– ಮುಂಬೈಯಿಂದ ಬಂದು ಕ್ವಾರಂಟೈನ್ ಆಗಿದ್ದರು
ಮಂಗಳೂರು: ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ಮಂಗಳೂರಿಗೆ ಬಂದ ಏಳು ಮಂದಿ ಇತರ ಒಬ್ಬ ಸಹಿತ ಸೇರಿ ಒಟ್ಟು 8 ಮಂದಿಗೆ ಇಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಬಂದು ಉಡುಪಿಯಲ್ಲಿ 7 ಮಂದಿ ಕ್ವಾರೆಂಟೈನ್ ಆಗಿದ್ದರು. ಕ್ವಾರಂಟೈನ್ ಅವಶಿ ಮುಗಿದ ನಂತರ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇದೀಗ ಮಂಗಳೂರಿನಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಇರುವುದು ಪತ್ತೆಯಾಗಿದೆ.
Advertisement
Advertisement
ಬಂಟ್ವಾಳದ 60 ವರ್ಷದ ವೃದ್ಧೆಗೂ ಸೋಂಕು ತಗುಲಿದ್ದು, ಮೂಲ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಇಂದು ಎಂಟು ಮಂದಿ ಪುರುಷರು, ನಾಲ್ವರು ಮಹಿಳೆಯರಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ 768 ಪ್ರಕರಣಗಳ ಪೈಕಿ 82 ಮಂದಿ ಗುಣಮುಖರಾಗಿದ್ದು, 685 ಸಕ್ರಿಯ ಪ್ರಕರಣಗಳಿವೆ.