ಬೆಂಗಳೂರು: ಈಗ ನಿಮ್ಮ ಹಿಂದ ನಾಟಕ ಚೆನ್ನಾಗಿದೆ ಎಂದು ಕರ್ನಾಟಕ ಬಿಜೆಪಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದೆ.
ಸಿದ್ದರಾಮಯ್ಯನವರು ಹಿಂದ ಸಮಾವೇಶ ಮಾಡಲು ಮುಂದಾಗುತ್ತಿದ್ದಾರೆ ಎಂಬ ವರದಿಗೆ ಬಿಜೆಪಿ ಕರ್ನಾಟಕ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದೆ.
ಮಾನ್ಯ @siddaramaiah ಅವರೇ,
2013 ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ, ತಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರ್ ಅವರನ್ನು ಉಪಾಯದಿಂದ ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ದೂರ ಸರಿಸಿದಿರಿ.
ಉಪಮುಖ್ಯಮಂತ್ರಿಯಾಗಿಯೂ ಮುಂದುವರೆಯಲು ಬಿಡಲಿಲ್ಲ.
ಈಗ #ಹಿಂದ ಎಂಬ ನಾಟಕ, ಚೆನ್ನಾಗಿದೆ!#BetrayerSiddaramaiah
— BJP Karnataka (@BJP4Karnataka) February 11, 2021
ಸಿದ್ದರಾಮಯ್ಯನವರೇ, 2013 ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ, ತಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರ್ ಅವರನ್ನು ಉಪಾಯದಿಂದ ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ದೂರ ಸರಿಸಿದಿರಿ. ಉಪಮುಖ್ಯಮಂತ್ರಿಯಾಗಿಯೂ ಮುಂದುವರೆಯಲು ಬಿಡಲಿಲ್ಲ. ಈಗ ನಿಮ್ಮ ಹಿಂದ ನಾಟಕ ಚೆನ್ನಾಗಿದೆ ಎಂದು ಬರೆದಿದೆ. ಇದನ್ನೂ ಓದಿ: ನಾನು ಮಾಡಿದ ಅಭಿವೃದ್ಧಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ: ಸಿದ್ದರಾಮಯ್ಯ
ಸಮಾವೇಶದ ಕುರಿತ ಪ್ರಶ್ನೆಗೆ ಹುಬ್ಬಳ್ಳಿಯಲ್ಲಿ ಇಂದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಹಿಂದ್ ಸಮಾವೇಶ ಮಾಡುವುದಿಲ್ಲ. ಕಾಂಗ್ರೆಸ್ ಹಿಂದುಳಿದವರ ಪರವಾಗಿದೆ. ಹೋರಾಟದ ಅವಶ್ಯಕತೆ ಇಲ್ಲ ಎಂದು ಉತ್ತರಿಸಿದ್ದಾರೆ.
ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಸ್ವಾಭಾವಿಕವಾಗಿ ರಾಜ್ಯದಲ್ಲಿ ಉನ್ನತ ಸ್ಥಾನಮಾನಕ್ಕೆ ಅರ್ಹರಾಗಿದ್ದರೂ, ದಲಿತ ಎಂಬ ಕಾರಣಕ್ಕೆ ಅಡ್ಡಗಾಲು ಹಾಕಿದ್ದು ನೀವೇ ಅಲ್ವೇ @siddaramaiah ?
ಈಗ ಹಿಂದ ಸಮಾವೇಶದ ಮೂಲಕ ದಲಿತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ನಾಟಕ ಮಾಡುವುದು ಯಾವ ಪುರುಷಾರ್ಥಕ್ಕಾಗಿ?#BetrayerSiddaramaiah
— BJP Karnataka (@BJP4Karnataka) February 11, 2021
ಕುರುಬರಿಗೆ ಎಸ್ ಟಿ ಮೀಸಲು ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಕುಲಶಾಸ್ತ ಅಧ್ಯಯನದ ವರದಿ ಬಂದಿಲ್ಲ. ವರದಿ ಬರುವ ಮುನ್ನವೇ ಹೋರಾಟ ಬೇಡ ಅಂದಿದ್ದೆ. ನಾನು ಸಿಎಂ ಆಗಿದ್ದ ವೇಳೆ ನಾಲ್ಕು ಜಿಲ್ಲೆಗಳಲ್ಲಿ ಕುರುಬರನ್ನ ಎಸ್ ಟಿಗೆ ಸೇರಿಸಬೇಕು ಅಂತಾ ಆದೇಶ ಮಾಡಿದ್ದೆ. ಎಸ್ ಟಿ ಮೀಸಲು ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಇದು ಆರ್‌ಎಸ್‌ಎಸ್ ಪ್ರೇರಿತ ಹೋರಾಟ. ಈಶ್ವರಪ್ಪ ಅವರನ್ನು ಆರ್‌ಎಸ್‌ಎಸ್ ನವರು ಎತ್ತಿ ಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.