– ಹಣ ಖರ್ಚು ಮಾಡಿ ದೂರ ದೂರಿಂದ ಬರಬೇಡಿ
ಬೆಂಗಳೂರು: ಈ ವರ್ಷ ನಾನು ಹುಟ್ಟು ಹಬ್ಬವನ್ನ ಆಚರಿಸಲ್ಲ. ಹಾಗಾಗಿ ನೀವು ದೂರದ ಊರುಗಳಿಂದ ಹಣ ಖರ್ಚು ಮಾಡಿಕೊಂಡು ಬರಬೇಡಿ ಎಂದು ನಟ ದರ್ಶನ್ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
2020ರಲ್ಲಿ ಕೊರೊನಾದಿಂದಾಗಿ ಎಷ್ಟೋ ಜನ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದೀರಿ. ಇಂತಹ ಸಮಯದಲ್ಲಿ ಹಣ ವ್ಯಯ ಮಾಡೋದು ಬೇಡ. ಎಷ್ಟೋ ಜನ ಕೆಲಸ ಕಳೆದುಕೊಂಡರು. ಹೊಟ್ಟೆಗೆ ಹಿಟ್ಟಿಲ್ಲ. 2020ರಲ್ಲಿ ವಿಧಿ ನಮಗೆ ಹಲವು ಪಾಠ ಕಲಿಸಿದೆ. ಆದ್ದರಿಂದ ಮೊದಲು ನೀವು ಚೆನ್ನಾಗಿರಿ ಎಂದು ಹೇಳಿದ್ದಾರೆ.
2022ಕ್ಕೆ ಈ ಎಲ್ಲ ಕಷ್ಟಗಳು ದೂರವಾದ ಮೇಲೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳೋಣ. ಕೊರೊನಾದಿಂದಾ ನಿಮ್ಮ ನಷ್ಟವನ್ನ ತುಂಬಿಕೊಳ್ಳಿ. ಶುಭಾಶಯ ತಿಳಿಸಲು ಬೆಂಗಳೂರಿಗೆ ಬರಬೇಡಿ ಅಂತ ಹೇಳಿದರು.