ಡೆಹ್ರಾಡೂನ್: ಇಬ್ಬರು ಸಹೋದರಿಯರು ಒಬ್ಬ ಪುರುಷನನ್ನು ತನ್ನ ಗಂಡ ಎಂದು ಹೇಳಿಕೊಂಡು ಜಗಳವಾಡಿರುವ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ವಿವಾಹೇತರ ವ್ಯಕ್ತಿ ತನ್ನ ಹೆಂಡತಿಯ ಸೋದರಸಂಬಂಧಿ ಸಹೋದರಿಯೊಂದಿಗೆ ಮದುವೆಯಾಗಿದ್ದಾನೆ. ನಂತರ, ಇಬ್ಬರು ಸಹೋದರಿಯರು ಅವರು ತಮ್ಮ ಪತಿ ಎಂದು ಹೇಳಿಕೊಂಡು ಜಗಳವಾಡಿದ್ದಾರೆ.
ಪಶ್ಚಿಮ ಅಂಬರ್ ತಲಾಬ್ ನಿವಾಸಿಯಾದ ಮಹಿಳೆ 10 ವರ್ಷಗಳ ಹಿಂದೆ ಮೀರತ್‍ನ ಮಾವನಾ ಪಟ್ಟಣದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಈತ ತನ್ನ ಹೆಂಡತಿ ಸೋದರ ಸಂಬಂಧಿ ಸಹೋದರಿಯೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದನು. ಈ ವಿಚಾರವಾಗಿ ದಂಪತಿಗಳ ನಡುವೆ ವಾಗ್ವಾದ ನಡೆದ ನಂತರ ಈತ ತನ್ನ ಪತ್ನಿ ಮತ್ತು ಹೆತ್ತವರೊಂದಿಗೆ ವಾಸಿಸುತ್ತಿದ್ದನು. ಆದರೆ ನಾಲ್ಕು ತಿಂಗಳ ಹಿಂದೆ, ಈ ವ್ಯಕ್ತಿ ತನ್ನ ಹೆಂಡತಿಯ ಸಹೋದರಿಯೊಂದಿಗೆ ಮೀರತ್‍ಗೆ ಬಂದು ವಾಸವಾಗಿದ್ದನು. ನಾಪತ್ತೆಯಾಗಿರುವ ಪತಿಯ ಕುರಿತಾಗಿ ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.
ಮಹಿಳೆಯ ಒಂದು ದಿನ ರೂರ್ಕಿಯಾ ರೋಡ್ವೇಸ್ ನಿಲ್ದಾಣದಲ್ಲಿ ತನ್ನ ಪತಿ ಮತ್ತು ಸಹೋದರಿ ಒಟ್ಟಿಗೆ ಇರುವುದನ್ನು ನೋಡಿದ್ದಾಳೆ. ಮಹಿಳೆ ಪತಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾಳೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಠಾಣೆಯಲ್ಲಿ ವಿಚಾರಣೆ ಮಾಡುವ ವೇಳೆಯಲ್ಲಿ ಸಹೋದರಿಯರಿಬ್ಬರು ತನ್ನ ಪತಿ ಎಂದು ಹೇಳಿಕೊಂಡಿದ್ದಾರೆ. ಇಬ್ಬರು ಪೊಲೀಸರ ಎದುರೆ ಜಗಳವನ್ನು ಆರಂಭಿಸಿದ್ದಾರೆ. ಮೀರತ್ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.