ಉಡುಪಿ: ಇಂದು ರಾತ್ರಿ 12.16ಕ್ಕೆ ಭಗವಾನ್ ಶ್ರೀಕೃಷ್ಣನ ಜನ್ಮವಾಗುತ್ತದೆ. ಹುಟ್ಟುವ ಮುದ್ದು ಕೃಷ್ಣನಿಗೆ ನಾಲ್ವರು ಸ್ವಾಮೀಜಿಗಳು ತುಪ್ಪದ ಉಂಡೆ ತಯಾರಿಸುವ ಸಂಪ್ರದಾಯ ಉಡುಪಿಯಲ್ಲಿದೆ.
ಕೊರೊನಾ ಸಾಂಕ್ರಾಮಿಕ ಕಾರಣಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಆಚರಣೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಅವಕಾಶ ಇಲ್ಲ. ಆದರೆ 800 ವರ್ಷದಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಆಚರಣೆಗೆ ಉಡುಪಿಯಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ.
Advertisement
Advertisement
ದೇವರಿಗೆ ವಿಶೇಷ ಅಲಂಕಾರ ಮಾಡಿ ಮಹಾ ಪೂಜೆಯನ್ನು ನೆರವೇರಿಸಿ ಲಕ್ಷ ತುಳಸಿ ಅರ್ಚನೆ ಅನ್ನ ದೇವರಿಗೆ ಸಲ್ಲಿಸಲಾಯಿತು. ಕೃಷ್ಣ ಮಠದ ರಥಬೀದಿಯಲ್ಲಿ ನಾಳೆ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.
Advertisement
ರಾತ್ರಿ ಮಠದ ಗರ್ಭಗುಡಿಯ ಒಳಗೆ ಅಘ್ರ್ಯ ಪ್ರಧಾನ ನಡೆಯುತ್ತದೆ. ರಾತ್ರಿ 12 ಗಂಟೆ 16 ನಿಮಿಷಕ್ಕೆ ಶ್ರೀ ಕೃಷ್ಣನ ಜನ್ಮ ಕಾಲದಲ್ಲಿ ಗರ್ಭಗುಡಿಯ ಒಳಗೆ ಉಂಡೆ ಚಕ್ಕುಲಿ ಮತ್ತಿತರ ಭಕ್ಷ್ಯಗಳನ್ನು ಇಟ್ಟು ಪೂಜಿಸಲಾಗುತ್ತದೆ. ಕೃಷ್ಣನ ಭಕ್ತರಿಗೆ ಲಕ್ಷ ಉಂಡೆ ಲಕ್ಷ ಚಕ್ಕುಲಿ ಈಗಾಗಲೇ ಸಿದ್ಧವಾಗಿದೆ. ದೇವರಿಗೆ ಇಡುವ ಉಂಡೆ ಚಕ್ಕುಲಿಯನ್ನು ಸ್ವಾಮೀಜಿಗಳೇ ತಯಾರಿಸುತ್ತಾರೆ. ಇದು ಉಡುಪಿ ಕೃಷ್ಣ ಮಠದ ಸಂಪ್ರದಾಯ.
Advertisement
ಭೋಜನ ಶಾಲೆಯಲ್ಲಿ ಅದಮಾರು ಈಶಪ್ರಿಯ ತೀರ್ಥರು, ಪಲಿಮಾರು ವಿದ್ಯಾಧೀಶ ಸ್ವಾಮೀಜಿ, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ, ಸ್ವಾಮೀಜಿ ಪಲಿಮಾರು ಕಿರಿಯ ಶ್ರೀಗಳಾದ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಲಡ್ಡು ತಯಾರಿಸಿದರು. ವಿಶೇಷ ಲಡ್ಡು ಕೃಷ್ಣನಿಗೆ ಅರ್ಪಿಸಿದ ಮೇಲೆ ಭಕ್ತರಿಗೆ ಹಂಚಲಾಗುತ್ತದೆ.