ಮಂಗಳೂರು: ನಗರದಲ್ಲಿ ಉಗ್ರರ ಪರ ಗೋಡೆಯಲ್ಲಿ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವನನ್ನು ಬಂಧಿಸಲಾಗಿದೆ.
ಬಂಧಿತನನ್ನು ಮಹಮ್ಮದ್ ನಝೀರ್ ಎಂದು ಗುರುತಿಸಲಾಗಿದೆ. ಈತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಿವಾಸಿ. ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಓರ್ವನನ್ನು ಮಂಗಳೂರು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶಂಕಿತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ ಸಕ್ರ್ಯೂಟ್ ಹೌಸ್ ರಸ್ತೆಯಲ್ಲಿರೋ ಅಪಾರ್ಟ್‍ಮೆಂಟ್ ಗೋಡೆಯ ಮೇಲೆ ಹ್ಯಾಷ್ ಟ್ಯಾಗ್ ಹಾಕಿ ‘ಲಷ್ಕರ್ ಜಿಂದಾಬಾದ್’ ಎಂದು ಕಿಡಿಗೇಡಿಗಳು ಬರೆದಿದ್ದರು. ಕಾಂಪೌಂಡ್ ಮೇಲೆ ‘ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ತಾಲಿಬಾನ್ ಆ?ಯಂಡ್ ಲಷ್ಕರ್-ಇ-ತೊಯ್ಬಾ ಟು ಡೀಲ್ ವಿತ್ ಸಂಘೀಸ್ ಆ್ಯಂಡ್ ಮನ್ವೇದಿಸ್’ ಎಂದು ಇಂಗ್ಲೀಷ್‍ನಲ್ಲಿ ಬರೆಯಲಾಗಿತ್ತು. ಅಂದರೆ ಸಂಘಿಗಳು ಮತ್ತು ಮನುವಾದಿಗಳ ವಿರುದ್ಧ ಹೋರಾಟಕ್ಕೆ ಲಷ್ಕರ್-ಇ-ತೊಯ್ಬಾ, ತಾಲಿಬಾನ್ ಸಂಘಟನೆಗೆ ಆಹ್ವಾನಿಸಲು ನಮ್ಮನ್ನು ಪ್ರೇರೇಪಿಸಬೇಡಿ ಎಂದಾಗಿತ್ತು. ಈ ಮೂಲಕ ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆ ಹಾಕಿದ್ದರು. ಈ ವಿಚಾರ ಮಂಗಳೂರಿನಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.
ಈ ಸಂಬಂಧ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದ ವೇಲೇ ಬೈಕಿನಲ್ಲಿ ಬಂದು ಗೋಡೆಯಲ್ಲಿ ಬರೆದು ಪರಾರಿಯಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ಖಚಿತ ಮೊಬೈಲ್ ಲೊಕೇಶನ್ ಅಧರಿಸಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪ್ರವಾದಿಗೆ ಕೋಪ ಬಂದ್ರೆ ದೇಹದಿಂದ ತಲೆ ಬೇರ್ಪಡುತ್ತೆ- ಮಂಗಳೂರಲ್ಲಿ ಮತ್ತೆ ಗೋಡೆಬರಹ