– ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಹೂಡಿಕೆ
ಹೈದರಾಬಾದ್: ಮಾಜಿ ವಿಮಾ ವೈದ್ಯಕೀಯ ಸೇವೆಗಳ ನಿರ್ದೇಶಕಿ (ಐಎಂಎಸ್) ಮತ್ತು ಇನ್ನೊಬ್ಬ ಅಧಿಕಾರಿಗೆ ಸೇರಿದ ಸೂಕ್ತ ದಾಖಲೆ ಇಲ್ಲದ ಬರೋಬ್ಬರಿ 4.47 ಕೋಟಿ ಹಣವನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಶಪಡಿಸಿಕೊಂಡಿದೆ.
ಐಎಂಎಸ್ ಮಾಜಿ ನಿರ್ದೇಶಕಿ ದೇವಿಕಾ ರಾಣಿಯ ಬಳಿ ಸೂಕ್ತ ದಾಖಲೆ ಇಲ್ಲದ 3.75 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ವಾಣಿಜ್ಯ ಮತ್ತು ವಸತಿ ಜಾಗವನ್ನು ಖರೀದಿಸಲು ಹೈದರಾಬಾದ್‍ನ ಸೈಬರಾಬಾದ್ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದ ಇಎಸ್‍ಐ ಫಾರ್ಮಸಿಸ್ಟ್ ನಾಗಲಕ್ಷ್ಮಿಗೆ ಸೇರಿದ್ದ 72 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ತಿಳಿಸಿದೆ.
Advertisement
Advertisement
ಇಬ್ಬರು ಅಧಿಕಾರಿಗಳು ಸೂಕ್ತ ದಾಖಲೆ ಇಲ್ಲದ ಹಣವನ್ನು ಆರು ವಸತಿ ಫ್ಲ್ಯಾಟ್‍ಗಳ ಖರೀದಿಗಾಗಿ ಹೂಡಿಕೆ ಮಾಡಿದ್ದರು. ಇದರಿಂದ ಸುಮಾರು 15,000 ಚದರ ಅಡಿ ವಾಣಿಜ್ಯ ಜಾಗವನ್ನು ತಮ್ಮ ಕುಟುಂಬದ ಹೆಸರಿನಲ್ಲಿ ಖರೀದಿ ಮಾಡಲು ಹೂಡಿಕೆ ಮಾಡಿದ್ದರು. ದೇವಿಕಾ ರಾಣಿ ಸಹ 22 ಲಕ್ಷ ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.
Advertisement
ಆಸ್ತಿಯನ್ನು ಖರೀದಿಸಲು ಚೆಕ್ ಮತ್ತು ಆನ್‍ಲೈನ್ ವರ್ಗಾವಣೆಯ ಮೂಲಕ ಪಾವತಿಸಲಾಗಿದ್ದ 2.29 ಕೋಟಿ ಮೊತ್ತವನ್ನು ಸಹ ಗುರುತಿಸಲಾಗಿದೆ. ಈಗಾಗಲೇ ಇಬ್ಬರೂ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಆದರೆ ವಿಶೇಷ ನ್ಯಾಯಾಲಯ ಜಾಮೀನಿನ ಮೇಲೆ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Rs 4.47 crores of unaccounted money of Devika Rani, former Director, Insurance Medical Services & Naga Lakshmi, Pharmacist, ESI which was invested with a real estate company for purchase of commercial & residential space in Cyberabad area seized: Anti-Corruption Bureau, Hyderabad pic.twitter.com/6IJnAOZM5W
— ANI (@ANI) September 1, 2020