ಇಲ್ಲಿ ಅಣ್ಣ-ತಮ್ಮನ ಪ್ರಶ್ನೆ ಬರಲ್ಲ.. ರೈತರು, ನೀರಿನ ಪ್ರಶ್ನೆ: ಹೆಚ್‌ಡಿಕೆ

Public TV
2 Min Read
HD Kumaraswamy 1

ಬೆಂಗಳೂರು: ಇಲ್ಲಿ ಅಣ್ಣ-ತಮ್ಮನ ಪ್ರಶ್ನೆ ಬರಲ್ಲ. ಇದು ರೈತರು, ನೀರಿನ ಪ್ರಶ್ನೆ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಗುಡುಗಿದ್ದಾರೆ.

ಸರ್ವ ಪಕ್ಷ ಸಭೆಗೂ ಮುನ್ನ ವಿಧಾನಸೌದದ ಬಳಿ ಮಾತನಾಡಿದ ಅವರು, ನಾನು ನೀರು ಬಿಡಿ ಅಂತಾ ಹೇಳಿದ್ನಾ? ನಾವು ಹೇಳಿದ್ಮೇಲೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ರೈತರು ಕೋರ್ಟ್‌ಗೆ ಹೋಗಲಿ ಎನ್ನುತ್ತಾರೆ ಸಚಿವರು. ಸಚಿವರು ಹೀಗೆ ಮಾತನಾಡುವುದಕ್ಕೆ ಅಧಿಕಾರ ಕೊಟ್ಟವರ‍್ಯಾರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎಸ್‌ಟಿಎಸ್‌ಗೆ ಕೈ ಗಾಳ, ಆಪರೇಷನ್‌ ಹಸ್ತಕ್ಕೆ ಕಾರಣ ಅಮಿತ್‌ ಶಾ! – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

dk shivakumar siddaramaiah 2

ಗಾಂಭೀರ್ಯತೆ ಇರಬೇಕು. ಎನ್‌ಓಸಿಗೆ ಕಳ್ಳ ಬಿಲ್ ಚರ್ಚೆ ಮಾಡೋದಕ್ಕೆ ದೆಹಲಿಗೆ ಹೋಗ್ತಾರಾ ಇವರು? ರೈತರ ಬದುಕಿನ ಗ್ಯಾರಂಟಿ ಬಗ್ಗೆ ಹೆಚ್ಚಿನ ಗಮನ ಕೊಡಿ. ನಾಡಿನ ಜನರ ದುಡ್ಡು ವ್ಯರ್ಥ ಮಾಡಿಕೊಂಡು ನಿಯೋಗ ಹೋಗಬೇಕಾ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಡಿನ ಜನ ಹಿತರಕ್ಷಣೆಗೆ ಸಂಪೂರ್ಣ ಬೆಂಬಲ ಕೊಡ್ತೀವಿ. ಆದರೆ ಇಲ್ಲಿ ನಡೆಯುತ್ತಿರುವ ಘಟನೆಗಳು ಹುಡುಗಾಟಿಕೆಯ ಒಂದು ವಾತಾವರಣದಂತೆ ಕಾಣುತ್ತಿದೆ. ಒತ್ತಾಯ ಮಾಡಿದ್ದಕ್ಕೆ ಸಭೆ ಕರೆದಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ನಾನು ಒತ್ತಡವನ್ನ ಹಾಕಿದ ಮೇಲೆ ಸಭೆ ಕರೆದಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಿಯೋಗ ಕರೆದುಕೊಂಡು ಹೋಗಿ ಏನ್ ಮಾಡ್ತಾರೆ. ರಾಜ್ಯದ ಹಿತರಕ್ಷಣೆಗೆ ತಾಂತ್ರಿಕ ಅಧಿಕಾರಿಗಳು ಇದ್ದಾರೆ. ನೀರಾವರಿಯ ಬಗ್ಗೆ ಜ್ಞಾನ ಹೊಂದಿರುವವರು ಕಾನೂನು ತಜ್ಞರು ಇದ್ದಾರೆ. ನಾನು ದೇವೇಗೌಡರ ಜೊತೆಯಲ್ಲಿ ಪ್ರಧಾನಿ ಭೇಟಿ ಮಾಡಿದ್ದೇನೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಮಲತಾಯಿ ಧೋರಣೆ ಬಗ್ಗೆ ಮಾತಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್

ಚಂದ್ರಯಾನ-3 ಕುರಿತು ಮಾತನಾಡಿ, ಇಸ್ರೋ ಬಾಹ್ಯಕಾಶ ಸಂಸ್ಥೆಯ ಹಲವಾರು ವಿಜ್ಞಾನಿಗಳ, ಹಲವಾರು ವರ್ಷದ ಪರಿಶ್ರಮಕ್ಕೆ ಯಶಸ್ಸು ಬರುವಂತಹ ಸಮಯ. ವಿಶ್ವದ ಜನತೆ ಅತ್ಯಂತ ಆಸಕ್ತಿಯಿಂದ ಲ್ಯಾಂಡಿಂಗ್‌ ಆಗುವುದನ್ನು ಎಲ್ಲರೂ ವಿಶ್ವಾಸದಿಂದ ಕಾಯುತ್ತಿದ್ದಾರೆ. ನಮ್ಮ ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ. ಭಾರತ ಮತ್ತೊಂದು ಮಟ್ಟದ ಯಶಸ್ಸು ಪಡೆಯೋದಕ್ಕೆ ಇವತ್ತು ಮಹತ್ವದ ದಿನ ಎಂದು ಶುಭಹಾರೈಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article