– ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡದ ಅಧಿಕಾರಿಗಳು
– ವಾರ್ಡ್ ಸಹ ಸೀಲ್‍ಡೌನ್ ಮಾಡಿಲ್ಲ
ಬೆಂಗಳೂರು: ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಆತಂಕ ಹೆಚ್ಚಿದ್ದು, ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ(ಗೈನಾಕಾಲಾಜಿಸ್ಟ್)ಗೆ ಕೊರೊನಾ ಸೋಂಕು ದೃಢವಾಗಿದೆ.
ಇಎಸ್‍ಐ ಆಸ್ಪತ್ರೆಯ ಸ್ತ್ರೀ ರೋಗ ವಿಭಾಗದ ಎಚ್‍ಒಡಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಭಾರೀ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ದಿನಕ್ಕೆ ನೂರು ಜನ ಗರ್ಭಿಣಿಯರು ಇಲ್ಲಿಗೆ ಬರುತ್ತಾರೆ. ಗೈನಾಕಾಲಾಜಿಸ್ಟ್ ಗುರುವಾರದವರೆಗೆ ಕರ್ತವ್ಯಕ್ಕೆ ಬಂದಿದ್ದರು. ಅಲ್ಲದೆ ಒಪಿಡಿಯಲ್ಲಿ ಬರುವ ಗರ್ಭಿಣಿ ಯರನ್ನು ಎರಡು ದಿನ ನೋಡಿಕೊಂಡಿದ್ದಾರೆ. ಕಷ್ಟಕರವಾದ ಸಿಜರಿಯೆನ್ ಪ್ರಕಣಗಳನ್ನು ಸಹ ನಿಭಾಯಿಸಿದ್ದಾರೆ. ಗರ್ಭಿಣಿಯರ ವಾರ್ಡ್ ಗಳಿಗೂ ಹೆಚ್‍ಓಡಿ ಭೇಟಿ ನೀಡಿದ್ದಾರೆ.
ಪ್ರಾಧ್ಯಾಪಕಿ ಆಗಿರುವ ಕಾರಣ ಎಂಬಿಬಿಎಸ್ ವಿದ್ಯಾರ್ಥಿ ಗಳಿಗೆ ಪಾಠ ಸಹ ಮಾಡಿದ್ದಾರೆ. ಹೀಗಾಗಿ ಇಡೀ ರಾಜಾಜಿನಗರ ಇಎಸ್‍ಐ ಗೆ ಬಂದ ಗರ್ಭಿಣಿಯರಿಗೆ ಆತಂತ ಎದುರಾಗಿದೆ. ಎಚ್‍ಒಡಿಗೆ ಕೊರೊನಾ ತಗುಲುವ ಮೂಲಕ ರಾಜಾಜಿ ನಗರ ಇಎಸ್ ಐ ಆಸ್ಪತ್ರೆ ಕೊರೊನಾ ಹಬ್ ಆಗಿ ಮಾರ್ಪಟ್ಟಿದೆ.
ಇತ್ತೀಚೆಗೆ ಡೀನ್ ಕಚೇರಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಯುವಕನಿಗೆ ಹಾಗೂ ಮಕ್ಕಳ ವಿಭಾಗದಲ್ಲಿ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ಗೈನಾಕಾಲಾಜಿಸ್ಟ್ ವಿಭಾಗದ ಮುಖ್ಯಸ್ಥೆಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೂ ಗೈನಾಕಾಲಾಜಿಸ್ಟ್ ವಾರ್ಡ್‍ನ್ನು ಈ ವರೆಗೆ ಸೀಲ್‍ಡೌನ್ ಮಾಡಿಲ್ಲ. ಅವರ ಸಂಪರ್ಕದಲ್ಲಿದ್ದ ವೈದ್ಯರನ್ನು ಕ್ವಾರಂಟೈನ್ ಮಾಡಲು ಸೂಚಿಸಿಲ್ಲ. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿಗೆ ಡವ ಡವ ಶುರುವಾಗಿದೆ.