ಬೆಂಗಳೂರು: ಇವರು ಯಾರೋ ಹೊಸ ಸ್ವಾಮೀಜಿ ಅಲ್ಲ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ ಎಂದು ನಿರ್ದೇಶಕ ಪ್ರೇಮ್ ಅವರು ಜನ್ಯ ಅವರ ಹೊಸ ಅವತಾರವನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ಕೊರೊನಾ ಲಾಕ್‍ಡೌನ್‍ನಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು. ಈಗ ಸ್ವಲ್ಪ ಮಟ್ಟಿಗೆ ಸಡಿಲಿಕೆ ಸಿಕ್ಕ ನಂತರ ಕೆಲ ಚಿತ್ರಗಳ ಚಟುವಟಿಕೆ ಆರಂಭವಾಗಿದೆ. ಅಂತಯೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಹಾಡುಗಳನ್ನು ತಯಾರಿ ಮಾಡಲು ಮುಂದಾಗಿದ್ದಾರೆ. ಜೊತೆಗೆ ಲಾಕ್‍ಡೌನ್‍ನಲ್ಲಿ ಗಡ್ಡಬಿಟ್ಟು ಜನ್ಯ ಹೊಸ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
ಇವ್ರ್ಯಾರೋ ಹೊಸಾ ಸ್ವಾಮೀಜಿ ಅಂತ confuse ಆಗ್ಬೇಡಿ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ…
Updated ಸಾಂಗ್'ಗಳನ್ನ ಕೊಡೋದರ ಜೊತೆಗೆ ಅವ್ರ ಗೆಟಪ್ ಕೂಡ update ಮಾಡ್ಕೊಂಡಿದಾರೆ. #EkLoveya rerecording on swing????#Audio Soooon ❤️ on @A2Music2 @RakshithaPrem @Raanna_6 @ArjunMusician #Prems pic.twitter.com/VNVXNb3EBd
— PREM❣️S (@directorprems) May 22, 2020
ಈ ಫೋಟೋಗಳನ್ನು ಹಂಚಿಕೊಂಡಿರುವ ನಿರ್ದೇಶಕ ಪ್ರೇಮ್ ಅವರು, ಇವರು ಯಾರೋ ಹೊಸ ಸ್ವಾಮೀಜಿ ಎಂದು ಗೊಂದಲವಾಗಬೇಡಿ. ಇವರು ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ ಅಪ್‍ಡೇಟ್ ಸಾಂಗ್‍ಗಳನ್ನು ಕೊಡುವುದರ ಜೊತೆಗೆ ಅವರ ಗೆಟಪ್ ಅನ್ನು ಕೂಡ ಆಪ್‍ಡೇಟ್ ಮಾಡಿಕೊಂಡಿದ್ದಾರೆ. ‘ಏಕ್ ಲವ್ ಯಾ’ ಸಿನಿಮಾದ ಹಾಡುಗಳ ರೆಕಾರ್ಡ್ ನಡೆಯುತ್ತಿದೆ. ಆಡಿಯೋ ಬಹುಬೇಗ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಆರೋಗ್ಯ ಸಮಸ್ಯೆ ಬಳಲುತ್ತಿದ್ದ ಜನ್ಯ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯನ್ನು ತಗೆದುಕೊಳ್ಳುತ್ತಿದ್ದರು. ಈಗ ಸದ್ಯ ಲಾಕ್‍ಡೌನ್ ನಂತರ ಮತ್ತೆ ಕೆಲಸಕ್ಕೆ ವಾಪಸ್ ಆಗಿರುವ ಜನ್ಯ ‘ಏಕ್ ಲವ್ ಯಾ’ ಸಿನಿಮಾದ ಹಾಡುಗಳನ್ನು ಸಿದ್ಧಮಾಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ಗೆಟಪ್ ಅನ್ನು ಚೆಂಚ್ ಮಾಡಿಕೊಂಡಿದ್ದು, ಕೆಂಪು ಪಂಚೆ, ಜೊತೆಗೆ ಕೆಂಪು ಪೇಟ ಹಾಕಿಕೊಂಡು ಬಿಳಿ ಬಣ್ಣದ ಶರ್ಟ್ ತೊಟ್ಟು ಸ್ವಾಮೀಜಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 26ರಂದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅರ್ಜುನ್ ಜನ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯದಲ್ಲಿ ಶೇ.99ರಷ್ಟು ಬ್ಲಾಕ್ ಆಗಿತ್ತು. ಹೀಗಾಗಿ ವೈದ್ಯರು ಅಂದೇ ರಾತ್ರಿ ಶಸ್ತ್ರ ಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು. ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಸಿನಿಮಾ ಕೆಲಸ ಹಾಗೂ ರಿಯಾಲಿಟಿ ಶೋಗಳಿಂದ ಜನ್ಯ ದೂರ ಉಳಿದುಕೊಂಡಿದ್ದರು.
`ಏಕ್ ಲವ್ ಯಾ’ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಅವರ ಸಹೋದರ ರಾಣಾ ನಾಯಕನಾಗಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿವೆ.