ಇವಿಎಂ ಬಗ್ಗೆ ಅನುಮಾನವಿದೆ, ಬಿಜೆಪಿಗೆ ಎಷ್ಟು ಬೇಕು ಅಷ್ಟು ಸ್ಥಾನಗಳಿಗೆ ತಂದು ನಿಲ್ಲಿಸಿದ್ರು- ಸತೀಶ್‌ ಜಾರಕಿಹೊಳಿ

Public TV
1 Min Read
satish jarkiholi

ಚಿಕ್ಕೋಡಿ: ಬಿಹಾರ ಚುನಾವಣಾ ಫಲಿತಾಂಶದಲ್ಲಿ ಇವಿಎಂ ಯಂತ್ರದ ಬಗ್ಗೆ ಅನುಮಾನವಿದೆ. ಇವಿಎಂ ಬಗ್ಗೆ ಹಿಂದೆಯೂ ಅನುಮಾನವಿತ್ತು ಮುಂದೆಯು ಇರುತ್ತದೆ. ಬ್ಯಾಲೆಟ್ ಪೇಪರ್‌ ಬಳಕೆಯಿಂದ ಸತ್ಯಾಂಶ ಹೊರಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಪಬ್ಲಿಕ್ ಟಿವಿ ಜೊತೆ ಅವರು ಮಾತನಾಡಿದರು.

evm vvpat elections 2

ಮುಂದುವರಿದ ರಾಷ್ಟ್ರಗಳು ಈಗಲೂ ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿವೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಬೇಕು ಅಷ್ಟು ಸ್ಥಾನಗಳಿಗೆ ತಂದು ನಿಲ್ಲಿಸಿದ್ರು  ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಇಬ್ಭಾಗವಾಗುತ್ತದೆ ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಟಾಂಗ್ ನೀಡಿದ ಅವರು, ಸವದಿಯವರು ಹೇಳಿದರೆ ನಮ್ಮ ಪಕ್ಷ ಇಬ್ಬಾಗವಾಗುವುದಿಲ್ಲ. ನಮ್ಮ ಪಕ್ಷ ಕಾರ್ಯಕರ್ತರಿಂದ ಕೂಡಿದೆ. ಆರ್ ಆರ್ ನಗರ ಹಾಗೂ ಶಿರಾದಲ್ಲಿ ಬಿಜೆಪಿ ಗೆದ್ದಿದೆ. ಜನರು ಆಡಳಿತ ಪಕ್ಷವನ್ನು ಬೆಂಬಲಿಸುವುದು ಸಾಮಾನ್ಯ. ಅಧಿಕಾರದಲ್ಲಿ ನಾವು ಇದ್ದಾಗ ಜಯಗಳಿಸಿದ್ದೆವು. ಈ ಸೋಲಿನಿಂದ ಕಾಂಗ್ರೆಸ್ ಗೆ ಯಾವುದೇ ಹಿನ್ನಡೆಯಾಗಿಲ್ಲ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ . ನಮ್ಮ ಗುರಿ ಮುಂಬರುವ ಮಹಾ ಚುನಾವಣಾ ಮೇಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *