-ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು
ಮುಂಬೈ: ಬಾಲಿವುಡ್ ನಟಿ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಎನ್‍ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಮತ್ತು ಬರಿಸುವ ವಸ್ತುಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈಗಾಗಲೇ ಇಡಿಯಲ್ಲಿ ರಿಯಾ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ವಿಚಾರಣೆಯನ್ನು ಸಹ ಎದುರಿಸಿದ್ದಾರೆ. ಇಡಿ ಅಧಿಕಾರಿಗಳು ಡ್ರಗ್ಸ್ ಡೀಲರ್ ಜೊತೆ ರಿಯಾ ಸಂಪರ್ಕ ಹೊಂದಿರೋದನ್ನ ಪತ್ತೆ ಮಾಡಿದ್ದರು. ಈ ಹಿನ್ನೆಲೆ ಸುಶಾಂತ್ ಮತ್ತು ರಿಯಾ ನಡೆಸಿದ್ದ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್ ಫೋಟೋಗಳನ್ನ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಗೆ ವರ್ಗಾಯಿಸಿದ್ದರು. ಇಡಿ ಕಳುಹಿಸಿದ ದಾಖಲೆಗಳನ್ವಯ ಎನ್‍ಸಿಬಿ ಪ್ರಕರಣ ದಾಖಲಿಸಿಕೊಂಡಿದೆ.
Advertisement
Narcotics Control Bureau registers a case against Rhea Chakraborty and others in #SushantSinghRajput's death https://t.co/oNs6L0KEnE
— ANI (@ANI) August 26, 2020
Advertisement
ರಿಯಾರನ್ನ ವಿಚಾರಣೆಗೆ ಒಳಪಡಿಸಿದ್ದಾಗ ಇಡಿ ಅಧಿಕಾರಿಗಳ ನಾಲ್ಕು ಮೊಬೈಲ್, ಒಂದು ಐಪ್ಯಾಡ್ ಮತ್ತು ಲ್ಯಾಪ್‍ಟಾಪ್ ವಶಕ್ಕೆ ಪಡೆದುಕೊಂಡಿದ್ದರು. ನಾಲ್ಕು ಮೊಬೈಲ್ ಗಳಲ್ಲಿ ರಿಯಾ ಬಳಸುತ್ತಿದ್ದ ಎರಡು ಸೆಟ್ ಗಳಿದ್ದವು. ಮೊಬೈಲ್ ಗಳನ್ನು ಫೊರೆನಿಕ್ಸ್ ಲ್ಯಾಬ್ ಗೆ ಕಳುಹಿಸಿದ್ದಾಗ ರಿಯಾ ಮತ್ತು ಸುಶಾಂತ್ ನಡುವಿನ ಚಾಟ್ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡಿದ್ದವು. ಹೀಗಾಗಿ ಎನ್‍ಸಿಗೆ ಇಡಿ ಸುಧೀರ್ಘವಾದ ಪತ್ರ ಬರೆದು ಪ್ರಕರಣದ ಮಾಹಿತಿ ನೀಡಿತ್ತು. ಪತ್ರದಲ್ಲಿ ಎಂಡಿಎಂಎ ಡ್ರಗ್ಸ್, ಗಾಂಜಾ, ಎಲ್‍ಸಿಡಿ ಡ್ರಗ್ ಹೆಸರುಗಳನ್ನು ಇಡಿ ಉಲ್ಲೇಖಿಸಿತ್ತು. ಇದರ ಜೊತೆ ರಿಯಾ ವ್ಯವಹರಿಸುತ್ತಿದ್ದ ಕೆಲ ಡ್ರಗ್ ಡೀಲರ್ ಗಳ ಮೊಬೈಲ್ ನಂಬರ್ ಸಹ ನೀಡಿತ್ತು. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ
Advertisement
Advertisement
ರಿಯಾ ನಡೆಸಿದ ಚಾಟ್ ನಲ್ಲಿ ಚಹಾ ಅಥವಾ ಕಾಫಿ ಅಥವಾ ನೀರಿನಲ್ಲಿ ಒಂದೆರಡು ಹನಿ (ದ್ರವ ರೂಪದ ಡ್ರಗ್) ಸೇರಿಸಿ. 30 ರಿಂದ 40 ನಿಮಿಷದಲ್ಲಿ ಅದು ತನ್ನ ಕೆಲಸ ಆರಂಭಿಸುತ್ತದೆ ಎಂಬ ಸಂದೇಶ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸುಶಾಂತ್ ಸೇವಿಸುತ್ತಿದ್ದ ಪಾನೀಯಗಳಲ್ಲಿ ರಿಯಾ ಮಾದಕ ವಸ್ತು ಬೆರೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್ ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್
ಸುಶಾಂತ್ ಪ್ರಕರಣ- ಸಿಬಿಐನಿಂದ ಘಟನೆಯ ಮರುಸೃಷ್ಟಿhttps://t.co/rlBouOVJ8c#SushantSinghRajput #CBIInMumbai
— PublicTV (@publictvnews) August 23, 2020