ಬೆಂಗಳೂರು: ಲಾಕ್‍ಡೌನ್ ಘೋಷಣೆ ಬೆನ್ನಲ್ಲೇ ಮಹಾ ವಲಸೆ ಆರಂಭವಾಗಿದ್ದು, ಇವತ್ತು 12 ಸಾವಿರಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
Advertisement
ಮಹಾನಗರಗಳಿಂದ ಹಳ್ಳಿಗಳಿಗೆ ಜನರು ಹೋಗುತ್ತಿರುವ ಹಿನ್ನೆಲೆ ಬಿಎಂಟಿಸಿ ಹೊರತುಪಡಿಸಿ ಕೆಎಸ್‍ಆರ್ ಟಿಸಿ, ಈಶಾನ್ಯ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಂದ ಇಂದು 12 ಸಾವಿರ ಬಸ್ ಗಳು ಸಂಚರಿಸಲಿವೆ.
Advertisement
Advertisement
ಕರ್ಫ್ಯೂ ಮತ್ತು ಲಾಕ್‍ಡೌನ್ ಬಿಗಿಗೊಳಿಸಿರುವುದರಿಂದ ಗಮನಾರ್ಹ ಸಂಖ್ಯೆಯ ಸಾರ್ವಜನಿಕರು ತಮ್ಮತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ನಮ್ಮ 3 ಸಾರಿಗೆ ನಿಗಮಗಳಿಂದ ಸಾರ್ವಜನಿಕರ ಬೇಡಿಕೆಗಳಿಗೆ ಅನುಗುಣವಾಗಿ 12 ಸಾವಿರಕ್ಕೂ ಹೆಚ್ಚು ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸುಗಳು ಬೆಂಗಳೂರಿನಿಂದ ಹೊರಗಡೆ ಮತ್ತು ಬೇರೆ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ಮತ್ತು ಇತರ ಪ್ರದೇಶಗಳಿಗೆ ಸಂಚರಿಸಲಿವೆ.
Advertisement
ನಿಗದಿತ ಕಫ್ರ್ಯೂ ಸಮಯದ ಒಳಗೆ ಸಂಚರಿಸಲಿರುವ ಬಸ್ಸುಗಳ ಈ ವಿಶೇಷ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಮಂಗಳವಾರ ರಾತ್ರಿಯ ಒಳಗೆ ತಮ್ಮ ಸ್ಥಳಕ್ಕೆ ತಲುಪಬೇಕಾದ ಪ್ರಯಾಣಿಕರು ಯಾವುದೇ ಆತಂಕವಿಲ್ಲದೆ, ನಿಗದಿತ ಕೋವಿಡ್ ಮಾರ್ಗಸೂಚಿ ಅನ್ವಯ ಮುಂಜಾಗ್ರತೆ ವಹಿಸಿ ಈ ಸಾರಿಗೆ ವ್ಯವಸ್ಥೆಯನ್ನು ಸೂಕ್ತವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಸಾರಿಗೆ ಸಚಿವರು ಸೂಚಿಸಿದ್ದಾರೆ.