನು ಮಾಡುತ್ತಿದ್ದಾರೆ. ಅವರು ಒಬ್ಬ ಅನುಭವಿ ಹಾಗೂ ಜನಪ್ರಿಯ ನಾಯಕರು. ಅವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿರುವಾಗ ಬೇರೆ ಚರ್ಚೆಗಳಿಗೆ ನಾವೇಕೆ ಅವಕಾಶ ಕೊಡಬೇಕು. ಅವರ ನೇತೃತ್ವದಲ್ಲೇ ಸರಕಾರ ನಡೆಯುತ್ತದೆ ಸಿಎಂ ಪರ ಬ್ಯಾಟಿಂಗ್ ಮಾಡಿದರು.
ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಉತ್ತಮ ಆಡಳಿತ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲೂ ಅವರ ನೇತೃತ್ವದಲ್ಲೇ ಸರಕಾರ ಮುಂದುವರಿಯುತ್ತದೆ. ಯಡಿಯೂರಪ್ಪ ನವರ ಕುರಿತು ಇದಕ್ಕಿಂತ ಹೆಚ್ಚು ನಾನು ಏನು ಹೇಳಲು ಬಯಸುವುದಿಲ್ಲ ಎಂದು ತಿಳಿಸಿದರು.
ಸಿಎಂ ಮಗ ವಿಜಯೇಂದ್ರ ಬಗ್ಗೆ ಜೋಶಿ ಮಾತನಾಡದೆ ಕೇವಲ ಸಿಎಂ ಯಡ್ಡಿಯೂರಪ್ಪನವರನ್ನು ಮಾತ್ರ ಸಮರ್ಥಿಸಿಕೊಂಡರು. ಯತ್ನಾಳ್ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಜೋಶಿ ನಂತರ ನೈಸರ್ಗಿಕ ಅನಿಲದ ಕುರಿತು ಮಾಹಿತಿ ನೀಡಲು ಮುಂದಾಗಿ, ಬಹಳ ಕಡೆ ನೈಸರ್ಗಿಕ ಅನಿಲ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲ ಉಳಿದ ಕಡೆಗಳಿಗಿಂತ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.