ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಪ್ರತಿ ದಿನ ಹೊಸ ದಾಖಲೆ ಸೃಷ್ಟಿಸುತ್ತಲೇ ಇದೆ. ಅಬ್ಬಾಬ್ಬ ಅಂದ್ರೆ ಇನ್ನೊಂದಿಷ್ಟು ದಿನಗಳ ಈ ಸಂಕಷ್ಟ, ಲಾಕ್‍ಡೌನ್ ಜಂಜಾಟ ಅಂದುಕೊಂಡವರಿಗೆ ಹೊಸ ಅಧ್ಯಯನ ವರದಿಯೊಂದು ಶಾಕ್ ನೀಡಿದೆ. ಹೌದು ಐಐಟಿ ಭುವನೇಶ್ವರ ಮತ್ತು ಏಮ್ಸ್ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಆತಂಕದ ವಿಚಾರ ಗೊತ್ತಾಗಿದೆ.
ಪ್ರೊ. ವಿ. ವಿನೋಜ್ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಲಾಗಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ತಾಪಮಾನ ಕುಸಿತದಿಂದ ಕೊರೊನಾ ವೈರಸ್ ಗೆ ಪೂರಕ ವಾತವರಣ ಸೃಷ್ಟಿಯಾಗಲಿದೆ. ಇದು ಕೊರೊನಾ ವೈರಸ್ ಹರಡುವಿಕೆ ವೇಗ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಅಧ್ಯಯನ ಹೇಳಿದೆ.
Advertisement
Advertisement
ಐಐಟಿ ಮತ್ತು ಏಮ್ಸ್ ಹೊರ ಹಾಕಿರುವ ಈ ಜಂಟಿ ಅಧ್ಯಯನ ಭಾರತದಲ್ಲಿ ಎರಡನೇ ಹಂತದಲ್ಲಿ ಸೋಂಕು ಹರಡುವ ಎಚ್ಚರಿಕೆ ನೀಡಿದೆ. ಈ ಹಿಂದೆ ಚೀನಾದ ತಜ್ಞರು ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದಕ್ಕೆ ಪೂರಕ ಎನ್ನುವಂತೆ ಯುರೋಪಿಯನ್ ದೇಶಗಳಲ್ಲಿ ಸೋಂಕು ಹೆಚ್ಚಾಗಿತ್ತು. ಈ ಭಾರತದ ತಜ್ಞರೇ ಇಂತದೊಂದು ಮಾಹಿತಿ ಹೊರಹಾಕಿದ್ದು ಮತ್ತಷ್ಟು ಭೀತಿ ಹೆಚ್ಚಿಸಿದೆ.
Advertisement
ಉತ್ತರ ಭಾರತವೂ ಸೇರಿ ರಾಜ್ಯದ ಹಲವೆಡೆ ಅತಿವೃಷ್ಠಿ: ಈ ನಡುವೆ ದೇಶದಲ್ಲಿ ಮುಂಗಾರು ಶುರುವಾಗಿದ್ದು ಎಲ್ಲೆಡೇ ಉತ್ತಮ ಮಳೆಯಾಗುತ್ತಿದೆ. ಅಸ್ಸಾಂ, ಬಿಹಾರ, ಮಹಾರಾಷ್ಟ್ರದಲ್ಲಿ ಅತಿವೃಷ್ಠಿಯಾದ್ರೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆ ಈ ಮುಂಗಾರು ಮಳೆಯಿಂದ ತಾಪಮಾನ ಕಡಿಮೆಯಾಗಲಿದ್ದು ಮತ್ತೊಂದು ಆತಂಕ ಹುಟ್ಟಿಸಿದೆ.
Advertisement
ಈ ವರ್ಷದ ಕೊನೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎಂದು ಅಂದುಕೊಂಡಿದ್ದ ಜನರಿಗೆ ಐಐಟಿ ಏಮ್ಸ್ ಅಧ್ಯಯನ ವರದಿ ಚಳಿಗಾಲ ಮಳೆಗಾಲ ದೇಶದಲ್ಲಿ ಸೃಷ್ಟಿಸಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದೆ. ಹೀಗಾಗಿ ಮತ್ತಷ್ಟು ಎಚ್ಚರದಿಂದರಬೇಕಿದೆ.