ಇಳಿ ಸಂಜೆಯಲಿ ಪತ್ನಿಯ ಜೊತೆ ರೊಮ್ಯಾಂಟಿಕ್ ಮೂಡ್‍ನಲ್ಲಿ ಕೊಹ್ಲಿ

Public TV
1 Min Read
kohli anushka

ಅಬುಧಾಬಿ: ಐಪಿಎಲ್‍ನಲ್ಲಿ ಭಾನುವಾರ ನಡೆದ ಪಂದ್ಯವನ್ನು ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಮಡದಿಯ ಜೊತೆ ಸಮಯ ಕಳೆಯುತ್ತಿದ್ದಾರೆ.

ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ನಂತರ ರೊಮ್ಯಾಂಟಿಕ್ ಮೂಡಿಗೆ ಜಾರಿರುವ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಇಳಿ ಸಂಜೆಯಲಿ ನೀರಿನೊಳಗೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಫೋಟೋ ತೆಗೆದಿದ್ದು, ಬೆಂಗಳೂರು ತಂಡದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಎಂದು ತಿಳಿಸಿದ್ದಾರೆ.

ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ವಿರುಷ್ಕಾ ದಂಪತಿ, ಮೊಟ್ಟ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕಪ್ ಎತ್ತಿಹಿಡಿಯುವ ತವಕದಲ್ಲಿದ್ದಾರೆ. ಕಳೆದ ಒಂದು ವಾರದಿಂದ ಅನುಷ್ಕಾ ಶರ್ಮಾ ಅವರು ದುಬೈನಲ್ಲೇ ಇದ್ದಾರೆ. ಜೊತೆಗೆ ಕಳೆದ ಮೂರು ಪಂದ್ಯಗಳಲ್ಲಿ ಬೆಂಗಳೂರು ತಂಡವನ್ನು ಮೈದಾನಕ್ಕೆ ಬಂದು ಹುರಿದುಂಬಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲೂ ಕೂಡ ಅನುಷ್ಕಾ ಶರ್ಮಾ ಹಾಜರಿದ್ದು, ಪತಿಯ ತಂಡಕ್ಕೆ ಚೀಯರ್ ಮಾಡಿದ್ದರು.

anushka sharma virat kohli

ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ನಡೆದಾಗಲೂ ಕೂಡ ಅನುಷ್ಕಾ ಬಂದಿದ್ದರು. ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದರು. ಅಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ವಿರಾಟ್ 52 ಬಾಲಿಗೆ 90 ರನ್ ಸಿಡಿಸಿ ಮಿಂಚಿದ್ದರು. ಇದರಿಂದ ಸಂತೋಷಗೊಂಡ ಅನುಷ್ಕಾ ಡ್ರೆಸಿಂಗ್ ರೂಮಿನಿಂದಲೇ ಫ್ಲೈಯಿಂಗ್ ಕಿಸ್ ಕೊಟ್ಟು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.

KOHLI ABD a

ಐಪಿಎಲ್ 13 ಆವೃತ್ತಿಯಿಂದಲೂ ಕೊಹ್ಲಿ ಆರ್‌ಸಿಬಿಗಾಗಿ ಆಡುತ್ತಿದ್ದಾರೆ. ಜೊತೆಗೆ 2013ರಿಂದ ತಂಡದ ನಾಯಕನಾಗಿದ್ದಾರೆ. ಆದರೆ ಇಲ್ಲಿಯವರೆಗೂ ಒಂದೂ ಬಾರಿಯೂ ಕಪ್ ಗೆದ್ದಿಲ್ಲ. ಆದರೆ ಈ ವರ್ಷದ ಐಪಿಎಲ್‍ನಲ್ಲಿ ಆರ್‍ಸಿಬಿ ಉತ್ತಮವಾಗಿ ಆಡುತ್ತಿದೆ. ಎಬಿಡಿ ವಿಲಿಯರ್ಸ್ ಮತ್ತು ಕೊಹ್ಲಿ ಉತ್ತಮಾ ಫಾರ್ಮ್‍ನಲ್ಲಿ ಇದ್ದಾರೆ. ಈಗಾಗಲೇ 9 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ ಆರರಲ್ಲಿ ಗೆದ್ದು ಮೂರರಲ್ಲಿ ಸೋತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *