ಬೆಂಗಳೂರು: ಮಣ್ಣಿನ ಮಗ, ಜಿಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಇಂದಿಗೆ 25 ವರ್ಷ ಕಳೆದಿದೆ. ಈ ಸಂಭ್ರಮದಲ್ಲಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.
ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ತುಂಬಿದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ತಮ್ಮ ತಾತ ದೇವೇಗೌಡರ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಇನ್‍ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಪೋಸ್ಟ್‌ನಲ್ಲಿ ಏನಿದೆ?
ಕನ್ನಡನಾಡಿನ ಸಾಮಾನ್ಯ ರೈತಕುಲದಲ್ಲಿ ಜನಿಸಿದ ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ 25 ವರ್ಷಗಳು ತುಂಬಿದೆ. ಇಡೀ ದೇಶದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ ಟ್ಯಾಕ್ಸ್ ಹಾಲಿಡೇ ನೀಡಿದರು. ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಗಂಗಾನದಿ ವಿವಾದ ಬಗೆಹರಿಸಿದ್ದು, ಈಶಾನ್ಯದ ಏಳು ರಾಜ್ಯಗಳಿಗೆ ಭೇಟಿ ನೀಡಿ ಒಟ್ಟು 6 ಸಾವಿರ ಕೋಟಿಯ ಪ್ಯಾಕೇಜ್ ಘೋಷಣೆ, ವಿಮಾನ ನಿಲ್ದಾಣ, ರೈಲ್ವೇ ಯೋಜನೆ ರಾಷ್ಟ್ರೀಯ ಹೆದ್ದಾರಿಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ಈಶಾನ್ಯ ರಾಜ್ಯಗಳಿಗೆ ವಿಶೇಷ ಅನುದಾನ ಮಂಜೂರು ಮಾಡಿದರು ಎಂದು ನಿಖಿಲ್ ಹೇಳಿದ್ದಾರೆ.
Advertisement
Advertisement
ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ 3 ಸಾವಿರ ಕೋಟಿ ಪ್ಯಾಕೇಜ್ ನೀಡಿದ್ದು, ನೆನೆಗುದಿಗೆ ಬಿದ್ದಿದ್ದ ದೆಹಲಿ ಮೆಟ್ರೋಗೆ ಚಾಲನೆ ನೀಡಿದರು. ಅಲ್ಲದೇ ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ದವಿರಾಮ ಘೋಷಿಸಿದರು. ಮುಂದಿನ ದಶಕಗಳಲ್ಲಿ ಬೆಂಗಳೂರಿಗೆ ನೀರಿನ ಅಭಾವವಾಗುವ ಸಾಧ್ಯತೆ ಮನಗಂಡು ಕಾವೇರಿಯಿಂದ 9 ಟಿಎಂಸಿ ನೀರು ಬಿಡುಗಡೆ ಮಾಡಿದ್ದಲ್ಲದೇ ರಾಜ್ಯದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿದ್ದರು ಎಂದು ದೇವೇಗೌಡರ ಸಾಧನೆಯನ್ನು ವಿವರಿಸಿದ್ದಾರೆ.
ಅಲ್ಲದೇ ವಾಲೆಂಟರಿ ಡಿಸ್ಕೋಸರ್ ಸ್ಕೀಮ್ ಮೂಲಕ ಹತ್ತು ಸಾವಿರ ಕೋಟಿ ಕಪ್ಪು ಹಣವನ್ನು ದೇಶದ ಬೊಕ್ಕಸಕ್ಕೆ ಸೇರಿಸಿದರು. ದೇಶದ 36 ಕೋಟಿ ಜನತೆಗೆ ಬಿಪಿಎಲ್ ಕಾರ್ಡ್ ಮೂಲಕ ಮೂರು ರೂಪಾಯಿ ದರದಲ್ಲಿ ಹತ್ತು ಕೆಜಿ ಅಕ್ಕಿ, ಎರಡು ರೂಪಾಯಿ ದರದಲ್ಲಿ ಐದು ಕೆಜಿ ಗೋದಿ, ಮೂರು ರೂಪಾಯಿಗೆ ಸೀಮೆಎಣ್ಣೆ ದೊರೆಯುವಂತೆ ಮಾಡಿದರು.
https://www.instagram.com/p/CA4SJgopyOg/?igshid=147tzepdfatj0
ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ನೀಡದಿರುವ ನೀತಿಯನ್ನು ಬದಲಾಯಿಸಿ ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರಧಾನಿಯಾದ ತಕ್ಷಣ 1 ಸಾವಿರ ಕೋಟಿ ಬಿಡುಗಡೆ ಮಾಡಿದರು. ಹೀಗೆ ಪ್ರಧಾನ ಮಂತ್ರಿಯಾಗಿ ಕೆಲವೇ ಅವಧಿಯಲ್ಲಿ ಭಾರತದ ಹಾಗೂ ಈ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ ಮಣ್ಣಿನ ಮಗ ದೇವೇಗೌಡರು ದೆಹಲಿಯ ಗದ್ದುಗೆ ಏರಿ ಇಂದಿಗೆ 25 ವರ್ಷಗಳಾದವು. ಅವರ ಈ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿಯಾಗಲಿ.