ನವದೆಹಲಿ: ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಖಂಡಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಕಚೇರಿವರೆಗೆ ಸೈಕಲ್‍ನಲ್ಲಿ ಬಂದಿದ್ದಾರೆ. ಬೆಲೆ ಕಡಿಮೆಯಾಗುವವರೆಗೆ ಕಚೇರಿಗೆ ಸೈಕಲ್‍ನಲ್ಲೇ ಬರುತ್ತೇನೆ ಎಂದು ಹೇಳುವ .
ದೇಶದಲ್ಲಿ ಪೆಟ್ರೋಲ್‍ಬೆಲೆ ಏರಿಕೆ ಕುರಿತಾಗಿ ವ್ಯಾಪಕ ಖಂಡನೆ ಹಿನ್ನಲೆ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್ ವಾದ್ರಾ ಕೂಡಾ ತೈಲ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ದೆಹಲಿಯ ಖಾನ್ ಮಾರ್ಕೆಟ್‍ನಿಂದ ತಮ್ಮ ಕಚೇರಿಗೆ ಸೈಕಲ್‍ನಲ್ಲಿ ಬಂದಿದ್ದಾರೆ.
ಜನರು ಹೇಗೆ ಬಳಲುತ್ತಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ಎಸಿ ಕಾರಿನಿಂದ ಹೊರಬಂದು ನೋಡಬೇಕು. ಆಗ ಬಹುಶಃ ಇಂಧನ ಬೆಲೆಯನ್ನು ಕಡಿಮೆ ಮಾಡಬಹುದು. ಎಲ್ಲದಕ್ಕೂ ಬೇರೆಯವರನ್ನು ದೋಷಿಸಿ ಮುಂದೆ ಸಾಗುತ್ತಾರೆ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ
#PetrolDieselPriceHike pic.twitter.com/VOZ8ykzzRS
— Robert Vadra (@irobertvadra) February 20, 2021
ಇಂಧನ ಬೆಲೆ ಕಡಿಮೆಯಾಗುವ ವರೆಗೂ ನಾನೂ ಸೈಕಲ್‍ನಲ್ಲೇ ಕಚೇರಿಗೆ ಹೋಗುತ್ತೇನೆ. ಇದು ಅಚ್ಚೇ ದಿನ್ ಅಲ್ಲ, ಇದು ಖಂಡಿತಾ ದುಬಾರಿ ದಿನ. ಸರ್ಕಾರ ಜನರು ಎದುರಿಸುತ್ತಿರೋ ಸಮಸ್ಯೆ ಕಡೆ ಗಮನ ಕೊಡಬೇಕು ಎಂದು ಟ್ವಿಟರ್‍ನಲ್ಲಿ ರಾಬರ್ಟ್ ವಾದ್ರಾ ಬರೆದುಕೊಂಡಿದ್ದಾರೆ.