ಇದನ್ನು ನೋಡಿ ಸುಮ್ಮನಿರೋಕೆ ಸಾಧ್ಯವಿಲ್ಲ – ಟ್ರೋಲ್ ಪೇಜ್‍ಗಳ ವಿರುದ್ಧ ಶೀತಲ್ ಶೆಟ್ಟಿ ಗರಂ

Public TV
2 Min Read
Sheetal Shetty

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ದೇಹಗಳನ್ನು ಕುರಿತಾಗಿ ಟ್ರೋಲ್ ಮಾಡುತ್ತಿರುವ ಅಶ್ಲೀಲ ಪೋಸ್ಟ್‌ಗಳ ವಿರುದ್ಧ ನಟಿ ಸೀತಲ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

sheetal shetty 1

 

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜ್‍ಗಳ ಆರ್ಭಟ ಜೋರಾಗಿದೆ. ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಮನರಂಜನೆ ನೀಡುತ್ತವೆ ಎಂದು ಅಶ್ಲೀಲತೆಯನ್ನು ಸಮಾಜಕ್ಕೆ ಸಾರುತ್ತಿರುವವ ವಿರುದ್ಧವಾಗಿ ಶೀತಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

Sheetal Shetty 1

ಟ್ವೀಟ್‍ನಲ್ಲಿ ಏನಿದೆ?
ನನ್ನ ಕನ್ನಡತಾಯಿ ನನಗೆ ಬೇರೆಯವರನ್ನು ದ್ವೇಷಿಸಲು ಕಲಿಸಿಲ್ಲ. ನನ್ನ ಕನ್ನಡನಾಡಲ್ಲಿ ಹೆಣ್ಣನ್ನು ಅಸಹ್ಯವಾಗಿ ಬಿಂಬಿಸುವ ಪರಿಪಾಠ ಇಲ್ಲ. ದಯವಿಟ್ಟು ಇವುಗಳಿಗೆ ಕನ್ನಡಮ್ಮನ ಅಭಿಮಾನದ ಹೆಸರು ತರಬೇಡಿ. ನಾನು ಒಬ್ಬರ ಬಗ್ಗೆ ನಾನು ಮಾತಾಡ್ತಿರೋದಲ್ಲ. ನಮ್ಮೆಲ್ಲರ ಪರವಾಗಿ ಮಾತಾಡ್ತಿರೋದು. ಟ್ರೋಲ್ ಪೇಜ್‍ಗಳನ್ನು ನಾನು ಫಾಲೋ ಮಾಡ್ತೀನಿ. ಕ್ರಿಯೇಟಿವ್ ಆಗಿರೋ, ಮಜವಾಗಿರೋ ಮೀಮ್‍ಗಳನ್ನು ಎಂಜಾಯ್ ಮಾಡುತ್ತೇನೆ. ಆದರೆ ಇದು ಕ್ರಿಯೇಟಿವಿಟಿ ಅಲ್ಲ. ಇದನ್ನು ನೋಡಿ ಸುಮ್ಮನಿರೋಕೆ ಸಾಧ್ಯವಿಲ್ಲ. ದಯವಿಟ್ಟು ಇವುಗಳನ್ನು ನೋಡಿ ಎಂಜಾಯ್ ಮಾಡ್ಬೇಡಿ. ಇದು ಸಮಾಜಕ್ಕೆ ಮಾರಕ. ಇಂಥವುಗಳನ್ನು ಕಂಡಾಗ ಖಂಡಿಸಿ. ನಮ್ಮ ನಾಡಿನ ಸ್ವಾಸ್ಥ್ಯ ಕಾಪಾಡಿ. ನನ್ನ ಬೇಸರ ಟ್ರೋಲ್ ಪೇಜ್‍ಗಳ ವಿರುದ್ಧ ಅಲ್ಲ ಎಂದು ಶೀತಲ್ ಶೆಟ್ಟಿ ಪೋಸ್ಟ್ ಮಾಡಿ ಕೆಲವು ಫೋಟೋಗಳನ್ನು ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಏನೂ ಆಗಬೇಕಾಗಿದ್ದಿಲ್ಲ. ಆದರೆ ಇದು ನನ್ನ ಜಾತಿಗೆ ಸಂಬಂಧಿಸಿದ್ದು. ಹೆಣ್ಣಾಗಿ ನನಗೆ ಸಹಿಸಲು ಆಗದೇ ಇರುವಂಥದ್ದು. ನನ್ನಂತೆ ಇದನ್ನು ಓದಿದ, ಇಲ್ಲಿಯವರೆಗೆ ನೋಡಿಕೊಂಡು ಬಂದಿರೋ ಎಲ್ಲ ಹೆಣ್ಣುಮಕ್ಕಳಿಗೂ ಸಹಿಸೋಕೆ ಸಾಧ್ಯವಾಗಿರೋದಿಲ್ಲ. ಅದಕ್ಕೇ ಮಾತಾಡೋ ಧೈರ್ಯ ಮಾಡಿದ್ದೇನೆ ಎಂದು ಶೀತಲ್ ಬರೆದುಕೊಂಡಿದ್ದಾರೆ.

ತನ್ನ ಆಯ್ಕೆಗಳನ್ನು ದಿಟ್ಟತನದಿಂದ ಮಾಡಿಕೊಂಡು ಮುಂದೆ ಹೋಗುತ್ತಿರುವ ಯಾರೋ ಹೆತ್ತ ಹೆಣ್ಣು ಮಕ್ಕಳಿಗೆ, ಬಟಾ ಬಹಿರಂಗವಾಗಿ ಡಗಾರ್, ಸೂ** ಎನ್ನುತ್ತ, ದೈಹಿಕವಾಗಿ ಅವರನ್ನು ಅವಮಾನ ಮಾಡುತ್ತಿರುವ ಕೆಟ್ಟ ಹುಂಬ ಮನಸ್ಥಿತಿಗಳಿಗೆ, ಹಾಗೇ ಅದನ್ನು ಎಂಜಾಯ್ ಮಾಡುತ್ತಿರುವ ಮನಸ್ಥಿತಿಗಳಿಗೂ ನನ್ನದೊಂದು ಧಿಕ್ಕಾರ. ನಾಳೆಯಿಂದ ಈ ಮನಸ್ಥಿತಿಗಳು ನನ್ನನ್ನು ಹೇಗೆ ಕಾಡಬಹುದು ಅನ್ನೋ ಅರಿವಿದ್ದರೂ ನಂಗ್ಯಾಕೋ ಸುಮ್ಮನಿರಲು ಮನಸಾಗುತ್ತಿಲ್ಲ. ಬನ್ನಿ ನೋಡ್ಕೊಳ್ಳೋಣ. ಇಂಥ ಮನಸ್ಥಿತಿಗಳ ಮನೆಯಲ್ಲಿರುವ ಹೆಣ್ಣುಮಕ್ಕಳ ಮೇಲೆ ನನಗೆ ಅನುಕಂಪವಿದೆ ಎಂದು ಶೀತಲ್ ಪೋಸ್ಟ್ ಮಾಡಿದ್ದಾರೆ.

Sheetal Shetty Car E

ಶೀತಲ್ ಶೆಟ್ಟಿ ಅವರಿಗೆ ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ. ಪ್ರಸ್ತುತವಾಗಿ ಬಿಗ್‍ಬಾಸ್ ಸ್ಫರ್ಧಿಗಳ ನಟಿ ಮಣಿಯರ ಕುರಿತಾಗಿ ಕೀಳುಮಟ್ಟದ ಪೋಸ್ಟ್ ಗಳನ್ನು ಮಾಡಲಾಗುತ್ತಿದೆ. ಈ ಸ್ಕ್ರೀನ್ ಶಾಟ್‍ಗಳ ವಿರುದ್ಧವಾಗಿ ಶೀತಲ್ ಖಂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *