– ಬಡತನದ ನಾಟಕವಾಡಿ ಮೋಸ
– ಶಾದಿ.ಕಾಮ್ ಮೂಲಕ ಹುಡುಗರ ಪರಿಚಯ
– ಮೊಬೈಲ್‍ನಲ್ಲಿ ಮಾಜಿ ಪತಿ ಫೋಟೋ ನೋಡಿ ವರನ ತಾಯಿ ಪ್ರಶ್ನೆ
ರಾಂಚಿ: ಪುರುಷರು ಮಹಿಳೆಯರಿಗೆ ಮೋಸ ಮಾಡುವ ಸುದ್ದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪುರುಷರಿಂದಲೇ ಕೋಟಿಗಟ್ಟಲೇ ಹಣ ಕಿತ್ತುಕೊಂಡು ಮೋಸ ಮಾಡಿ, ಮೂರನೇ ವಿವಾಹಕ್ಕೆ ತಯಾರಾಗಿದ್ದಾಗ ಸಿಕ್ಕಿಬಿದ್ದಿದ್ದಾಳೆ.
ಮಹಿಳೆ ಜಾರ್ಖಂಡ್ ಮೂಲದವಳಾಗಿದ್ದು, ಇಬ್ಬರು ಪುರುಷರನ್ನು ವಿವಾಹವಾಗಿ ಅವರ ಕುಟುಂಬದಿಂದ ಕೋಟ್ಯಂತರ ಹಣ ಪಡೆದು ಮೋಸ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಪುರುಷರಿಗೆ ಸುಮಾರು 1.5 ಕೋಟಿ ರೂ. ವಂಚಿಸಿದ್ದಾಳೆ. ಮೂರನೇ ವಿವಾಹವಾಗುವ ವೇಳೆ ಖತರ್ನಾಕ್ ಮಹಿಳೆ ತನ್ನ ಇಬ್ಬರು ಗಂಡಂದಿರೊಂದಿಗೆ ಇರುವ ಫೋಟೋಗಳನ್ನು ವರನ ತಾಯಿ ನೋಡಿದ್ದು, ಈ ವೇಳೆ ಸಿಕ್ಕಿಬಿದ್ದಿದ್ದಾಳೆ.
Advertisement
Advertisement
ಶಾದಿ.ಕಾಮ್ ಮೂಲಕ ಪರಿಚಯ ಮಾಡಿಕೊಂಡು, ನಂತರ ವಿವಾಹಕ್ಕೆ ಒಪ್ಪಿಸಿ, ಇಬ್ಬರು ಪುರುಷರಿಗೆ ಮೋಸ ಮಾಡಿದ್ದಾಳೆ. ಮಹಿಳೆ ಎರಡು ವರ್ಷಗಳ ಹಿಂದೆ ನಿಲಯ್ ಕುಮಾರ್ ಜೊತೆ ಮೊದಲ ವಿವಾಹವಾಗಿದ್ದು, ಇವರು ಜಾರ್ಖಂಡ್‍ನ ಗಿರಿದಿಹ್‍ನ ರಾಜ್‍ಧನ್ವರ್‍ನವರಾಗಿದ್ದಾರೆ. ಇವರ ಬಳಿ ಬರೋಬ್ಬರಿ 1 ಕೋಟಿ ರೂ. ಪಡೆದು ಪರಾರಿಯಾಗಿದ್ದಾಳೆ.
