ಮೈಸೂರು: ಶಾಸಕ ಜಮೀರ್ ಗೆ ಬೇಕಾದಷ್ಟು ವ್ಯವಹಾರ ಇದೆ. ಅವರು ಬ್ಯುಸಿನೆಸ್ ಕ್ಲಾಸ್ ಜನ. ಅವರೇನೂ ನನ್ನ ರೀತಿ ಹಳ್ಳಿಯಲ್ಲಿ ಇರುವ ಶಾಸಕರಲ್ಲ. ಹೀಗಾಗಿ ವ್ಯವಹಾರದ ವ್ಯತ್ಯಾಸಗಳ ಬಗ್ಗೆ ಅನುಮಾನ ಬಂದು ಇಂತಹ ದಾಳಿ ನಡೆದಿರುತ್ತದೆ ಎಂದರು.
ಶಾಸಕರ ಮನೆ, ಕಚೇರಿ ಮೇಲೆ ಐಟಿ, ಇಡಿ ದಾಳಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಐಟಿ, ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಕಾಂಗ್ರೆಸ್ ಅಂತಾ ಹೇಳೋದು ಸರಿಯಲ್ಲ. ಸಿದ್ದರಾಮಯ್ಯ ನಂತವರು ಈ ರೀತಿ ಹೇಳುವುದು ತಪ್ಪು. ಕಾಂಗ್ರೆಸ್ ನವರು ಅವರ ಆಡಳಿತ ಕಾಲದಲ್ಲಿ ಐಟಿ- ಇಡಿ ಗಳನ್ನು ದುರುಪಯೋಗ ಪಡಿಸಿ ಕೊಂಡಿರಬಹುದು. ಇವತ್ತು ಅದೇ ಆಗುತ್ತಿದೆ ಎಂದು ಅವರು ಅಂದು ಕೊಂಡಿದ್ದಾರೆ ಎಂದು ಹೇಳಿದರು.
Advertisement
Advertisement
ವ್ಯವಹಾರದ ಲೆಕ್ಕ ಪತ್ರಗಳಲ್ಲಿ ಅನುಮಾನ ಬಂದಾಗ ಈ ರೀತಿ ದಾಳಿ ಸಹಜ. ದಾಳಿಯೆ ತಪ್ಪು ಎಂದರೇ ಹೇಗೇ ಹೇಳಿ? ಸ್ವಾಯತ್ತ ಸಂಸ್ಥೆಗಳು ಅವರ ಕೆಲಸ ಅವರು ಮಾಡಬಾರದಾ? ಇದು ರಾಜಕೀಯ ದಾಳಿಯಲ್ಲ. ಲೆಕ್ಕದ ಅನುಮಾನ ಇದ್ದಾಗ ಪರಿಶೀಲನೆಗೆ ಬಂದಿರುತ್ತಾರೆ. ಜಮೀರ್ ಲೆಕ್ಕ ಪತ್ರ ಸರಿ ಇಟ್ಟು ಕೊಂಡಿದ್ದಾರೆ ಅದನ್ನು ತೋರಿಸುತ್ತಾರೆ ಅಷ್ಟೆ. ಇದಕ್ಕೆ ಬೇರೆ ರೀತಿಯ ಬಣ್ಣ ಬೇಡ ಎಂದು ಹೇಳಿದರು.