ವಾಷಿಂಗ್ಟನ್: ಎಲೆಕ್ಟ್ರಿಕಲ್ ಕಾರು ತಯಾರಕಾ ಕಂಪನಿಯ ಸ್ಥಾಪಕ ಎಲೋನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಏಕಕಾಲಕ್ಕೆ 143 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವದಾಖಲೆ ಮಾಡಿದೆ.
Advertisement
2017ರಲ್ಲಿ ಭಾರತದ ಇಸ್ರೋ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ನಿರ್ಮಿಸಿತ್ತು. ಇದೀಗ ಸ್ಪೇಸ್ ಎಕ್ಸ್ ಸಂಸ್ಥೆ 143 ಉಪಗ್ರಹಗಳನ್ನು ಉಡಾಯಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.
Advertisement
ಟ್ರಾನ್ಸ್‍ಪೋರ್ಟರ್ 1 ಹಸರಿನ ಯೋಜನೆಯ ಮೂಲಕ ಭಾರತದ ಕಾಲಮಾನ ರಾತ್ರಿ 8.31 ಸುಮಾರಿಗೆ ಅಮೆರಿಕದ ಫ್ಲೋರಿಡಾ ಕೇಪ್ ಕಾನಾವರೆಲ್‍ನಿಂದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಫಾಲ್ಕನ್ 9 ರಾಕೆಟ್ ಉಪಗ್ರಹಗಳನ್ನು ಹೊತ್ತುಕೊಂಡು ನಭಕ್ಕೆ ಹಾರಿತು.
Advertisement
Advertisement
ವಾಣಿಜ್ಯ ಹಾಗೂ ಸರ್ಕಾರದ ಕ್ಯೂಬ್‍ಸ್ಯಾಟ್‍ಲೈಟ್, 10 ಸ್ಟಾರ್‍ಲಿಂಕ್ ಸ್ಯಾಟಲೈಟ್‍ಗಳನ್ನು ಸ್ಪೇಸ್ ಎಕ್ಸ್ ಹಾರಿಸಿದೆ. ಈ ಮೂಲಕ ಪ್ರತಿ ಕೆಜಿಗೆ 15,000 ಡಾಲರ್(ಅಂದಾಜು 10.93 ಲಕ್ಷ ರೂ.) ವಿಧಿಸುವ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ನಡೆದ ಉಪಗ್ರಹಗಳ ಉಡಾವಣೆ ಎಂಬ ಹೆಸರು ಗಳಿಸಿತು.
Liftoff! pic.twitter.com/js3zVM77rH
— SpaceX (@SpaceX) January 24, 2021
2021ರ ವೇಳೆಗೆ ವಿಶ್ವಕ್ಕೆ ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್ ನೀಡುವ ಯೋಜನೆಯನ್ನು ಸ್ಪೇಸ್ ಎಕ್ಸ್ ಹಾಕಿಕೊಂಡಿದೆ. ಈ ಯೋಜನೆಗೆ ಪೂರಕವಾಗಿ ಉಪಗ್ರಹವನ್ನು ಹಾರಿಸಿದೆ.