– ಹೊಸ ಪ್ರಯೋಜಕರ ಹುಡುಕಾಟದಲ್ಲಿ ಬಿಸಿಸಿಐ
– ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
ಮುಂಬೈ: ಐಪಿಎಲ್ 2020ರ ಟೈಟಲ್ ಹೊಸ ಪ್ರಯೋಜಕರಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹುಡುಕಾಟ ಆರಂಭಿಸಿದೆ.
2018 ರಿಂದಲೂ ಐಪಿಎಲ್ ಟೈಟಲ್ ಪ್ರಯೋಜಕತ್ವವನ್ನುವ ವಿವೋ ಸಂಸ್ಥೆ ವಹಿಸಿಕೊಂಡಿತ್ತು. ಆದರೆ ಭಾರತ-ಚೀನಾ ನಡುವಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಐಪಿಎಲ್ ಪ್ರಯೋಜಕತ್ವವನ್ನು ಕೈಬಿಡಲು ಸ್ವಯಂ ವಿವೋ ಸಂಸ್ಥೆ ಹಿಂದೆ ಸರಿದಿದೆ ಎಂದು ವರದಿಯಾಗಿದೆ. ಸೆ.19 ರಿಂದ ನ.10ರ ವರೆಗೂ ಯುಎಇಯಲ್ಲಿ ಐಪಿಎಲ್ 2020ರ ಟೂರ್ನಿ ನಡೆಯಲಿದೆ. ಆದ್ದರಿಂದ ಅಲ್ಪ ಅವಧಿಯಲ್ಲೇ ಭಾರತಕ್ಕೆ ಸೇರಿದ ಹೊಸ ಪ್ರಯೋಜಕರನ್ನು ಬಿಸಿಸಿಐ ಹುಡುಕಾಟ ನಡೆಸಬೇಕಿದೆ.
Advertisement
Advertisement
ಐಪಿಎಲ್‍ಗಾಗಿ ಬಿಸಿಸಿಐನೊಂದಿಗೆ 2018ರಲ್ಲಿ 5 ವರ್ಷಗಳ ಅವಧಿಗೆ 2,199 ಕೋಟಿ ರೂ.ಗಳ ಒಪ್ಪಂದವನ್ನು ವಿವೋ ಮಾಡಿಕೊಂಡಿತ್ತು. ಟೈಟಲ್ ಪ್ರಯೋಕತ್ವ ಒಪ್ಪದದಂತೆ ಪ್ರತಿ ವರ್ಷ 440 ಕೋಟಿ ರೂ.ಗಳನ್ನು ವಿವೋ ಬಿಸಿಸಿಐಗೆ ನೀಡುತ್ತಿತ್ತು. ಈ ಒಪ್ಪಂದ 2022ರ ಐಪಿಎಲ್ ಟೂರ್ನಿ ಬಳಿಕ ಮುಕ್ತಾಯವಾಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರಿಯರು ಸೇರಿದಂತೆ ಟೀಂ ಇಂಡಿಯಾ ಅಭಿಮಾನಿಗಳು ಐಪಿಎಲ್ ಪ್ರಯೋಜಕತ್ವದಿಂದ ಚೀನಾ ಮೂಲಕದ ವಿವೋ ಸಂಸ್ಥೆಯನ್ನು ಕೈಬಿಡಬೇಕು ಎಂದು ಬಿಸಿಸಿಐಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ವಿವೋ ಸ್ವಯಂ ಟೂರ್ನಿಯ ಟೈಟಲ್ ಪ್ರಯೋಜಕತ್ವದಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.
Advertisement
Jio IPL or Patanjali IPL#IPL2020
— Anuj Sardesai (@SardesaiAnuj) August 4, 2020
Advertisement
ವಿವೋ ಸಂಸ್ಥೆಯೊಂದಿಗೆ ಅಧಿಕೃತವಾಗಿ ಒಪ್ಪಂದವನ್ನು ರದ್ದು ಮಾಡಿಕೊಳ್ಳುವ ಮುನ್ನ ಹೊಸ ಪ್ರಯೋಜಕರನ್ನು ಪಡೆಯುವ ಅನಿವಾರ್ಯತೆ ಸದ್ಯ ಬಿಸಿಸಿಐಗೆ ಎದುರಾಗಿದೆ. ಇದೇ ವೇಳೆಯಲ್ಲಿ ವಿವೋ ಪ್ರಯೋಜಕತ್ವವನ್ನು ಕೈ ಬಿಡಲು ಚಿಂತನೆ ನಡೆಸಿದೆ ಎಂಬ ಸುದ್ದಿ ಹೊರ ಬರುತ್ತಿದಂತೆ ಅಭಿಮಾನಿಗಳು ಭಾರತದ ಕೆಲ ಸಂಸ್ಥೆಗಳನ್ನು ಐಪಿಎಲ್ ಪ್ರಯೋಕತ್ವಕ್ಕಾಗಿ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಪ್ರಮುಖವಾಗಿ ಜಿಯೋ, ಪತಂಜಲಿ ಹೆಸರುಗಳಲ್ಲಿ ಸದ್ಯ ಕೇಳಿಬರುತ್ತಿದೆ. ಕೊರೊನಾ ವೈರಸ್ ಕಾರಣದಿಂದ ಪ್ರೇಕ್ಷಕರಿಲ್ಲದೇ ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ.
Bhagwan ki kripa se #MukeshAmbani Bhaisaab ka thikthak chal raha hai ..Ye #IPL2020 ke sponsorship ka thoda dekh lijiye … Chiniyo ko bhagane ka time aa gaya hai ….????
— SK (@yesyeskay24) August 4, 2020
We want Jio IPL 2020 https://t.co/JYO3S7PMSh
— Mr.333 (@cricket_cinema) August 4, 2020