ನವದೆಹಲಿ: ಉತ್ತರಪ್ರದೇಶದಲ್ಲಿ ಕೋವಿಡ್ 19 ನಿಯಂತ್ರಣವಾಗಿರುವುದನ್ನು ಕಂಡು ಪಾಕಿಸ್ತಾನದ ಡಾನ್ ಪತ್ರಿಕೆಯ ಸಂಪಾದಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವನ್ನು ಉತ್ತರ ಪ್ರದೇಶಕ್ಕೆ ಹೋಲಿಕೆ ಮಾಡಿ ಫಾಹದ್ ಹುಸೇನ್ ಟ್ವೀಟ್ ಮಾಡಿ ಕೊರೊನಾ ಗ್ರಾಫ್ ಹಂಚಿಕೊಂಡಿದ್ದಾರೆ.
Advertisement
Look at this graph carefully. It compares death rate of Pakistan and Indian state of UP. Both have roughly same population profile & literacy. Pakistan has lesser density/km and higher GDP/capita. UP was strict with lockdown. We were not. See diff in death rate #COVIDー19
(1/2) pic.twitter.com/so8SgEtjCw
— Fahd Husain (@Fahdhusain) June 7, 2020
Advertisement
ಉತ್ತರ ಪ್ರದೇಶ ಮತ್ತು ಪಾಕಿಸ್ತಾನ ಜನಸಂಖ್ಯೆ ಮತ್ತು ಸಾಕ್ಷರತೆ ಪ್ರಮಾಣ ಎರಡು ಸರಿಸುಮಾರು ಒಂದೇ ರೀತಿಯಾಗಿದೆ. ಪಾಕಿಸ್ತಾನದಲ್ಲಿ ಜನ ಸಾಂದ್ರತೆ ಕಡಿಮೆ ಇದ್ದು ಜಿಡಿಪಿ ಜಾಸ್ತಿಯಿದೆ. ಉತ್ತರ ಪ್ರದೇಶದಲ್ಲಿ ಲಾಕ್‍ಡೌನ್ ಬಹಳ ಕಠಿಣವಾಗಿದ್ದ ಕಾರಣ ಕೋವಿಡ್ 19ಗೆ ಮೃತ ಪಡುವ ಸೋಂಕಿತರ ಸಂಖ್ಯೆ ಕಡಿಮೆಯಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸರ್ವಾಧಿಕಾರಿ ಸಿಎಂ ಯೋಗಿ ಆದಿತ್ಯನಾಥ್ ವಜಾಗೊಳಿಸಿ- ಡಿಕೆಶಿ ಆಗ್ರಹ
Advertisement
UP is not one of those "rich" places govt always refers to when justifying opening up lockdown. I would invite people to explain why so many had to die in Pakistan and so few in UP. Look closely at the chart. And think@zfrmrza @DrMusadikMalik @Rashidlangrial #COVIDー19
(2/2)
— Fahd Husain (@Fahdhusain) June 7, 2020
Advertisement
ನಮ್ಮಲ್ಲಿ ಕಠಿಣ ಲಾಕ್‍ಡೌನ್ ಮಾಡದ ಕಾರಣ ಸಾವು ಹೆಚ್ಚಾಗಿದೆ. ಉತ್ತರ ಪ್ರದೇಶ ಶ್ರೀಮಂತ ರಾಜ್ಯವಲ್ಲ. ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಯಾಕೆ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ 21.22 ಕೋಟಿ ಜನಸಂಖ್ಯೆಯಿದ್ದರೆ, ಉತ್ತರ ಪ್ರದೇಶದಲ್ಲಿ 2012ರ ಜನಗಣತಿ ಪ್ರಕಾರ 20.42 ಕೋಟಿ ಜನಸಂಖ್ಯೆಯಿದೆ. ಪಾಕಿಸ್ತಾನದಲ್ಲಿ ಒಟ್ಟು 1,05,118 ಮಂದಿಗೆ ಸೋಂಕು ಬಂದಿದ್ದು, 2096 ಮಂದಿ ಮೃತಪಟ್ಟಿದ್ದಾರೆ. 34,355 ಮಂದಿ ಗುಣಮುಖರಾಗಿದ್ದು, 70,763 ಸಕ್ರಿಯ ಪ್ರಕರಣಗಳಿವೆ.
ಉತ್ತರ ಪ್ರದೇಶದಲ್ಲಿ 10,536 ಮಂದಿಗೆ ಸೋಂಕು ಬಂದಿದ್ದು, 275 ಮಂದಿ ಮೃತಪಟ್ಟಿದ್ದಾರೆ. 6,185 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 4,076 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.