ಬಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡಲೆ ಒಂದು ಆರೋಗ್ಯಕರ ಸ್ನ್ಯಾಕ್ಸ್ ಎನ್ನಬಹುದು. ಕೆಲವರಿಗೆ ನೆಲಗಡೆಲೆಯನ್ನು ಬೇಯಿಸಿ ತಿನ್ನಲು ಇಷ್ಟವಾದರೆ, ಇನ್ನು ಕೆಲವರಿಗೆ ಅದನ್ನು ಹುರಿದು ತಿನ್ನಲು ಇಷ್ಟ. ಅಲ್ಲದೇ ಅವಲಕ್ಕಿ, ಚಿತ್ರನ್ನ, ಪುಳಿಯೋಗರೆ ಸೇರಿದಂತೆ ಅನೇಕ ಅಡುಗೆ ಮಾಡುವಾಗ ಸ್ವಲ್ಪ ನೆಲಗಡೆಲೆ ಹಾಕಿದರೆ ಅಡುಗೆಯ ರುಚಿಯೂ ಹೆಚ್ಚುತ್ತದೆ. ಇದರಲ್ಲಿ ಅತ್ಯುತ್ತಮವಾದ ಕೊಬ್ಬಿನಂಶ, ನಾರಿನಂಶ, ಪೊಟಾಷ್ಯಿಯಂ, ರಂಜಕ, ವಿಟಮಿನ್ ಬಿ, ಮೆಗ್ನಿಷ್ಯಿಯಂ ಇದೆ. ಹೀಗಾಗಿ ನೆಲಗಡೆಲೆಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
Advertisement
ಬಾದಾಮಿಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದು ಸಮಾನ್ಯವಾಗಿ ಗೊತ್ತಿರುವ ವಿಚಾರ. ಆದರೆ ನೆಲಗಡಲೆಯನ್ನು ನೆನೆಸಿ ತಿಂದರೆ ಎಷ್ಟು ಆರೋಗ್ಯಕರ ಲಾಭ ಸಿಗುತ್ತದೆ ಎಂದು ಹಲವರಿಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ.
Advertisement
ನೆನೆ ಹಾಕಿದ ನೆಲಗಡೆಲೆಯ ಆರೋಗ್ಯಕರ ಲಾಭವೇನು?
Advertisement
1. ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
ಸಾಮಾನ್ಯವಾಗಿ ಹಲವರಿಗೆ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಈ ರೀತಿ ಸಮಸ್ಯೆ ಇರುವವರು ಪ್ರತಿದಿನ ಸ್ವಲ್ಪ ನೆಲಗಡಲೆ ನೆನೆ ಹಾಕಿ ತಿಂದರೆ ಹೊಟ್ಟೆ ಉಬ್ಬುವ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿಯಾಗುವಂತೆ ನೋಡಿಕೊಳ್ಳುತ್ತದೆ.
Advertisement
2. ಹೃದಯ ಸಮಸ್ಯೆಗೆ
ನೆಲಗಡಲೆಯಲ್ಲಿ ಹೃದಯದ ಆರೋಗ್ಯ ವೃದ್ಧಿಸುವ ಗುಣವಿದೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಆಹಾರಕ್ರಮದ ಕಡೆಗೆ ಹೆಚ್ಚಿಗೆ ನಿಗಾ ವಹಿಸಬೇಕು. ನೆಲಗಡಲೆಯನ್ನು ನೀರಿನಲ್ಲಿ ನೆನೆ ಹಾಕಿ ತಿಂದರೆ, ಅದು ಹೃದಯದ ಸಮಸ್ಯೆ ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಅಲ್ಲದೇ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ಮಾಡುತ್ತದೆ.
3. ಬೆನ್ನು ನೋವುಗೆ
ಇತ್ತೀಚಿನ ಜೀವನ ಶೈಲಿಯಿಂದ ಬೆನ್ನುನೋವು ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಬೆನ್ನು ನೋವು ಬರಲು ವಯಸ್ಸಾಗಬೇಕು ಎನ್ನುವ ಹಾಗಿಲ್ಲ, ಚಿಕ್ಕ ಪ್ರಾಯದಲ್ಲಿಯೇ ಬೆನ್ನು ನೋವಿನ ಸಮಸ್ಯೆ ಹಲವರಿಗೆ ಕಾಡುತ್ತದೆ. ನಾವು ಕೂರುವ ಭಂಗಿ ಮತ್ತಿತರ ಕಾರಣಗಳಿಂದ ಬೆನ್ನು ನೋವು ಬರುತ್ತದೆ. ನೆನೆ ಹಾಕಿದ ನೆಲಗಡಲೆ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ತಿಂದರೆ ಇಂತಹ ಬೆನ್ನು ನೋವು ಕಡಿಮೆ ಆಗುತ್ತದೆ.
4. ಕಟ್ಟು ಮಸ್ತಿನ ಮೈಕಟ್ಟಿಗಾಗಿ
ಕಟ್ಟು ಮಸ್ತಿನ ಮೈಕಟ್ಟು ಬೇಕೆಂದು ಹಲವರು ಜಿಮ್‍ನಲ್ಲಿ ತಾಸುಗಟ್ಟೆಲೆ ವರ್ಕೌಟ್ ಮಾಡುತ್ತಾರೆ. ಹೀಗೆ ವರ್ಕೌಟ್ ಮಾಡುವವರು ತಾವು ಸೇವಿಸುವ ಪೌಷ್ಠಿಕ ಆಹಾರಗಳ ಜೊತೆಗೆ ಸ್ವಲ್ಪ ನೆನೆಸಿದ ನೆಲಗಡಲೆಯನ್ನು ಸೇವಿಸುವುದು ಒಳ್ಳೆದು. ಸದೃಢ ಮೈಕಟ್ಟು ಪಡೆಯುವಲ್ಲಿ ನೆಲಗಡಲೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಹಾಕಿ ಮೊಳಕೆ ಬರಿಸಿ ತಿಂದರೆ ಆರೋಗ್ಯಕ್ಕೆ ಇನ್ನೂ ಉತ್ತಮ.
5. ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತದೆ
ಕಲುಷಿತ ವಾತಾವರಣ ಹಾಗೂ ರಾಸಾಯನಿಕ ಸಿಂಪಡಿಸಿದ ಆಹಾರ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಮ್ಮ ದೇಹದಲ್ಲಿರುವ ಫ್ರೀ ರ‌್ಯಾಡಿಕಲ್ಸ್ ಹೋಗಲಾಡಿಸುವಲ್ಲಿ ನೆನೆಸಿದ ನೆಲಗಡಲೆ ಸೇವನೆ ಉಪಯುಕ್ತವಾಗಿದೆ. ಇದರಲ್ಲಿ ಕಬ್ಬಿಣದಂಶ, ಫೋಲೆಟ್, ಕ್ಯಾಲ್ಸಿಯಂ ಇದ್ದು ಕ್ಯಾನ್ಸರ್ ಕಣಗಳು ದೇಹದಲ್ಲಿ ಉತ್ಪತ್ತಿಯಾಗದಂತೆ ತಡೆದು, ಆರೋಗ್ಯವಾಗಿರಲು ಸಹಕರಿಸುತ್ತದೆ.