ಬೆಂಗಳೂರು: ಕೊರೊನಾ ವಿರುದ್ಧ ಪಾಲಿಕೆ ಹೊಸ ಪ್ಲ್ಯಾನ್ ಮಾಡಿದ್ದು, ಇನ್ನೂ ಮುಂದೆ ಜನಸಂದಣಿ ಜಾಸ್ತಿ ಇರುವ ಕಡೆ ಕೊರೊನಾ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‌ಗಳಲ್ಲಿ ಕೊರೊನಾ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಕಬ್ಬನ್ ಪಾರ್ಕ್ ಮತ್ತು ಲಾಲ್‍ಬಾಗ್ ಗೇಟ್ ಬಳಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ, ದ್ವಿತೀಯ ಸಂಪರ್ಕ ಹಾಗೂ ಅನ್ಯ ರೋಗಗಳಿಗೆ ತುತ್ತಾದವರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ನೂರಾರು ಸಂಖ್ಯೆಯ ಜನ ಓಡಾಡುವ ಕಡೆಯೂ ಟೆಸ್ಟ್ ಮಾಡಲಾಗುತ್ತದೆ ಎಂದರು.
Advertisement
Advertisement
ಮಾಲ್‍ಗಳಲ್ಲಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಸೂಪರ್ ಮಾರ್ಕೆಟ್, ಮಾಲ್‍ನಲ್ಲಿ ನಿಯಮ ಉಲ್ಲಂಘನೆಯಾದರೆ ಮಾಲೀಕರೇ ಹೊಣೆಯಾಗುತ್ತಾರೆ. ಹೀಗಾಗಿ ಮಾಲ್ ಮಾಲೀಕರು, ಶಾಪ್‍ನ ಮಾಲೀಕರು ಕೊರೊನಾ ರೂಲ್ಸ್ ಪಾಲಿಸುವಂತೆ ಕಾಯಬೇಕು.
Advertisement
ಒಂದು ವೇಳೆ ಪದೇ ಪದೇ ನಿಯಮ ಉಲ್ಲಂಘಿಸಿದರೆ ಮಾಲ್ ಹಾಗೂ ಶಾಪನ್ನು ಕ್ಲೋಸ್ ಮಾಡಲು ಆದೇಶ ನೀಡಲಾಗುತ್ತದೆ. ಹೀಗಾಗಿ ಮಾಲ್‍ನಲ್ಲಿ ಸಾಮಾಜಿಕ ಅಂತರ ಕಾಯಲೇಬೇಕು. ಇಲ್ಲವಾದರೇ ದಂಡ ಹಾಕಲಾಗುತ್ತದೆ. 60 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳಗಿನ ಮಕ್ಕಳು ಮನೆಯಿಂದ ಹೊರಗೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದರು.
Advertisement
ಇನ್ನೂ ದುರ್ಗಾ ಪೂಜೆ ವೇಳೆ ಪ್ರತಿಮೆಯಿಡುವ ವೇಳೆಯೂ ಕ್ರಮ ವಹಿಸಲಾಗುತ್ತದೆ. ಮೈದಾನದಲ್ಲಿ ಕಾರ್ಯಕ್ರಮ ಮಾಡಿದರೂ ನಿಯಮ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾರ್ಯಕ್ರಮ ಆಯೋಜಕರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಓಪನ್ ಜಾಗದಲ್ಲಿ ಕಾರ್ಯಕ್ರಮ ಮಾಡುವುದಾದರೆ ಪಾಲಿಕೆ ನಿರ್ಧಾರ ಮಾಡಲಿದೆ. ಆರೋಗ್ಯ ಇಲಾಖೆಯು ಈ ಸಂಬಂಧ ಆದೇಶ ಹೊರಡಿಸಲಿದೆ ಎಂದು ನವರಾತ್ರಿ ವೇಳೆ ಜನಸಂದಣಿ ವಿಚಾರವಾಗಿ ಪ್ರತಿಕ್ರಿಯಿಸಿದರು.
ಟೆಸ್ಟಿಂಗ್ ಕೇಸ್‍ಗಳ ಸಂಖ್ಯೆ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದ್ದು, ನಿತ್ಯ 50 ಸಾವಿರ ಟೆಸ್ಟ್ ಮಾಡಲು ಚಿಂತನೆ ಮಾಡಲಾಗಿದೆ. ಸದ್ಯಕ್ಕೆ ನಿತ್ಯ 38 ಸಾವಿರ ಕೇಸ್ ಟೆಸ್ಟ್ ಆಗುತ್ತಿದೆ. ಅರದಲ್ಲಿ ಈಗ 5 ಸಾವಿರ ಕೇಸ್ ಬರುತ್ತಿದೆ. ಇನ್ನೂ ಶೇ.1.23 ಸಾವು ಆಗುತ್ತಿದೆ. ನಾವು ಸಾವಿನ ಪ್ರಮಾಣವನ್ನು ಶೇ.1 ರಷ್ಟು ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ಉಸಿರಾಟದ ತೊಂದರೆಯಾದಾಗ ಆಸ್ಪತ್ರೆಗೆ ಬಂದರೆ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.