Advertisement
ಇದಾದ ಬಳಿಕ ಖತರ್ನಾಕ್ ಮಹಿಳೆ ಮತ್ತೆ ಶಾದಿ.ಕಾಮ್‍ನಲ್ಲಿ ತನ್ನ ಪ್ರೊಫೈಲ್ ಅಪ್‍ಲೋಡ್ ಮಾಡಿದ್ದು, ಇದರಲ್ಲಿ ಇತ್ತೀಚೆಗೆ ತಾನು ವಿವಾಹವಾಗಿರುವುದನ್ನು ಮುಚ್ಚಿಟ್ಟಿದ್ದಾಳೆ. ಈ ಬಾರಿ ಗುಜರಾತ್ ಮೂಲದ ಅಮಿತ್ ಮೋದಿಯವರನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದು, ವಿವಾಹವೂ ಆಗಿದ್ದಾಳೆ. ನಂತರ ಆತನನ್ನು ಭಾವನಾತ್ಮಕವಾಗಿ ಸೆಳೆದಿದ್ದು, ನನ್ನ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ಹಣ ಬೇಕು ಎಂದು ಸುಳ್ಳು ಹೇಳಿ 40-45 ಲಕ್ಷ ರೂ. ಎಗರಿಸಿದ್ದಾಳೆ.
Advertisement
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಇಬ್ಬರು ದಂಪತಿ ಬೇರೆಯಾಗಿದ್ದರು. ಇವರ ವಿಚ್ಛೇದನ ಅರ್ಜಿಯನ್ನು ಸಹ ಕೋರ್ಟ್ ತಿರಸ್ಕರಿಸಿದೆ. ನಂತರ ಮಹಿಳೆ ನನ್ನ ತಂಗಿ ದೆಹಲಿಗೆ ಶಿಫ್ಟ್ ಆಗುತ್ತಿದ್ದಾಳೆ. ಅವಳಿಗೆ ಸಹಾಯ ಮಾಡಲು ಹೊರಟಿದ್ದೇನೆ. ಇನ್ನೆಂದಿಗೂ ಬರುವುದಿಲ್ಲ ಕ್ಷಮಿಸಿ ಎಂದು ಹೇಳಿ ಹೋಗಿದ್ದಾಳೆ ಎಂದಿದ್ದಾರೆ.
ಮೂರನೇ ಬಾರಿಗೆ ಪೂಣೆ ಮೂಲದ ಪುರುಷನನ್ನು ವಿವಾಹವಾಗಲು ಮುಂದಾಗಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಪುಣೆ ಮೂಲದ ಸುಮಿತ್ ದಶರಥ್ ಪವಾರ್‍ನನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದಾಳೆ. ಚತ್ರಾ ಜಿಲ್ಲೆಯ ಇಟ್ಖೋರಿಯವಳಾದ ಮಹಿಳೆಗೆ ಪಾಸ್‍ಪೋರ್ಟ್ ನ ಅವಶ್ಯ ಎದುರಾಗಿದ್ದು, ಈ ವೇಳೆ ಬೇರೆ ದಾರಿ ಇಲ್ಲದೆ, ಜಾರ್ಖಂಡ್‍ನಿಂದ ಅರ್ಜಿ ಸಲ್ಲಿಸಿದ್ದಾಳೆ.
ಇದೆಲ್ಲ ನಡೆದ ಬಳಿಕ ಸುಮಿತ್ ತಾಯಿ ಖತರ್ನಾಕ್ ಮಹಿಳೆಯ ಮೊಬೈಲ್ ನೋಡಿದ್ದು, ಆಗ ಮಹಿಳೆ ತನ್ನ ಮಾಜಿ ಪತಿ ಅಮಿತ್ ಜೊತೆಗಿರುವ ಫೋಟೋಗಳು ಸಿಕ್ಕಿವೆ. ಸುಮಿತ್ ತಾಯಿಗೆ ಅನುಮಾನ ಬಂದಿದ್ದು, ಮಹಿಳೆಯನ್ನು ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಆಕೆಯ ವಿವಾಹದ ಸರಣಿ ಕುರಿತ ಸತ್ಯ ಬಯಲಾಗಿದೆ.
ಇದೀಗ ಪುಣೆ ಪೊಲೀಸರು ಚತ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಪಾಸ್‍ಪೋರ್ಟ್ ಕಚೇರಿಗೂ ಅವಿವಾಹಿತೆ ಎಂದು ಮಹಿಳೆ ತಪ್ಪು ಮಾಹಿತಿ ನೀಡಿದ್ದಾಳೆ.