ಬೆಂಗಳೂರು: ಲಾಕ್‍ಡೌನ್ ಇರುವುದರಿಂದ ಸ್ಯಾಂಡಲ್‍ವುಡ್ ನಟ ಉಪೇಂದ್ರ ಅವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಅನೇಕರು ಉಪ್ಪಿ ಜೊತೆಗೆ ಕೈಜೋಡಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ಇನ್ಮುಂದೆ ಯಾವುದೇ ದಾನವನ್ನು ಸ್ವೀಕರಿಸುವುದಿಲ್ಲ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ರೈತರಿಂದ ತಾವೇ ಬೆಳೆಗಳನ್ನು ಖರೀದಿ ಮಾಡಿ ಅದನ್ನು ಅಗತ್ಯ ಇರುವವರಿಗೆ ಉಚಿತವಾಗಿ ಹಂಚುತ್ತಿದ್ದರು. ಉಪ್ಪಿ ಅವರ ಈ ಕಾರ್ಯಕ್ಕೆ ಮೆಚ್ಚಿದ ಅದೆಷ್ಟೋ ಜನ ರೈತರು, ಜನ ಸಾಮಾನ್ಯರು, ಉಚಿತವಾಗಿಯೇ ಹಣ್ಣು-ತರಕಾರಿ, ದಿನಸಿ, ಧನ ಸಹಾಯವನ್ನು ಮಾಡಿದ್ದಾರೆ.
Advertisement
Distribution of ration kit and vegetables at Heeranna gudde BSK 3rd stage ???? pic.twitter.com/zJrV3rzaRw
— Upendra (@nimmaupendra) June 4, 2021
Advertisement
ಇದೀಗ ಇದಕ್ಕೇ ಬ್ರೇಕ್ ಹಾಕಲು ನಟ ಉಪೇಂದ್ರ ಅವರ ಉಪ್ಪಿ ಫೌಂಡೇಶನ್ ನಿರ್ಧರಿಸಿದೆ. ಇನ್ಮೆಂದೆ ಯಾವುದೇ ದಾನವನ್ನು ಉಪ್ಪಿ ಫೌಂಡೇಶನ್ ಸ್ವೀಕರಿಸೋದಿಲ್ಲ ಎಂದು ಅಧಿಕೃತವಾಗಿ ಟ್ವೀಟ್ ಮೂಲಕ ತಿಳಿಸಿದೆ. ಸ್ವತಃ ಉಪೇಂದ್ರ ಅವರು ಈ ಟ್ವೀಟ್ ಮಾಡಿದ್ದು, ಎಲ್ಲರಿಗೂ ಕೈ ಜೋಡಿಸಿ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದನ್ನೂ ಓದಿ: ನೀವಿರುವಲ್ಲಿಗೇ ಬಂದು ಬೆಳೆ ಖರೀದಿಸುತ್ತೇನೆ- ಉಪೇಂದ್ರ
Advertisement
Advertisement
ಟ್ವೀಟ್ ನಲ್ಲಿ ಏನಿದೆ?
ಇಲ್ಲಿಯವರೆಗೂ ನಾವು ಯಾರನ್ನೂ ಏನೂ ಕೇಳದಿದ್ದರೂ ತುಂಬಾ ಹೃದಯವಂತರು ನಮ್ಮ ಮೂಲಕ ವಿತರಣೆಯಾಗಲೆಂದು ದಿನಸಿ ಹಣ್ಣು, ತರಕಾರಿ ಹೀಗೆ ಮುಂತಾದವುಗಳನ್ನು ಕೊಟ್ಟಿದ್ದಾರೆ. ನಮ್ಮ ಉಪ್ಪಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ಗೆ ಧನ ಸಹಾಯವನ್ನೂ ಮಾಡಿದ್ದಾರೆ. ಅವುಗಳೆಲ್ಲವನ್ನೂ ಸೂಕ್ತವಾಗಿ ಬೇರೆ ಬೇರೆ ಕಡೆ ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗಿದೆ, ಇನ್ನೂ ವಿತರಿಸಲಾಗುತ್ತದೆ ಸಹೃದಯತೆ ಮೆರೆದಂತಹ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ:ನಾನು ಮುಖ್ಯಮಂತ್ರಿ ಆಗ್ಬೇಕು, ನೀವು ನನ್ನ ಗೆಲ್ಲಿಸ್ತೀರಾ?: ಉಪೇಂದ್ರ
ಧನ್ಯವಾದಗಳು ???????????? pic.twitter.com/YvRHbxZHPE
— Upendra (@nimmaupendra) June 3, 2021
ಇನ್ನು ಮುಂದೆ ತಾವುಗಳು ಯಾರಿಗಾದರೂ ಸಹಾಯ ಮಾಡಬೇಕೆಂದರೆ ನಿಮ್ಮ ಸುತ್ತಮುತ್ತ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ನೀವೇ ನೇರವಾಗಿ ಸಹಾಯ ಮಾಡಿ. ನಾವು ಉಪ್ಪಿ ಫೌಂಡೇಶನ್‍ಗೆ ಹಣ ಮತ್ತು ಯಾವುದೇ ಕೊಡುಗೆಗಳನ್ನು ಮುಂದೆ ಸ್ವೀಕರಿಸುವುದನ್ನು ನಿಲ್ಲಿಸುತ್ತಿದ್ದೇವೆ. ಇಲ್ಲಿಯವರೆಗೂ ಉಪ್ಪಿ ಫೌಂಡೇಶನ್‍ಗೆ ಹಣ ಮತ್ತು ಯಾವುದೇ ಕೊಡುಗೆಗಳನ್ನು ಮುಂದೆ ಸ್ವೀಕರಿಸುವುದನ್ನು ನಿಲ್ಲಿಸುತ್ತಿದ್ದೇವೆ. ಇಲ್ಲಿಯವರೆಗೂ ಉಪ್ಪಿ ಫೌಂಡೇಶನ್‍ಗೆ ಉಪೇಂದ್ರರವರ ಹಣ, ನಿಮ್ಮೆಲ್ಲರಿಂದ ಬಂದಿರುವ ಹಣ, ಅದರ ಖರ್ಚು ಮತ್ತು ಎಲ್ಲಾ ಅಕೌಂಟ್ಸ್ ಸ್ಟೇಟ್ಮೆಂಟ್ ಮಾಹಿತಿಗಳನ್ನು ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.