ಕಾನ್ಬೆರಾ: ಮಾರಣಾಂತಿಕ ವಿಷಪೂರಿತ ಹಾವು ಒಂದು ಮನೆಯ ಈಜು ಕೊಳದಲ್ಲಿ ಹರಿದಾಡುತ್ತಿರುವುದನ್ನು ಕಂಡು ಆಸ್ಟ್ರೇಲಿಯಾ ಕುಟುಂಬವೊಂದು ಆಶ್ಚರ್ಯ ಪಟ್ಟಿದೆ. ಈ ಹಾವನ್ನು ಈಸ್ಟ್ರನ್ ಬ್ರಾವ್ನ್ ಎಂದು ಗುರುತಿಸಲಾಗಿದ್ದು, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಅಡಿಲೇಡ್ ಮರಿನೋ ಉಪನಗರದ ಮನೆಯೊಂದರಲ್ಲಿ ಈಜಾಡುತ್ತಿರುವುದು ಕಂಡು ಬಂದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಹಾವಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉರಗ ತಜ್ಞ ಅಡಿಲೇಟರ್ ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿಯುವುದರ ಜೊತೆಗೆ ಅದರ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ ಮತ್ತು ಈ ಬಿಸಿಲಿನಲ್ಲಿ ಈಸ್ಟ್ರನ್ ಬ್ರಾವ್ನ್ ಹಾವು ತಂಪಾದ ಸ್ಥಳವನ್ನು ಹುಡುಕಿಕೊಂಡಿದೆ. ಇನ್ನೂ ಕೊಳದಲ್ಲಿದ್ದ ನೀರು ಬಹಳ ಕೆಟ್ಟದಾಗಿತ್ತು ಎಂದು ಕ್ಯಾಪ್ಷನ್ ಹಾಕುವ ಮೂಲಕ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸದ್ಯ ಈ ವೀಡಿಯೋಗೆ ಕಾಮೆಂಟ್ ಗಳ ಸುರಿಮಳೆ ಹರಿದು ಬರುತ್ತಿದದೆ. ಒಬ್ಬರು ಬೇಸಿಗೆಯಲ್ಲಿ ಸಣ್ಣ ಹಾವುಗಳು ಎಲ್ಲೆಡೆ ಇರುವಂತೆ ತೋರುತ್ತದೆ ಎಂದರೆ ಮತ್ತೊಬ್ಬರು ಈ ಹಾವು ಸುಂದರವಾಗಿ ಈಜಾಡುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಈಸ್ಟ್ರನ್ ಬ್ರಾವ್ನ್ ಹಾವನ್ನು ಸಾಮಾನ್ಯವಾಗಿ ಕಂದು ಹಾವು ಎಂದು ಕರೆಯಲಾಗುತ್ತದೆ ಜೊತೆಗೆ ಇದು ಹೆಚ್ಚು ವಿಷಪೂರಿತವಾಗಿರುತ್ತದೆ.