– ಸಿನ್ಮಾದವಳು, ಜಾತಿ ಅಂತ ನೆಪ ಹೇಳ್ತಿದ್ದಾರೆ
– ನಾಳೆ ಅಂತ್ಯವಾಗುತ್ತಾ ಮ್ಯಾರೇಜ್ ಮಿಸ್ಟರಿ?
ಕೋಲಾರ: ಬಿಗ್‍ಬಾಸ್ ಸ್ಪರ್ಧಿ ಮತ್ತು ಬರಹಗಾರ್ತಿ ಚೈತ್ರಾ ಕೊಟ್ಟೂರು ಮದುವೆಗೆ ಸಿನಿಮಾ ಮತ್ತು ಜಾತಿ ಅಡ್ಡವಾಗಿದೆಯಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚೈತ್ರಾ ಕೊಟ್ಟೂರು ಮದುವೆ, ಪ್ರೀತಿಗೆ ಸಂಬಂಧಿಸಿದ ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ.
Advertisement
ಬಿಗ್‍ಬಾಸ್ ಮುಗಿಸಿ ಬಂದ ನಂತರ ಫೇಸ್‍ಬುಕ್ ನಲ್ಲಿ ಪರಿಚಯವಾಯ್ತು, ಎರಡ್ಮೂರು ಬಾರಿ ಸಿಕ್ಕ ನಂತರ ಇಬ್ಬರು ಆಕರ್ಷಿತವಾದೆವು, ನಂತರ ಹಾಗೇ ಆಪ್ತತೆ ಬೆಳಿಯಿತು. ಆಗ ಲಾಕ್‍ಡೌನ್ ಆಗಿದ್ದರಿಂದ ಮನೆಯಲ್ಲಿ ಭೇಟಿ ಮಾಡಿದ್ದೀವಿ. ಪರಸ್ಪರ ಪ್ರೀತಿ ಮಾಡಿ ಇಬ್ಬರು ಮನೆಗೆ ಹೋಗಿ ಬರೋದು ನಡೆದಿತ್ತು. ನಾಗಾರ್ಜುನ್ ಹುಟ್ಟುಹಬ್ಬವನ್ನ ನಾನು ಅದ್ಧೂರಿಯಾಗಿ ಆಚರಿಸಿ, ಚಿನ್ನದ ಬ್ರೆಸ್ ಲೆಟ್ ಕೂಡ ಉಡುಗೊರೆಯಾಗಿ ಕೊಟ್ಟು ಮೂರು ಲಕ್ಷ ಖರ್ಚು ಮಾಡಿದೆ. ಆಚರಣೆಯ ಫೋಟೊಗಳನ್ನು ನನ್ನ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ ಎಂದರು.
Advertisement
Advertisement
ಆಪ್ತವಾಗಿದ್ದ ಹುಡುಗ ಮದುವೆ ವಿಚಾರ ಗಂಭೀರವಾಗ್ತಿದ್ದಂತೆ ಬೇರೆಯ ರೀತಿ ನಡೆದುಕೊಳ್ಳಲು ಶುರುಮಾಡಿದ. ಇಬ್ಬರ ಒಪ್ಪಿಗೆ ಮೇರೆಗೆ ಮದುವೆ ನಡೆಯಿತು. ಮದುವೆ ನಂತ್ರ ಮನೆಯವರ ನೆಪ, ಜಾತಿ ನೆಪ, ಅಂತಸ್ಥಿನ ನೆಪ ಹೇಳುವ ಮೂಲಕ ಸದ್ಯ ನನ್ನನ್ನು ಅವಾಯ್ಡ್ ಮಾಡುತ್ತಿದ್ದಾನೆ. ನಾನು ಸಿನಿಮಾದವಳು ಎಂಬ ನೆಪ ಅಂತ ಆತನ ಮನೆಯವರು ಬೇಡ ಎನ್ನುತ್ತಿದ್ದಾರೆ.
