– ಪೊಲೀಸರು ಏನ್ ಹೇಳಿದ್ರೂ ಡೋಂಟ್‍ಕೇರ್
ಬೆಂಗಳೂರು: ಕೊರೊನಾ ಪ್ರಕರಣಗಳ ಪತ್ತೆ ದಿನೇ ದಿನೇ ಏರುತ್ತಿದ್ದರೂ ಪಾದರಾಯನಪುರದ ಜನ ಕ್ಯಾರೇ ಅಂತಿಲ್ಲ. ಭಯವಿಲ್ಲದೇ ಓಡಾಟ ಮಾಡುವ ಮೂಲಕ ಜನ ಇನ್ನೂ ಬುದ್ಧಿ ಕಲಿತಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.
ಪಾದರಾಯನಪುರ ಪ್ರದೇಶದಲ್ಲಿ ತಳ್ಳೋ ಗಾಡಿ, ಬೈಕ್ ಹಾಗೂ ಆಟೋಗಳು ಸುಖಾ ಸುಮ್ಮನೆ ಸಂಚಾರ ಮಾಡುತ್ತಿವೆ. ಪೊಲೀಸರು ಏನು ವಾರ್ನಿಂಗ್ ಕೊಟ್ಟರೂ ಜನ ಕಿವಿಗೊಡುತ್ತಿಲ್ಲ. ಸೀಲ್‍ಡೌನ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರೂ ಪಿಪಿಇ ಕಿಟ್ ಧರಿಸುತ್ತಿಲ್ಲ.
ಇಷ್ಟು ಮಾತ್ರವಲ್ಲದೆ ಮೇ 24 ರಂದು ರಂಜಾನ್ ಹಬ್ಬ ಇದೆ. ರಂಜಾನ್ ಮುಗಿಯುವವರೆಗೂ ಟೆಸ್ಟ್ ಗೆ ಬರಲ್ಲ. ಉಪವಾಸ, ಜಾಗಣೆ ಆಚರಣೆಗಳಿವೆ. ಹೀಗಾಗಿ ರ್‍ಯಾಂಡಮ್ ಟೆಸ್ಟ್ ಗೆ ಸಹಕರಿಸಲ್ಲ. ಹಬ್ಬ ಮುಗಿಯೇ ಪರೀಕ್ಷೆಗೆ ಬರುತ್ತೇವೆ ಎಂದು ಜನ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇತ್ತ ದಿನೇ ದಿನೇ ರ್‍ಯಾಂಡಮ್ ಟೆಸ್ಟ್ ಗೆ ಬರುವವರ ಸಂಖ್ಯೆಯೂ ಇಳಿಕೆಯಾಗಿದೆ. ಕಳೆದ ಬಾರಿ ಹೋಟೆಲ್ ಕ್ವಾರಂಟೈನ್ ಗೆ ಕಿರಿಕ್ ಆಗಿತ್ತು. ಹೀಗಾಗಿ ಬಲವಂತವಾಗಿ ಕರೆ ತರುವುದು ಬೇಡ ಎಂದು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಬ್ಬ ಮುಗಿಯುವಷ್ಟರಲ್ಲಿ ಮತ್ತಷ್ಟು ಪಾಸಿಟಿವ್ ಪತ್ತೆಯಾಗಬಹುದು ಎಂಬ ಆತಂಕ ಹುಟ್ಟಿದೆ.