ಕಾರವಾರ: ಕಳೆದ ವರ್ಷ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವರ ಸಾವಿಗೆ ಕಾರಣವಾಗಿದ್ದ ಮಂಗನಕಾಯಿಲೆ, ಇದೀಗ ಮತ್ತೆ ಜಿಲ್ಲೆಯಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.
Advertisement
ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಸಿದ್ದಾಪುರ ತಾಲೂಕಿನ ಕುಳಿಬೀಡಿನ 51 ವರ್ಷದ ಮಹಿಳೆಯಲ್ಲಿ ಜ್ವರ ಹಾಗೂ ಮೈ ಕೈ ನೋವು ಕಾಣಿಸಿಕೊಂಡಿದ್ದು, ರಕ್ತ ಪರೀಕ್ಷೆ ನಂತರ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಇದನ್ನು ಓದಿ. ಏನಿದು ಮಂಗನ ಕಾಯಿಲೆ-ಹೇಗೆ ಬರುತ್ತೆ..?
Advertisement
Advertisement
ಸೋಂಕಿತೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಸದ್ಯ ಈ ಭಾಗದಲ್ಲಿ ಮಂಗಗಳು ಸತ್ತಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದರೂ ಈ ವರ್ಷ ಮರಳಿ ಮಂಗನಕಾಯಿಲೆ ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷ ಸಿದ್ದಾಪುರದ ಬಾಳಗೋಡು, ಇಟಗಿ, ಹೊನ್ನೆಗಟಗಿ, ತ್ಯಾಗಲಿ, ಮನಮನೆ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು 9 ಜನ ಸಾವನ್ನಪ್ಪಿದ್ದರು.
Advertisement