Advertisement
ಮೈಸೂರು ರೋಡಲ್ಲಿರುವ ಬಿಜಿಎಸ್ ಆಶ್ರಮದ ಬಳಿ ಮಾತುಕತೆಗೆ ಕರೆದ್ರು, ತದನಂತರ ಆ ಹುಡುಗನ ಮನೆಯವರು ಬಂದೊಡನೆ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು. ನೀನು ನಡತೆಗೆಟ್ಟವಳು, ಸಿನಿಮಾದವಳು ನನ್ನ ಸೊಸೆ ಆಗೋದಕ್ಕೆ ಯೋಗ್ಯತೆ ಇಲ್ಲದವಳು ಎಂದು ಅವರ ತಂದೆ ಗಲಾಟೆ ಮಾಡಿದ್ರು, ಬಲವಂತದ ಮದುವೆ ಎಂದು ಅವನ ತಲೆಗೆ ತುಂಬಿದರು. ಆತನು ಅವರಂತೆ ಆಡಲು ಶುರು ಮಾಡಿದ್ದಾನೆ.
ತದನಂತರ ನಿಮ್ಮ ಮನೆಯಲ್ಲಿ ಕೂತು ಮಾತಾಡಿ ಬಗೆಹರಿಸೋಣ ಎಂದು ಬಂದವರು ನಮ್ಮ ಇಡೀ ರಸ್ತೆ ನೋಡುವಂತೆ ಕಿರುಚಿ ಕೂಗಾಡಿ ಗಲಾಟೆ ಮಾಡಿದರು. ನನ್ನನ್ನು ಮತ್ತು ನನ್ಮ ಅಣ್ಣಂದಿರನ್ನು ಹೊಡೆದು, ನನ್ನ ವಯಸ್ಸಾದ ತಂದೆ ತಾಯಿಯನ್ನು ನೂಕಾಡಿ ತಳ್ಳಾಡಿ ಬೀಳಿಸಿ, ಗಾಯಗೊಳಿಸಿದರು.
ನಂತರ ನಾನು ದೂರು ಕೊಡಲು ಹೋದಾಗ, ಹುಡುಗನ ಬಾವಂದಿರು ಕಂಪ್ಲೆಂಟ್ ಕೊಡುವ ಮುನ್ನ ಒಂದೆರಡು ದಿನ ಸಮಯ ತಗೆದುಕೊಳ್ಳೋಣ. ನಾವುಗಳು ಕುಟುಂಬದವರು ಕೂತು ಮಾತಾಡೋಣ ಎಂದು ನನ್ನನ್ನು ಕೇಳಿಕೊಂಡಾಗ ನಾನು ಆಯ್ತು ಎಂದು ಒಪ್ಪಿದೆ. ಪೋಲಿಸರು ನೀವುಗಳು ಇನ್ನೆರಡು ದಿನಗಳಲ್ಲಿ ನಾವು ಬಗೆಹರಿಕೊಂಡು ಬನ್ನಿ ಇಲ್ಲವಾದಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈಗ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಅನ್ನೋ ಮಾಹಿತಿ ಇದೆ. ನಾನು ಇಲ್ಲಿ ಕೊಟ್ಟಿರುವ ಕಂಪ್ಲೆಂಟನ್ನು ತಡೆದು ಕೂತು ಮಾತಾಡೋಣ ಎಂದು ಹೋಲ್ಡ್ ನಲ್ಲಿ ಇಟ್ಟವರು, ಮನೆಯವರ ಡಬಲ್ ಗೇಮ್ ಮಾಡುತ್ತಿದ್ದಾರೆ ಎಂದು ಚೈತ್ರಾ ಆರೋಪಿಸಿದರು.
ಇಲ್ಲಿಂದ ಹೋದ ಬಳಿಕ ನಾಗಾರ್ಜುನ್ ನನ್ನ ಜೊತೆ ಮಾತನಾಡಿಲ್ಲ. ನಾಳೆ ಅವಕಾಶ ಇರುವುದರಿಂದ ಅವರು ಮಾತಾಡಲು ಬಂದರೆ ಮಾತಾಡುತ್ತೇವೆ. ಇಲ್ಲವಾದಲ್ಲಿ ಮುಂದೆ ಮಾಡಬೇಕಾದ ಕ್ರಮದ ಕುರಿತು ಯೋಚಿಸುತ್ತೇವೆ ಎಂದರು.