ಉಚಿತವಾಗಿ ಬಿಡಲು ಒಪ್ಪದ ಟೋಲ್ ಸಿಬ್ಬಂದಿ- ಬಿಜೆಪಿ ಮುಖಂಡನಿಂದ ಹಲ್ಲೆ

Public TV
1 Min Read
klr bjp leader

ಕೋಲಾರ: ನಗರದ ಗಡಿಯಲ್ಲಿರುವ ಟೋಲ್‍ನಲ್ಲಿ ಉಚಿತವಾಗಿ ತಮ್ಮ ಕಾರನ್ನು ಬಿಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮುಖಂಡ ಟೋಲ್ ಸಿಬ್ಬಂದಿ ಹಾಗೂ ನಿವೃತ್ತ ಯೋಧನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಟೋಲ್ ಬಳಿ ಘಟನೆ ನಡೆದಿದ್ದು, ಬಿಜೆಪಿ ಮುಖಂಡ ಹಲ್ಲೆ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಿಜೆಪಿ ಸ್ಥಳೀಯ ಮುಖಂಡ ವಿಶ್ವನಾಥ ರೆಡ್ಡಿ ಹಾಗೂ ಆತನ ಸಹಚರರು ತಮ್ಮ ಪರಿಚಯದ ಪ್ರಭಾವಿ ವ್ಯಕ್ತಿಯೊಬ್ಬರ ಕಾರನ್ನು ಟೋಲ್ ಕಟ್ಟಿಸಿಕೊಳ್ಳದೆ ಉಚಿತವಾಗಿ ಬಿಡಲು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಉಚಿತವಾಗಿ ಬಿಡಲು ಟೋಲ್ ಸಿಬ್ಬಂದಿ ಒಪ್ಪಿಲ್ಲ, ಹೀಗಾಗಿ ಟೋಲ್ ಭದ್ರತೆಗೆ ನಿಯೋಜನೆ ಮಾಡಲಾಗಿದ್ದ ನಿವೃತ್ತ ಯೋಧ ವಿಜಯ್ ಮೇಲೆ ಹಲ್ಲೆ ಮಾಡಲಾಗಿದೆ.

vlcsnap 2021 04 10 19h01m47s050

ಯೋಧನ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದದಲ್ಲಿ ವೈರಲ್ ಅಗಿದೆ. ಟೋಲ್ ಸಿಬ್ಬಂದಿಯೊಂದಿಗೆ ಸ್ಥಳೀಯ ಮುಖಂಡರ ನಡೆದುಕೊಂಡ ರೀತಿಗೆ ಆಕ್ರೊಶ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *