ರಾಯಚೂರು: ಪದೇ ಪದೇ ಬೇಜವಾಬ್ದಾರಿ ಹೇಳಿಕೆ ನೀಡುವ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ಉಚ್ಛಾಟನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಹೇಳಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ಧ್ರುವನಾರಾಯಣ, ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮೊದಲಿನಿಂದಲೂ ಇಂತಹ ಹೇಳಿಕೆ ನೀಡುವಲ್ಲಿ ಈಶ್ವರಪ್ಪ ನಿಸ್ಸೀಮರು. ನಾಲಿಗೆಗೆ ಎಲುಬಿಲ್ಲ, ಈಶ್ವರಪ್ಪಗೆ ಮೆದುಳು ಸಹ ಇದೆಯೋ, ಇಲ್ಲವೋ ಗೊತ್ತಿಲ್ಲಾ. ಮಾನಸಿಕ ಸ್ಥಿಮಿತತೆಯನ್ನು ಈಶ್ವರಪ್ಪ ಕಳೆದುಕೊಂಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದೆಯಾದರೂ ಬಿಡಬೇಕು ಎಂದಿದ್ದಾರೆ.
ಇತ್ತೀಚೆಗೆ ತಲೆಗಳನ್ನು ತೆಗೆಯುವ ಬಗ್ಗೆ ಮಾತನಾಡಿದ್ದರು. ರಾಗ ದ್ವೇಷಗಳಿಲ್ಲದೆ ಆಡಳಿತ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದ್ವೇಷ ದಳ್ಳೂರಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಪದೇ ಪದೇ ನೀಡುವುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಮುಖ್ಯಮಂತ್ರಿಗಳು ಇವರನ್ನು ಕೂಡಲೇ ಸಂಪುಟದಿಂದ ಉಚ್ಛಾಟಿಸಬೇಕು ಎಂದು ಧ್ರುವನಾರಾಯಣ ಹೇಳಿದ್ದಾರೆ. ಇದನ್ನೂ ಓದಿ:ಈಶ್ವರಪ್ಪಗೆ ಮಂಡೆ ಸರಿ ಇಲ್ಲ, ಬಿಜೆಪಿ ಶೀಘ್ರ ಚಿಕಿತ್ಸೆ ಕೊಡಿಸಲಿ: ವಿನಯ್ ಕುಮಾರ್ ಸೊರಕೆ ಸಲಹೆ