ಬೆಂಗಳೂರು: ಇನ್ಮುಂದೆ ಅಂತರ್‌ಜಿಲ್ಲೆಗಳ ಮಧ್ಯೆ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹೇಗೆ ಪಾಸ್ ಅಗತ್ಯವಿಲ್ಲವೋ, ಅದೇ ರೀತಿ ಅಂತರ್‌ಜಿಲ್ಲೆಗಳ ನಡುವೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ಡಿಜಿಪಿ ಕರ್ನಾಟಕ ಟ್ವೀಟ್ ಮಾಡಿದೆ.
Pass is not required for inter district movement now. However keep your travel to bare essential. And don’t forget lockdown between 7 pm and 7 am.
— DGP KARNATAKA (@DgpKarnataka) May 20, 2020
Advertisement
ಲಾಕ್‍ಡೌನ್ 3 ಜಾರಿಯಾದಾಗ ಯಾವೆಲ್ಲ ಷರತ್ತುಗಳು ಇತ್ತೋ ಆ ಎಲ್ಲ ಷರತ್ತುಗಳು ಅನ್ವಯವಾಗುತ್ತದೆ. ಅಂದರೆ ಖಾಸಗಿ ವ್ಯಕ್ತಿಗಳು ಸೇವಾ ಸಿಂಧು ವೆಬ್‍ಸೈಟ್ ಮೂಲಕ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆದು ತೆರಳಬೇಕಾಗುತ್ತದೆ ಎಂಬ ನಿಯಮ ಈ ಹಿಂದೆ ಇತ್ತು. ಆದರೆ ಈ ನಿಯಮವನ್ನು ಈಗ ಕೈಬಿಡಲಾಗಿದ್ದು, ಅಂತರ್‌ಜಿಲ್ಲೆಗೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
Advertisement
Dear Sir,
Yes,kindly apply for passes from Seva Sindhu portal. If you are hiring a pvt vehicle kindly mention the details of driver & vehicle. Currently there is a limit of 2+1 commuters allowed if you are travelling by car.
Regards,
Vishwas H.K#Karnataka_covid_Warriors
— Neighbourhood Home-quarantine Watch & Care (NHWC) (@Home_Quarantine) May 18, 2020
Advertisement
ಈ ಹಿಂದಿನ ನಿಯಮದ ಪ್ರಕಾರ, ಸರ್ಕಾರಿ ನೌಕರರು, ಸಿಬ್ಬಂದಿಗೆ, ಕಂಪನಿಗಳ ಉದ್ಯೋಗಿಗಳಿಗೆ ಅಂತರ್‌ಜಿಲ್ಲಾ ಪಾಸ್ ಅಗತ್ಯವಿಲ್ಲ. ಈ ವ್ಯಕ್ತಿಗಳು ಪೊಲೀಸರಿಗೆ ಐಡಿ ಕಾರ್ಡ್ ತೋರಿಸಿದರೆ ಅನುಮತಿ ನೀಡಲಾಗುತ್ತದೆ. ಹಾಗೆಯೇ ಟ್ಯಾಕ್ಸಿ ಯಲ್ಲಿ ಚಾಲಕರೊಂದಿಗೆ ಇಬ್ಬರು, ಮ್ಯಾಕ್ಸಿ ಕ್ಯಾಬ್ ನಲ್ಲಿ ಮೂರು ಜನ ಮತ್ತು ಚಾಲಕರು ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಆದರೆ ಪ್ರಯಾಣಿಕರಿಗೆ ಪಾಸ್ ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೆ ಈಗ ಖಾಸಗಿ ವಾಹನದಲ್ಲಿ ಹೋಗುವವರಿಗೂ ಪಾಸ್ ಅಗತ್ಯವಿಲ್ಲ. ಆದರೆ ಲಾಕ್‍ಡೌನ್ ನಿಯಮವನ್ನು ಪಾಲಿಸಬೇಕು, ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಖಾಸಗಿ ವಾಹನಗಳು ಸಂಚರಿಸುವಂತಿಲ್ಲ ಎಂದು ತಿಳಿಸಿದೆ.