ದಾವಣಗೆರೆ: ಭಾರೀ ಮಳೆಯಿಂದ ತುಂಗಾಭದ್ರೆ ಮೈ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನ ಕೂಡಲೇ ಮನೆಯನ್ನು ಖಾಲಿ ಮಾಡುವಂತೆ ಹೊನ್ನಾಳಿ ತಾಲೂಕು ಆಡಳಿತ ಸೂಚನೆ ನೀಡಿದೆ.
ಈಗಾಗಲೇ ಹೊನ್ನಾಳಿಯ ಪಟ್ಟಣದಲ್ಲಿ ಮನೆಗಳ ಮುಂಭಾಗಕ್ಕೆ ನೀರು ನಿಂತಿದ್ದು, ಕೂಡಲೇ ಜನರು ಸ್ಥಳೀಯ ಗಂಜಿ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ – ಸ್ಥಳೀಯ ನಿವಾಸಿಗಳ ಸ್ಥಳಾಂತರ
ನೀರಿನ ಮಟ್ಟ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ನದಿ ಪಾತ್ರದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ. ನೆರೆ ಮತ್ತಷ್ಟು ಜಾಸ್ತಿಯಾದರೆ ಹರಿಹರದ ಸಾರಥಿ, ಉಕ್ಕಡಗಾತ್ರಿ, ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ.