ಪಾಟ್ನಾ: ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಅನ್ನು ಕಾಂಗ್ರೆಸ್ ಅಧ್ಯಕ್ಷ ಮೋದಿ ವೋಟಿಂಗ್ ಮಷೀನ್ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನಾವು ಮೋದಿ ವೋಟಿಂಗ್ ಮಷೀನ್ ಅಥವಾ ಮೋದಿಯವರ ಮಾಧ್ಯಮಕ್ಕೆ ನಾನು ಭಯಪಡುವುದಿಲ್ಲ. ಈ ಬಾರಿ ಬಿಹಾರದ ಯುವಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ನಮಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಸತ್ಯ ಯಾವಾಗಲೂ ಸತ್ಯವೇ. ನ್ಯಾಯ ಯಾವಾಗಲೂ ನ್ಯಾಯವೇ. ನಾವು ಈ ವ್ಯಕ್ತಿಯ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಅವರ ಚಿಂತನೆಯ ವಿರುದ್ಧ ಹೋರಾಡುತ್ತೇವೆ. ಅವರ ಚಿಂತನೆಯನ್ನು ನಾವು ಈ ಬಾರಿ ಸೋಲಿಸುತ್ತೇವೆ ಎಂದು ಹೇಳಿದರು.
Advertisement
ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸದ ರಾಹುಲ್ ಗಾಂಧಿ, ನರೇಂದ್ರ ಮೋದಿ ತಮ್ಮ ಸಭೆಗಳಲ್ಲಿ ನನ್ನ ಬಗ್ಗೆ ಅಹಿತಕರ ವಿಷಯಗಳನ್ನು ಹೇಳುತ್ತಾರೆ. ನನ್ನ ವಿರುದ್ಧ ಅವರು ಹೆಚ್ಚು ದ್ವೇಷವನ್ನು ಹರಡಲು ಪ್ರಯತ್ನಿಸುತ್ತಾರೆ. ಆದರೆ ನಾನು ಯಾವಾಗಲೂ ಪ್ರೀತಿಯನ್ನು ಹರಡಲು ಪ್ರಯತ್ನಿಸುತ್ತೇನೆ. ದ್ವೇಷವು ದ್ವೇಷವನ್ನು ಸೋಲಿಸಲು ಸಾಧ್ಯವಿಲ್ಲ, ಪ್ರೀತಿಯನ್ನು ಮಾತ್ರ ಮಾಡಬಹುದು. ನಾನು ಗೆದ್ದಿದ್ದೇನೆ ಎಂದು ಹೇಳಿದರು.
Advertisement
ಈಗಾಗಲೇ 2 ಹಂತದ ಚುನಾವಣೆಗಳು ಮುಕ್ತಾಯಗೊಂಡಿದ್ದು ಮೂರನೇ ಮತ್ತು ಕೊನೆಯ ಹಂತದ ಚುನಾವಣೆ ನ.7 ರಂದು 78 ಕ್ಷೇತ್ರಗಳಿಗೆ ನಡೆಯಲಿದೆ. ಫಲಿತಾಂಶ ನ.10 ರಂದು ಪ್ರಕಟವಾಗಲಿದೆ.
EVM is not EVM, but MVM – Modi Voting Machine. But, this time in Bihar, the youth is angry. So be it EVM or MVM, 'Gathbandhan' will win: Congress leader Rahul Gandhi in Bihar’s Araria#BiharElections2020 pic.twitter.com/PBSQwfPY0l
— ANI (@ANI) November 4, 2020