ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಮಾತ್ರ ವಿಚಾರಣೆ ನಡೆಸಿದ್ದು, ನಟ ಲೂಸ್ ಮಾದ ಯೋಗಿ ಹಾಗೂ ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆ ನಡೆಸಿದ್ದೇವೆ ಎಂದು ಐಎಸ್‍ಡಿ (ಆಂತರಿಕ ಭದ್ರತಾ ಪಡೆ) ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.
Advertisement
ಈ ಕುರಿತು ಮಾಹಿತಿ ನೀಡಿರುವ ಅವರು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಲೂಸ್ ಮಾದ ಖ್ಯಾತಿಯ ಯೋಗಿ ಹಾಗೂ ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆ ಮಾಡಿದ್ದೇವೆ. ಯೋಗಿ, ಅಯ್ಯಪ್ಪ ಅಲ್ಲದೇ ಸೀರಿಯಲ್ ನಟಿ ರಶ್ಮಿ ಚಂಗಪ್ಪ, ಖಾಸಗಿ ವಾಹಿನಿ ಸಿಬ್ಬಂದಿ ನಿಶ್ಚಿತ ಶರತ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗಿದೆ. ತನಿಖಾ ಹಂತದಲ್ಲಿ ಕೆಲ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಸದ್ಯ ಬೇರೆ ಯಾರಿಗೂ ನೋಟಿಸ್ ನೀಡಿಲ್ಲ. ಮುಂದಿನ ದಿನಗಳಲ್ಲಿ ನೋಡೋಣ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಐಎಸ್‌ಡಿಯಿಂದ ಲೂಸ್ ಮಾದ ಯೋಗಿ, ಅಯ್ಯಪ್ಪ ವಿಚಾರಣೆ
Advertisement
ಇಬ್ಬರು ಡ್ರಗ್ಸ್ ಪೆಡ್ಲರ್ ಗಳ ಮಾಹಿತಿ ಆಧಾರದ ಮೇಲೆ ನಟ ಲೂಸ್ ಮಾದ ಮತ್ತು ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆ ನಡೆಸಲಾಗಿದೆ. ಕಳೆದ 12ರಂದು ಐಎಸ್‍ಡಿ ಪೊಲೀಸರು ಖಚಿತ ಮಾಹಿತಿ ಅಧಾರದ ಮೇಲೆ ರೇಡ್ ಮಾಡಿದ್ದರು. ಈ ವೇಳೆ ಬೆಂಗಳೂರಿನ ಪೀಣ್ಯ ವ್ಯಾಪ್ತಿಯ ಅಂದರಹಳ್ಳಿ ಬಳಿ ಇಬ್ಬರು ಡ್ರಗ್ಸ್ ಪ್ರೆಡ್ಲರ್ ಸಿಕ್ಕಿದ್ದರು. ಕೇರಳ ಮೂಲದ ಗೋಕುಲ್ ಕೃಷ್ಣ ಹಾಗೂ ರ್ಯಾನ್ ಡ್ಯಾನಿಯಲ್‍ನನ್ನು ಪೊಲೀಸರು ಬಂಧಿಸಿದ್ದರು.
Advertisement
Advertisement
ಬಂಧಿತರ ಬಳಿ ಗಾಂಜಾ, ಎಲ್‍ಎಸ್‍ಡಿ ಮಾತ್ರೆಗಳು ಸಿಕ್ಕಿದ್ದವು. ಹೀಗಾಗಿ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಲೂಸ್ ಮಾದ, ಕ್ರಿಕೆಟಿಗ ಅಯ್ಯಪ್ಪ, ಸೇರಿದಂತೆ ಕೆಲ ಗಣ್ಯರ ಮಕ್ಕಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿರುವುದಾಗಿ ಆರೋಪಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.